ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತ್ರಿಕೋನ ಸರಣಿಗೆ ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ಹಿರಿಯ ಆಟಗಾರರು ಅಲಭ್ಯ

Tri-Series: ದಿ ಹಂಡ್ರೆಡ್‌ ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ಪ್ರತಿನಿಧಿಸಲು ಸಿದ್ಧರಾಗಿರುವ ವಿಲಿಯಮ್ಸನ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಲಾಕಿ ಫರ್ಗುಸನ್ ಕೆಲಸದ ಹೊರೆ ನಿರ್ವಹಿಸಲು ವಿಶ್ರಾಂತಿ ಪಡೆದಿದ್ದು,ಕೈಲ್ ಜೇಮಿಸನ್ ಮೊದಲ ಮಗುವಿನ ನಿರೀಕ್ಷೆಯಿಂದ ಅಲಭ್ಯರಾಗಿದ್ದಾರೆ. ಡೆವೋನ್‌ ಕಾನ್ವೆಯನ್ನು ಆಯ್ಕೆ ಪರಿಗಣಿಸಲಾಗಿಲ್ಲ.

ತ್ರಿಕೋನ ಸರಣಿಗೆ ಕಿವೀಸ್‌ ತಂಡ ಪ್ರಕಟ; ಹಿರಿಯ ಆಟಗಾರರು ಅಲಭ್ಯ

Profile Abhilash BC Jun 27, 2025 11:04 AM

ಆಕ್ಲೆಂಡ್‌: ಮುಂದಿನ ತಿಂಗಳು ಜಿಂಬಾಬ್ವೆಯಲ್ಲಿ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ(Tri-Series) ನ್ಯೂಜಿಲ್ಯಾಂಡ್‌ 15 ಸದಸ್ಯರ ತಂಡವನ್ನು(New Zealand squad) ಪ್ರಕಟಿಸಿದೆ. ತಂಡದಲ್ಲಿ ಹಲವು ಅಚ್ಚರಿಯ ಆಯ್ಕೆಗಳು ಕಂಡುಬಂದಿದೆ. ಮಿಚೆಲ್ ಸ್ಯಾಂಟ್ನರ್(Mitch Santner) ತಂಡ ಮುನ್ನಡೆಸಲಿದ್ದು, ವೈಯಕ್ತಿಕ ಕಾರಣಗಳಿಂದ ಕೇನ್ ವಿಲಿಯಮ್ಸನ್(Kane Williamson) ಮತ್ತು ಕೈಲ್ ಜೇಮಿಸನ್ ಅಲಭ್ಯರಾಗಿದ್ದಾರೆ. ಗುರುವಾರವಷ್ಟೇ ದಕ್ಷಿಣ ಆಫ್ರಿಕಾ ತನ್ನ ತಂಡವನ್ನು ಪ್ರಕಟಿಸಿತ್ತು. ಇದೀಗ ಕಿವೀಸ್‌ ಕೂಡ ತನ್ನ ತಂಡವನ್ನು ಅಂತಿಮಗೊಳಿಸಿದೆ. ಆತಿಥೇಯ ಜಿಂಬಾಬ್ವೆ ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ.

ಪಾದದ ಶಸ್ತ್ರಚಿಕಿತ್ಸೆಯ ನಂತರ ಆಡಮ್ ಮಿಲ್ನೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಅನ್‌ಕ್ಯಾಪ್ಡ್‌ ಆಟಗಾರ ಬೆವೊನ್ ಜೇಕಬ್ಸ್ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಸರಣಿಯಲ್ಲಿ ಅವರು ಪದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧದ T20I ಸರಣಿಗೆ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ದೇಶೀಯ ಟೂರ್ನಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿರುವ 22 ವರ್ಷದ ಜಾಕೋಬ್ಸ್, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ.



ದಿ ಹಂಡ್ರೆಡ್‌ ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ಪ್ರತಿನಿಧಿಸಲು ಸಿದ್ಧರಾಗಿರುವ ವಿಲಿಯಮ್ಸನ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಲಾಕಿ ಫರ್ಗುಸನ್ ಕೆಲಸದ ಹೊರೆ ನಿರ್ವಹಿಸಲು ವಿಶ್ರಾಂತಿ ಪಡೆದಿದ್ದು,ಕೈಲ್ ಜೇಮಿಸನ್ ಮೊದಲ ಮಗುವಿನ ನಿರೀಕ್ಷೆಯಿಂದ ಅಲಭ್ಯರಾಗಿದ್ದಾರೆ. ಡೆವೋನ್‌ ಕಾನ್ವೆಯನ್ನು ಆಯ್ಕೆ ಪರಿಗಣಿಸಲಾಗಿಲ್ಲ.

ನ್ಯೂಜಿಲೆಂಡ್ ತಂಡ

ಮಿಚೆಲ್‌ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜಾಕೋಬ್ಸ್, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ವಿಲ್ ಒ'ರೂರ್ಕ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ.