Prithvi Shaw: ಟಿ20 ಮುಂಬೈ ಲೀಗ್; ಐಕಾನ್ ಆಟಗಾರರ ಪಟ್ಟಿಯಲ್ಲಿ ಪೃಥ್ವಿ ಶಾ
ಓಟ್ಟು 8 ತಂಡಗಳ ಟೂರ್ನಿ ಇದಾಗಿದ್ದು, 20 ಪಂದ್ಯಗಳು ಒಳಗೊಂಡಿದೆ. ಲೀಗ್ ಹಂತದಲ್ಲಿ ಪ್ರತಿ ತಂಡ ತಲಾ ಐದು ಪಂದ್ಯಗಳನ್ನು ಆಡಲಿದೆ. ಹರಾಜು ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.


ಮುಂಬಯಿ: 6 ವರ್ಷಗಳ ನಂತರ ನಡೆಯಲಿರುವ ಮೂರನೇ ಆವೃತ್ತಿಯ ಮುಂಬೈ ಟಿ20 ಲೀಗ್(T20 Mumbai League) ಮೇ 26 ರಿಂದ ಜೂನ್ 8 ರವರೆಗೆ ನಡೆಯಲಿಯಲಿದೆ. ಇದೀಗ ಎಂಟು ತಂಡಗಳ 8 ಐಕಾನ್ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಅವರೊಂದಿಗೆ ಪೃಥ್ವಿ ಶಾ(Prithvi Shaw) ಹೆಸರನ್ನು ಹೆಸರಿಸಲಾಗಿದೆ. ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಐಪಿಎಲ್, ದೇಶಿಯ ಟೂರ್ನಿ ಮತ್ತು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಪೃಥ್ವಿ ಶಾ ಗೆ ಮತ್ತೆ ಕಮ್‌ಬ್ಯಾಕ್ ಮಾಡಲು ಈ ಟೂರ್ನಿ ಉತ್ತಮ ಅವಕಾಶವಾಗಿದೆ. ಅಜಿಂಕ್ಯ ರಹಾನೆ, ಶಿವಂ ದುಬೆ, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್ ಮತ್ತು ಸರ್ಫರಾಜ್ ಖಾನ್ ಕೂಡ ಐಕಾನಿಕ್ ಆಟಗಾರರಾಗಿದ್ದಾರೆ.
ಓಟ್ಟು 8 ತಂಡಗಳ ಟೂರ್ನಿ ಇದಾಗಿದ್ದು, 20 ಪಂದ್ಯಗಳು ಒಳಗೊಂಡಿದೆ. ಲೀಗ್ ಹಂತದಲ್ಲಿ ಪ್ರತಿ ತಂಡ ತಲಾ ಐದು ಪಂದ್ಯಗಳನ್ನು ಆಡಲಿದೆ. ಹರಾಜು ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಾಗ ಅವರ ಸ್ಥಾನಕ್ಕೆ ಪೃಥ್ವಿ ಶಾ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಚೆನ್ನೈ ತಂಡ ಮುಂಬೈ ಮೂಲದ ಆಟಗಾರ ಆಯುಷ್ ಮ್ಹಾತ್ರೆಯನ್ನು ಆಯ್ಕೆ ಮಾಡಿಕೊಂಡಿತ್ತು. ಕಳೆದ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದ ಶಾ, 9 ಪಂದ್ಯಗಳಲ್ಲಿ 197 ರನ್ ಗಳಿಸಿದ್ದರು.
ಇದನ್ನೂ ಓದಿ IPL 2025: ಸಚಿನ್ ತೆಂಡೂಲ್ಕರ್ ಐಪಿಎಲ್ ದಾಖಲೆ ಮುರಿದ ಜೈಸ್ವಾಲ್
'ದೇಶೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಪ್ರದರ್ಶನದ ಮೂಲಕ ಮುಂಬೈಗೆ ಅಪಾರ ಹೆಮ್ಮೆ ತಂದಿರುವ ಎಂಟು ಐಕಾನ್ ಆಟಗಾರರ ಹೆಸರು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಅವರು ಮುಂಬೈ ಕ್ರಿಕೆಟ್‌ನ ಚೈತನ್ಯ, ಪರಂಪರೆ ಮತ್ತು ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತಾರೆ. ಅವರ ಉಪಸ್ಥಿತಿಯು ಉದಯೋನ್ಮುಖ ಪ್ರತಿಭೆಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವುದಲ್ಲದೆ, ಭಾರತದ ಮುಂದಿನ ಪೀಳಿಗೆಯ ಕ್ರಿಕೆಟ್ ತಾರೆಗಳನ್ನು ಅನ್ವೇಷಿಸಲು ಮತ್ತು ಉತ್ತೇಜಿಸಲು ನಾವು ಬದ್ಧರಾಗಿ ಅಭಿಮಾನಿಗಳಿಗೆ ರೋಮಾಂಚಕ ಮತ್ತು ಸ್ಮರಣೀಯ ಅನುಭವವನ್ನು ನೀಡುತ್ತದೆ'ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದರು.