Roopa Gururaj Volumn: ಸೇವಾ ಮನೋಭಾವದ ಜತೆ ತಾಳ್ಮೆಯೂ ಇರಬೇಕು
ಕೆಲವೊಮ್ಮೆಯಂತೂ, ವಿಕೃತ ಮನಸ್ಥಿತಿಯ ಕೆಲವರು ಇವರ ಮನೆಯ ಅಂಗಳ ಮತ್ತು ಹಿತ್ತಲಿನಲ್ಲಿ ಕೊಳೆತ ಪ್ರಾಣಿಗಳನ್ನು ಬಿಸುಟು ಹೋಗುತ್ತಿದ್ದರು. ಆಗಲೂ ಧೃತಿಗೆಡದ ಈ ಮಹಿಳೆ, ಅಂಥವರ ಮೇಲೆ ಯಾವ ದೂರನ್ನೂ ನೀಡದೆ ತಾವೊಬ್ಬರೇ ಎಲ್ಲವನ್ನೂ ಶುಚಿಗೊಳಿಸುತ್ತಿದ್ದರು


ವಿನಯ, ಕರುಣೆ, ತಾಳ್ಮೆಯಿಂದ ಕೂಡಿದ್ದ ಮಹಿಳೆಯೊಬ್ಬರಿದ್ದರು. ಜನರೆಲ್ಲರೂ ಹನಿಮಳೆ ಇವ ರನ್ನು ‘ಕರುಣಾಮೂರ್ತಿ’ ಎಂದೇ ಭಾವಿಸಿದ್ದರು. ಇವರಿಂದ ಅಂಗವಿಕಲರಿಗೆ, ಬಡವರಿಗೆ ದೊರಕು ತ್ತಿದ್ದ ಸಹಾಯ, ಪ್ರೀತಿಗಳನ್ನು ನೋಡಿದಾಗ, ಇವರು ಹುಟ್ಟಿರುವುದೇ ದುರ್ಬಲರ ಸೇವೆ ಮಾಡಲು ಎನಿಸುತ್ತಿತ್ತು. ಊರಿನ ಸುತ್ತಮುತ್ತಲ ಜನರು ಯಾವುದೇ ಸಂಕೋಚವಿಲ್ಲದೆ ಇವರ ಬಳಿ ಸಹಾಯ ಕೇಳಿಕೊಂಡು ಬರುತ್ತಿದ್ದರು. ಇವರ ಒಳ್ಳೆಯತನ ಮತ್ತು ಉದಾರತೆಯನ್ನು ನೋಡಿ ಕೆಲವರಿಗೆ ಹೊಟ್ಟೆಕಿಚ್ಚು. ಹೀಗಾಗಿ ವಿನಾ ಕಾರಣ ಇವರನ್ನು ದ್ವೇಷಿಸುತ್ತಿದ್ದರು. ‘ಇವಳದ್ದೇ ಬರೀ ನಾಟಕ’ ಅಂತ ಇಲ್ಲಸಲ್ಲದ ಅಪವಾದವನ್ನು ಇವರ ಮೇಲೆ ಹೊರಿಸುತ್ತಿದ್ದರು. ಆದರೆ, ಈ ಮಹಿಳೆ ಇದ್ಯಾ ವುದಕ್ಕೂ ಜಗ್ಗದೆ, ತಮ್ಮ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದರು.
ಯಾರ ಹೊಗಳಿಕೆ-ತೆಗಳಿಕೆಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇವರ ಧೈರ್ಯ, ಸೇವಾಮನೋಭಾವ, ಅವುಗಳಿಂದ ಇವರಿಗೆ ಸಿಗುತ್ತಿದ್ದ ಗೌರವ ನೋಡಿ ಸಹಿಸದವರು ಇವರ ಮನೆಯ ಮುಂದೆ ಕಸದ ರಾಶಿಯನ್ನು ತಂದು ಸುರಿಯುತ್ತಿದ್ದರು. ಅದಕ್ಕೆ ಈಕೆ ಸ್ವಲ್ಪವೂ ಬೇಸರಿಸಿಕೊಳ್ಳದೆ ಅವನ್ನೆ ಶುಚಿಗೊ ಳಿಸುತ್ತಿದ್ದರು.
ಇದನ್ನೂ ಓದಿ: Roopa Gururaj Column: ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ
ಕೆಲವೊಮ್ಮೆಯಂತೂ, ವಿಕೃತ ಮನಸ್ಥಿತಿಯ ಕೆಲವರು ಇವರ ಮನೆಯ ಅಂಗಳ ಮತ್ತು ಹಿತ್ತಲಿನಲ್ಲಿ ಕೊಳೆತ ಪ್ರಾಣಿಗಳನ್ನು ಬಿಸುಟು ಹೋಗುತ್ತಿದ್ದರು. ಆಗಲೂ ಧೃತಿಗೆಡದ ಈ ಮಹಿಳೆ, ಅಂಥವರ ಮೇಲೆ ಯಾವ ದೂರನ್ನೂ ನೀಡದೆ ತಾವೊಬ್ಬರೇ ಎಲ್ಲವನ್ನೂ ಶುಚಿಗೊಳಿಸುತ್ತಿದ್ದರು.
ಈಕೆಯ ಸೇವಾಮನೋಭಾವ ಮತ್ತು ಒಳ್ಳೆಯತನ ಒಂದಿಷ್ಟೂ ಕಡಿಮೆಯಾಗಲಿಲ್ಲ. ಇದೆಲ್ಲವನ್ನೂ ಪ್ರತಿದಿನ ನೋಡುತ್ತಿದ್ದ ಈ ಮಹಿಳೆಯ ಮಗ “ಅಮ್ಮಾ, ಇನ್ನೂ ಎಷ್ಟು ದಿನ ಹೀಗೆ ತೊಂದರೆ ಯನ್ನು ನೀನೊಬ್ಬಳೇ ಅನುಭವಿಸುತ್ತೀಯಾ, ಇದೆ ಬೇಕೆ ನಿನಗೆ?" ಎಂದು ಕೇಳಿದ.
ಅದಕ್ಕೆ ಈಕೆ, “ಮಗೂ, ನನ್ನ ಮೇಲೆ ಅವರಿಗಿರುವ ದ್ವೇಷ ನಾಶವಾಗುವವರೆಗೂ ನಾನು ಉಸಿರೆತ್ತು ವುದಿಲ್ಲ" ಎಂದರಂತೆ. ಹೀಗೆ ಉತ್ತರಿಸಿದ ಆ ತಾಯಿ, ಶ್ರೀಮತಿ ಭಗವತೀ ದೇವಿಯವರು. ತಾಯಿ ಯನ್ನು ಹಾಗೆ ಪ್ರಶ್ನಿಸಿದಾತನೇ ಶ್ರೀ ಈಶ್ವರಚಂದ್ರ ವಿದ್ಯಾಸಾಗರರು!
ಇಂಥ ಮಹಾನ್ ತಾಯಿಯ ಮಗನಾಗಿದ್ದುದರಿಂದಲೇ, ಮುಂದೆ ಅವರು ಕೂಡ ಪ್ರಸಿದ್ಧ ಸಮಾಜ ಸುಧಾರಕರಾಗಲು ಸಾಧ್ಯವಾಗಿದ್ದಿರಬಹುದು. ಕೆಲವು ಸಲ ನಮ್ಮ ಒಳ್ಳೆಯ ಕೆಲಸಕ್ಕೆ ಒದಗುವ ಅಡಚಣೆ ಮತ್ತು ಕಷ್ಟಗಳನ್ನು ಬಗೆಹರಿಸಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು ನಮಗೆ ಅನ್ನಿಸ ಬಹುದು. ಆದರೆ ತಾಳ್ಮೆ ಮತ್ತು ಸಮಾಧಾನದಿಂದಿದ್ದು, ಪ್ರಯತ್ನವನ್ನು ಬಿಡದೇ ಮುಂದುವರಿಸಿದರೆ ಅದೇನನ್ನು ಮಾಡಲು ಬಯಸಿದರೂ ಸಾಧ್ಯವಾಗುತ್ತದೆ.
ಒಮ್ಮೆ ಗಮನಿಸಿ ನೋಡಿದರೆ, ಸಮಾಜದಲ್ಲಿ ತಮ್ಮದೇ ಆದ ದಾರಿಯನ್ನು ಕಂಡುಕೊಂಡು ಬೇರೆ ಯವರಿಗೆ ಒಳಿತನ್ನು ಮಾಡಲು ಅನೇಕರು ಆರಿಸಿಕೊಂಡ ದಾರಿ ಖಂಡಿತ ಅವರಿಗೆ ಸುಲಭ ವಾಗಿರ ಲಿಲ್ಲ. ಮೊದಲಿನಿಂದ ಕೊನೆಯವರೆಗೂ ಅವರಿಗೆ ಅಡೆತಡೆಗಳು ಬಾಧಿಸುತ್ತಲೇ ಇದ್ದವು. ಆದರೆ ಒಮ್ಮೆ ಆ ದಾರಿಯಲ್ಲಿ ನಡೆಯಬೇಕು ಎಂದು ನಿರ್ಧಾರ ಮಾಡಿದ ಅವರು ಅದಾವುದೇ ಕಾರಣಕ್ಕೂ ವಿಚಲಿತರಾಗದೆ ತಾವು ನಂಬಿದ್ದ ಧ್ಯೇಯಕ್ಕೆ ಕಟ್ಟುಬಿದ್ದು ಅದನ್ನು ಸಾಧಿಸಿದರು.
ಜೀವನದಲ್ಲಿ ನಮಗೆ ಇಂಥ ಒಂದು ದೃಢ ಮನಸ್ಸು ಮತ್ತು ನಾವು ನಂಬಿದ ಧ್ಯೇಯದ ಬಗ್ಗೆ ಈ ರೀತಿಯ ಸಮರ್ಪಣಾ ಭಾವ ಇದ್ದಾಗ ಮಾತ್ರ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಸಾಧಕರಿಗೆ ಬಾಧಕರು ಇದ್ದೇ ಇರುತ್ತಾರೆ, ಅಂಥ ಬಾಧಕರು ನಮ್ಮ ಪಾಲಿಗೆ ಹತ್ತುವ ಮೆಟ್ಟಿಲಾಗ ಬೇಕೇ ಹೊರತು ತಡೆಗೋಡೆಯಾಗಿ ನಿಂತುಬಿಡಬಾರದು. ನಾವು ಯಾವುದೇ ಕೆಲಸ ಮಾಡಲು ಹೊರಟರು ಕೂಡ ಅಲ್ಲಿ ಅಡೆತಡೆಗಳು, ಅದನ್ನು ವಿರೋಧಿಸುವವರು ಇರುವುದು ಸಾಮಾನ್ಯ. ನಾವು ನಂಬಿದ ತತ್ವದ ಮೇಲೆ ನಮಗೆ ನಂಬಿಕೆ ಇದ್ದರೆ ಅದು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುತ್ತದೆ ಎಂದಾದರೆ ಖಂಡಿತ ಸೋಲು ಒಪ್ಪಿಕೊಳ್ಳಬಾರದು.
ವಿನಯ, ತಾಳ್ಮೆ , ದೃಢತೆ ಇವುಗಳನ್ನು ಮೈಗೂಡಿಸಿ ಕೊಂಡು ನಿರಂತರವಾಗಿ ನಮ್ಮ ಗುರಿಯೆಡೆ ದೃಷ್ಟಿ ನೆಟ್ಟು ಬದುಕಿ ತೋರಿಸಬೇಕು.