Vishwavani Editorial: ಸಮರ್ಥನೆಯನ್ನು ನೀಡಲಿ
ಒಂದು ಕಾಲಕ್ಕೆ ಕುತೂಹಲವನ್ನು ಕಟ್ಟಿಕೊಡುತ್ತಿದ್ದ ಹಾಗೂ ದೇಶಸ್ಥರಲ್ಲಿ ರಾಜಕೀಯ ಪ್ರಜ್ಞೆಯು ಮತ್ತಷ್ಟು ಗಟ್ಟಿಯಾಗುವುದಕ್ಕೆ ಕಾರಣವಾಗುತ್ತಿದ್ದ ಬಜೆಟ್ ಮಂಡನೆಯ ಒಂದಿಡೀ ಸಂದರ್ಭ ಹಾಗೂ ತರುವಾಯದ ಚರ್ಚೆಗಳು ರಾಜಕೀಯ ಕೆಸರೆರಚಾಟದ ಕಾರ್ಯಾಗಾರ ಗಳಾಗು ತ್ತಿವೆಯೇ ಎಂಬ ಗ್ರಹಿಕೆ ಕೆಲವರಲ್ಲಿ ಮೂಡಿದರೆ ಅದೇನೂ ಅಚ್ಚರಿಯಲ್ಲ. ‘ರಾಯಚೂರಿಗೆ ಏಮ್ಸ್ ಬಾರದಿರಲು ಬಿಜೆಪಿಯೇ ಕಾರಣ’ ಎಂಬ ರಾಜ್ಯದ ಹಿರಿಯ ಕಾಂಗ್ರೆಸ್ಸಿಗರೊಬ್ಬರ ಆರೋಪ ವನ್ನೇ ಉದಾಹರಣೆಯಾಗಿ ತೆಗೆದು ಕೊಳ್ಳೋಣ


ಕೇಂದ್ರ ಸರಕಾರದ ವತಿಯಿಂದ ಬಜೆಟ್ ಮಂಡನೆಯಾಗುತ್ತಿದ್ದಂತೆ, ಅದೊಂದು ಸಂಪ್ರದಾಯವೋ ಎಂಬ ರೀತಿಯಲ್ಲಿ ರಾಜಕೀಯ ಎದುರಾಳಿಗಳು ಬಜೆಟ್‌ನ ಪ್ರಸ್ತಾವಿತ ಅಂಶಗಳಲ್ಲಿ ಅಡಗಿಕೊಂಡಿರ ಬಹುದಾದ ಹುಳುಕುಗಳನ್ನು ಹೆಕ್ಕಿ ಹೆಕ್ಕಿ ಹೊರ ತೆಗೆದು, ಟೀಕಾಪ್ರಹಾರಕ್ಕೆ ಮುಂದಾಗುವುದುಂಟು. ನಿಜ, ಆಳುಗರು ಮುಂದುಮಾಡಿದ ಯಾವುದೇ ಪ್ರಸ್ತಾವನೆಯನ್ನು ಕಣ್ಣುಮುಚ್ಚಿಕೊಂಡು ಸ್ವೀಕರಿಸಿ ಬಿಡಬೇಕು ಎಂದೇನಿಲ್ಲ; ಟೀಕೆ-ಟಿಪ್ಪಣಿಗಳಿಗೆ ಹಾಗೂ ಅಭಿಪ್ರಾಯ ಮಂಡನೆಗೆ ಅವಕಾಶವಿದ್ದಾಗ ಮಾತ್ರವೇ ಇಂಥ ಯಾವುದೇ ಪ್ರಸ್ತುತಿಗೆ ಪರಿಪೂರ್ಣತೆ ಸಿಗುವುದು. ಆಳುಗರು ತಾವು ಮಾಡಿರಬಹು ದಾದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಕೂಡ ಈ ಪರಿಪಾಠ ಅನುವು ಮಾಡಿ ಕೊಡುತ್ತದೆ ಎನ್ನಿ.
ಆದರೆ, ಒಂದು ಕಾಲಕ್ಕೆ ಕುತೂಹಲವನ್ನು ಕಟ್ಟಿಕೊಡುತ್ತಿದ್ದ ಹಾಗೂ ದೇಶಸ್ಥರಲ್ಲಿ ರಾಜಕೀಯ ಪ್ರಜ್ಞೆಯು ಮತ್ತಷ್ಟು ಗಟ್ಟಿಯಾಗುವುದಕ್ಕೆ ಕಾರಣವಾಗುತ್ತಿದ್ದ ಬಜೆಟ್ ಮಂಡನೆಯ ಒಂದಿಡೀ ಸಂದರ್ಭ ಹಾಗೂ ತರುವಾಯದ ಚರ್ಚೆಗಳು ರಾಜಕೀಯ ಕೆಸರೆರಚಾಟದ ಕಾರ್ಯಾಗಾರ ಗಳಾಗು ತ್ತಿವೆಯೇ ಎಂಬ ಗ್ರಹಿಕೆ ಕೆಲವರಲ್ಲಿ ಮೂಡಿದರೆ ಅದೇನೂ ಅಚ್ಚರಿಯಲ್ಲ. ‘ರಾಯಚೂರಿಗೆ ಏಮ್ಸ್ ಬಾರದಿರಲು ಬಿಜೆಪಿಯೇ ಕಾರಣ’ ಎಂಬ ರಾಜ್ಯದ ಹಿರಿಯ ಕಾಂಗ್ರೆಸ್ಸಿಗರೊಬ್ಬರ ಆರೋಪ ವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಇದನ್ನೂ ಓದಿ: Vishwavani Editorial: ನಾಲಿಗೆ ತೊದಲಿದರೂ ಎಡವಬಾರದು!
ಏಮ್ಸ್ ನೀಡಲು ವಿತ್ತ ಸಚಿವರ ಹಿಂಜರಿತವೇಕೆ? 22 ರಾಜ್ಯಗಳಿಗೆ ಮಂಜೂರಾಗಿರುವ ಏಮ್ಸ್ ರಾಯಚೂರಿಗೇಕಿಲ್ಲ? ಎಂದೂ ಅವರು ಪ್ರಶ್ನಿಸಿದ್ದಾರೆ. ಈ ಆರೋಪ ನಿಜವಾಗಿದ್ದಲ್ಲಿ, ಸಂಬಂಧ ಪಟ್ಟವರು ಅದಕ್ಕೆ ಸೂಕ್ತ ಸಮರ್ಥನೆಯನ್ನೂ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ‘ಕೇಂದ್ರ ಸರಕಾ ರವು ಕರ್ನಾಟಕದೆಡೆಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ’ ಎಂಬ ಗ್ರಹಿಕೆಯೇ ಜನಮನ ದಲ್ಲಿ ದಟ್ಟವಾಗಿ ಉಳಿದುಬಿಡುತ್ತದೆ.
ಬಜೆಟ್ ಮಂಡನೆಯ ವೇಳೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ನಿರೀಕ್ಷೆಯನ್ನು ಹೊಂದಿರು ತ್ತದೆ ಎಂಬುದೇನೋ ಖರೆ; ಆದರೆ ಅಂಥ ಪ್ರತಿಯೊಂದು ನಿರೀಕ್ಷೆಯೂ ವಾಸ್ತವತೆಯಾಗಿ ಬದಲಾ ಗುವುದಕ್ಕೆ ಒಂದಷ್ಟು ಅಡೆತಡೆಗಳಿರಬಹುದು ಅಥವಾ ಮಿತಿಗಳಿರಬಹುದು. ಅದೇನು ಎಂಬುದು ಜನರಿಗೂ ತಿಳಿಯುವಂತಾಗಬೇಕು. ಅಲ್ಲವೇ?