ಭೀಮಾತೀರ ಶರಣ, ಸಂತರ ಸಾಹಿತಿಗಳ, ದಾರ್ಶನಿಕರ ಯುಗ ಪುರುಷರು ನಡೆದಾಡಿ ಈ ಭೂಮಿ ಪಾವನ
ಭೂಗರ್ಭದ ಕೆಳಂತಸ್ಥಿನಲ್ಲಿ (ಗವಿ) ಶ್ರೀಸಿದ್ದಲಿಂಗ ಎಕಾಂತವಾಗಿ ಧ್ಯಾನ ಮಗ್ನರಾದ ಸ್ಥಳ ಸುಮಾರು 4.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಶ್ರೀಸಿದ್ದಲಿಂಗ ಮಹಾರಾಜರ ಮಹಾಮಂಟಪ ಸುಮಾರು ೭.೫೦ ಕೋಟಿ ರೂ ದಲ್ಲಿ ಅಂದರೆ ಗವಿ ಹಾಗೂ ಮಹಾಮಂಟಪ ಎರಡೂ ಸೇರಿ ೧೨ ಕೋಟಿ ರೂ ವೆಚ್ಚದಲ್ಲಿ ಭಕ್ತರು ನೂತನ ಶ್ರೀಮಠದ ನಿರ್ಮಾಣ ಕಾರ್ಯ ಮುಂದು ವರೆದಿದೆ


ಇಂಡಿ: ಭೀಮಾತೀರ ಶರಣ, ಸಂತರ ಸಾಹಿತಿಗಳ, ದಾರ್ಶನಿಕರ ಯುಗ ಪುರುಷರು ನಡೆ ದಾಡಿ ಈ ಭೂಮಿಯನ್ನು ಪಾವನಗೊಳಿಸಿದ್ದಾರೆ. ಈ ಭಾಗದ ಜನರ ಹೃದಯ ಶ್ರೀಮಂತಿ ಕೆಗೆ ಮಠ, ಮಾನ್ಯಗಳೇ ಕಾರಣ ಅಂತಹ ಕ್ಷೇತ್ರಗಳಲ್ಲಿ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾ ಜರ ನೆಲೆ ಸ್ಥಾನ ಕೂಡಾ ಹೌದು. ಸದ್ಯ ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಶ್ರೀಮಠ ವಿನೂತನ ಶೈಲಿಯಲ್ಲಿ ಕಟ್ಟಡ ಕಾಮಗಾರಿ ನಡೆದಿರುವುದರಿಂದ್ದ ಭಕ್ತರಲ್ಲಿ ಭಕ್ತಿಯ ಪರಾಕಾಷ್ಠೆ ಮತ್ತಷ್ಟು ಹೆಚ್ಚಿಸಿದೆ.
ಇಂಡಿ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿರುವ ಭಾಗ ಆದರೆ ಭಕ್ತಿಗೆ ಎಂದಿಗೂ ಬರ ಇಲ್ಲ ಧಾನ,ಧರ್ಮ ಪುಣ್ಯ ಕಾರ್ಯ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಗಳಿಗೆ ಸದಾ ತಾ ಮುಂದೆ ನೀ ಮುಂದೆ ಎಂದು ಕೊಡುಗೈಧಾನಿಗಳಾಗಿ ಗುಪ್ತಗಾಮಿಗಳಂತೆ ಸದ್ದಿಲ್ಲದೆ ಭಕ್ತಾದಿಗಳು ಲಚ್ಯಾಣದ ಶ್ರೀಸಿದ್ದಲಿಂಗನ ಪುಣ್ಯಕ್ಷೇತ್ರ ಅಭಿವೃದ್ದಿಪಡಿಸುತ್ತಿದ್ದು ಶ್ರೀಮಠ ಮೃದು ಕಲ್ಲುಗಳಿಂದ ಕೆತನೆ ಕುಸರಿ ಕೆಲಸ ನಡೆದಿದ್ದು, ಭೂಗರ್ಭದ ಕೆಳಂತಸ್ಥಿನಲ್ಲಿ (ಗವಿ) ಶ್ರೀಸಿದ್ದಲಿಂಗ ಎಕಾಂತವಾಗಿ ಧ್ಯಾನ ಮಗ್ನರಾದ ಸ್ಥಳ ಸುಮಾರು 4.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಶ್ರೀಸಿದ್ದಲಿಂಗ ಮಹಾರಾಜರ ಮಹಾಮಂಟಪ ಸುಮಾರು ೭.೫೦ ಕೋಟಿ ರೂ ದಲ್ಲಿ ಅಂದರೆ ಗವಿ ಹಾಗೂ ಮಹಾಮಂಟಪ ಎರಡೂ ಸೇರಿ ೧೨ ಕೋಟಿ ರೂ ವೆಚ್ಚದಲ್ಲಿ ಭಕ್ತರು ನೂತನ ಶ್ರೀಮಠದ ನಿರ್ಮಾಣ ಕಾರ್ಯ ಮುಂದು ವರೆದಿದೆ.
ಇದನ್ನೂ ಓದಿ: Vijayapura News: ಇಂಡಿ ಪುರಸಭೆಯಲ್ಲಿ ಸಾಮಾನ್ಯ ಸಭೆ
ಇದಕ್ಕೆ ಶ್ರೀಸಿದ್ದಲಿಂಗನ ಪರಮ ಭಕ್ತ ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಶಾಸಕರ ಅನುದಾನದಲ್ಲಿ ಸುಮಾರು ೧ ಕೋಟಿ ಅನುಧಾನ ನೀಡಿದ್ದು ಮುಂಬರುವ ದಿನಗಳಲ್ಲಿ ಶ್ರೀಸಿದ್ದಲಿಂಗನ ಪುಣ್ಯಕ್ಷೇತ್ರ ಅಭಿವೃದ್ದಿಪಡಿಸಲು ಸರಕಾರದಿಂದ ಅನುಧಾನದ ಜೊತೆ ವಯಕ್ತಿಕ ಸಹಾಯ ಮಾಡುವ ಭರವಸೆ ಸರ್ವವಿಧದಲ್ಲಿ ಅಭಿವೃದ್ದಿಪಡಿಸಲು ಶ್ರೀಮಠದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
*
ಲಚ್ಯಾಣದ ಶ್ರೀಸಿದ್ದಲಿಂಗನ ಕ್ಷೇತ್ರ ಈ ಭಾಗದ ಜನರಿಗೆ ಬೇಡಿದನ್ನು ಕರುಣಿಸುವ ಕಾಮದೇನು ಕಲ್ಪವೃಕ್ಷವಿದಂತೆ. ಲಚ್ಯಾಣದಲ್ಲಿ ನೆಲೆಯೂರಿರುವ ಶ್ರೀಸಿದ್ದಲಿಂಗ ಮಹಾರಾಜರ ನೂತನ ಗವಿ ಹಾಗೂ ಮಹಾಮಂಟಪ ನಿರ್ಮಾಣ ವಿಶಿಷ್ಠ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಸದ್ದಿಲ್ಲದೆ ಅಪಾರ ಪ್ರಮಾಣದಲ್ಲಿ ಧಾನಿಗಳು ಕಟ್ಟಡಕ್ಕೆ ಸಹಾಯ ನೀಡುತ್ತಿದ್ದು ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಇವರು ಸಹಿತ ನಾನಿದ್ದೇನೆ ನನ್ನದೇನಿಲ್ಲ ನನ್ನ ಮನೆಯ ಆರಾಧ್ಯೆ ದೇವರಾಗಿರುವ ಎಲ್ಲ ಶ್ರೀಸಿದ್ದಲಿಂಗನ ಕೃಪಾರ್ಶೀವಾದ ಭಕ್ತಿಯ ತಾಣವಾಗಿರುವ ಪುಣ್ಯ ಕ್ಷೇತ್ರ ಪ್ರವಾಸಿ ತಾಣವಾಗುವಂತೆ ಮಂದಿರ ಸುಂದರವಾಗಿ ನಿರ್ಮಿಸಿ ಎಂದಿರುವುದರಿಂದ ಮಠದ ಆಡಳಿತ ಮಂಡಳಿ ಆತ್ಮಸ್ಥೆರ್ಯದಿಂದ ಶಾಸಕ ಪಾಟೀಲರು ಬೆನ್ನಿಗಿದ್ದಾರೆ ಎಂದು ಬೃಹತ್ ಪ್ರಮಾಣದ ಸುಂದರ ಶ್ರೀಮಠದ ಕಟ್ಟಡ ಕಾಮಗಾರಿ ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಸಿದ್ದಲಿಂಗ ಮಹರಾಜರ ಪುಣ್ಯಸ್ಮರಣೋತ್ಸವ,ಶತಮಾನೋತ್ಸವದ ೨೦೨೭ ನೇ ವರ್ಷ ಲೋಕಾರ್ಪಣೆ ಗೊಳಿಸುವ ಮಹಾಉದ್ದೇಶ ಈ ಭಾಗದ ಶ್ರೀಮಠದ ಸಕಲ ಭಕ್ತಾದಿಗಳ ಸಂಕಲ್ಪವಾಗಿದೆ.
ಧನರಾಜ ಮುಜಗೊಂಡ ಅರಣ್ಯ ಇಲಾಖೆ ಶ್ರೀಮಠದ ಭಕ್ತ.