ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಐಪಿಎಲ್‌ ಇತಿಹಾಸದಲ್ಲಿಯೇ ಶ್ರೇಷ್ಠ ಪ್ರದರ್ಶನʼ-ವೈಭವ್‌ ಸೂರ್ಯವಂಶಿಗೆ ಶಾನ್‌ ಪೊಲಾಕ್‌ ಸೆಲ್ಯೂಟ್!

Shaun Pollock Praised Vaibhav Suryavanshi: ಗುಜರಾತ್‌ ಟೈಟನ್ಸ್‌ ವಿರುದ್ಧ ಐಪಿಎಲ್‌ ಇತಿಹಾಸದ ಎರಡನೇ ಅತ್ಯಂತ ವೇಗದ ಶತಕ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಶಾನ್‌ ಪೊಲಾಕ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

14ರ  ಪೋರ ವೈಭವ್‌ ಸೂರ್ಯವಂಶಿಗೆ ಶಾನ್‌ ಪೊಲಾಕ್‌ ಸೆಲ್ಯೂಟ್‌!

ವೈಭವ್‌ ಸೂರ್ಯವಂಶಿಯನ್ನು ಶ್ಲಾಘಿಸಿದ ಶಾನ್‌ ಪೊಲಾಕ್.

Profile Ramesh Kote Apr 29, 2025 2:49 PM

ಜೈಪುರ: ಗುಜರಾತ್‌ ಟೈಟನ್ಸ್‌ ವಿರುದ್ಧ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇತಿಹಾಸದ ಎರಡನೇ ಅತ್ಯಂತ ವೇಗದ ಶತಕ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Suryavanshi) ಅವರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ದಿಗ್ಗಜ ಶಾನ್‌ ಪೊಲಾಕ್‌ ಶ್ಲಾಘಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ನಾನು ನೋಡಿದ ಅಂತ್ಯಂತ ಶ್ರೇಷ್ಠ ಪ್ರದರ್ಶನ ಇದಾಗಿದೆ ಎಂದು ಪೊಲಾಕ್‌ ಹೊಗಳಿದ್ದಾರೆ. ಸ್ಪೋಟಕ ಶತಕದ ಹಿನ್ನೆಲೆಯಲ್ಲಿ ವೈಭವ್‌ ಸೂರ್ಯವಂಶಿ ಅವರನ್ನು ಇಡೀ ವಿಶ್ವದಾದ್ಯಂತ ಕ್ರಿಕೆಟ್‌ ದಿಗ್ಗಜರು ಗುಣಗಾನ ಮಾಡುತ್ತಿದ್ದಾರೆ. ಅಂದ ಹಾಗೆ ವೈಭವ್‌ ಸ್ಪೋಟಕ ಶತಕದ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿತ್ತು.

ಸೋಮವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ, ವೈಭವ್‌ ಸೂರ್ಯವಂಶಿ ದಾಖಲೆಯ ಶತಕದ ಬಲದಿಂದ 15.5 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿ ಭರ್ಜರಿ ಗೆಲುವು ದಾಖಲಿಸಿತ್ತು. ಆ ಮೂಲಕ ವೈಭವ್‌ ಸೂರ್ಯವಂಶಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2025: ಸಚಿನ್‌ ತೆಂಡೂಲ್ಕರ್‌ ಐಪಿಎಲ್‌ ದಾಖಲೆ ಮುರಿದ ಜೈಸ್ವಾಲ್‌

ಯಶಸ್ವಿ ಜೈಸ್ವಾಲ್‌ (70 ರನ್‌) ಜೊತೆ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಆರಂಭಿಕ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಅವರು ಆಡಿದ ಕೇವಕ 35 ಎಸೆತಗಳಲ್ಲಿ ಶತಕ ಬಾರಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಎರಡನೇ ವೇಗದ ಶತಕವನ್ನು ಸಿಡಿಸಿದರು, ಅಲ್ಲದೆ ವೇಗದ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ತಮ್ಮ ದಾಖಲೆಯ ಶತಕದ ಮೂಲಕ ವೈಭವ್‌ ಸೂರ್ಯವಂಶಿ ವಿಶ್ವ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಈ ಇನಿಂಗ್ಸ್‌ನಲ್ಲಿ ಸೂರ್ಯವಂಶಿ ಆಡಿದ 38 ಎಸೆತಗಳಲ್ಲಿ 11 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 101 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.



ನಾನು ನೋಡಿದ ಶ್ರೇಷ್ಠ ಐಪಿಎಲ್‌ ಪ್ರದರ್ಶನ

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಶಾನ್‌ ಪೊಲಾಕ್‌, ಈ ಸೀಸನ್‌ಗೆ ಸ್ಟಾರ್‌ ಬೌಲರ್‌ಗಳ ಎದುರು ತಮ್ಮ ಪರಿಪಕ್ವ ಆಟ ಹಾಗೂ ಭಯಮುಕ್ತ ಆಟವನನು ಆಡಿದ ವೈಭವ್‌ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ನಾನು ನೋಡಿದ ಅತ್ಯಂತ ಗಮನಾರ್ಹ ಇನಿಂಗ್ಸ್‌ ಇದಾಗಿದೆ ಎಂದು ಹೇಳಿದ್ದಾರೆ.

"ನನ್ನ ಪ್ರಕಾರ ಇದು ಐಪಿಎಲ್‌ ಟೂರ್ನಿಯಲ್ಲಿಯೇ ಅತ್ಯಂತ ಶ್ರೇಷ್ಠ ವೈಯಕ್ತಿಕ ಪ್ರದರ್ಶನವಾಗಿದೆ. ಇದು ಅದೇ ರೀತಿ ಇತ್ತು. 14ರ ವಯಸ್ಸಿನ ಆಟಗಾರ ಕ್ರೀಸ್‌ಗೆ ಮೈದಾನದ ಎಲ್ಲಾ ಕಡೆ ಬೌಂಡರಿ ಸಿಕ್ಸರ್‌ಗಳ ಮೂಲಕ 35 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ," ಎಂದು ಶಾನ್‌ ಪೊಲಾಕ್‌ ಶ್ಲಾಘಿಸಿದ್ದಾರೆ.

"ಕಳೆದ ವರ್ಷಗಳಲ್ಲಿ ಹಲವು ಶ್ರೇಷ್ಠ ಗೆಲುವುಗಳು ಹಾಗೂ ಹಲವು ಶ್ರೇಷ್ಠ ಪ್ರದರ್ಶನಗಳನ್ನು ನಾವು ಕಣ್ತುಂಬಿಸಿಕೊಂಡಿದ್ದೇವೆ. ಆದರೆ, ಇದು ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರದರ್ಶನ ಇದಾಗಿದೆ," ಎಂದು ಹೊಗಳಿದ್ದಾರೆ.

ಜಿಟಿ ಬೌಲರ್‌ಗಳಿಗೆ ವೈಭವ್‌ ಬೆವರಿಳಿಸಿದ್ದಾರೆ: ಪೊಲಾಕ್‌

ತಮ್ಮ ಭಯಮುಕ್ತ ಬ್ಯಾಟಿಂಗ್‌ ಮೂಲಕ ವೈಭವ್‌ ಸೂರ್ಯವಂಶಿ ಅವರು ಗುಜರಾತ್‌ ಟೈಟನ್ಸ್‌ ತಂಡದ ಬೌಲಿಂಗ್‌ ವಿಭಾಗವನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ. ನಾಲ್ಕನೇ ಓವರ್‌ನಲ್ಲಿ ಇಶಾಂತ್‌ ಶರ್ಮಾಗೆ ವೈಭವ್‌ 28 ರನ್‌ ಸಿಡಿಸಿದ್ದರು.

"ಗುಜರಾತ್‌ ಟೈಟನ್ಸ್‌ ಬೌಲರ್‌ಗಳನ್ನು ಅವರು ಬಲವಾಗಿ ದಂಡಿಸಿದ್ದಾರೆ. ವೈಭವ್‌ ಸೂರ್ಯವಂಶಿ ಹುಟ್ಟುವುದಕ್ಕೂ ಮುನ್ನ ನಾಲ್ಕು ವರ್ಷಗಳಿಂದ ಈ ಬೌಲರ್‌ಗಳು ಐಪಿಎಲ್‌ ಆಡಿಕೊಂಡು ಬರುತ್ತಿದಾರೆ. ಇಂಥಾ ಬೌಲರ್‌ಗಳಿವೆ ವೈಭವ್‌ ಬೆವರಿಳಿಸಿದ್ದಾರೆ. ಅವರು ಕ್ರೀಸ್‌ಗೆ ಹೋಗ ಮುಲಾಜಿಲ್ಲದೆ ಸ್ಪೋಟಕ ಬ್ಯಾಟ್‌ ಮಾಡಿದ್ದಾರೆ," ಎಂದು ಶಾನ್‌ ಪೊಲಾಕ್‌ ತಿಳಿಸಿದ್ದಾರೆ.