ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vijayapura News: ಇಂಡಿ ಪುರಸಭೆಯಲ್ಲಿ ಸಾಮಾನ್ಯ ಸಭೆ

24*7 ನೀರಿನ ಮನೆಗಳಿಗೆ ಜೋಡಣೆ ಮಾಡುವಾಗ ಪಟ್ಟಣದ ಒಳ ಸಿ.ಸಿ ರಸ್ತೆಗಳು ಸಂಪೂ‌ ರ್ಣ ಹಾಳಾಗಿವೆ, ಮಣ್ಣು ಮುಚ್ಚಿ ಹೋಗಿದ್ದಾರೆ ಕೂಡಲೆ ಕ್ರಮ ಕೈಗೊಳ್ಳಿ ಪಟ್ಟಣದಲ್ಲಿ 24*7 ನೀರು ಪ್ರತಿ ಮನೆಗಳಿಗೆ ನೀರು ನಿರ್ವಹಣೆಯ ಬಾಕಿ ಉಳಿದ ಬಿಲ್ಲು ಎಷ್ಟು ? ಬಿಲ್ಲ ಪಾವತಿಸದಿದ್ದರೆ ಠರಾವು ಮಾಡಿ ಒಂದೇ ಅವಧಿಯಲ್ಲಿ ಅರ್ಧ ಬಿಲ್ ಪಾವತಿಸುವಂತೆ ಆದೇಶ ಮಾಡಿ ಸಾರ್ವ‌ ಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯ ಅಯೂ್ ಬಾಗವಾನ ಹಾಗೂ ಮುಸ್ತಾಕ ಇಂಡಿಕರ್ ಜಂಟಿ ಸಭೆಯಲ್ಲಿ ತಿಳಿಸಿದರು

ಇಂಡಿ ಪುರಸಭೆಯಲ್ಲಿ ಸಾಮಾನ್ಯ ಸಭೆ

ಪುರಸಭೆಯಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸೌದಾಗರ ಇವರ ಘನ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

Profile Ashok Nayak Feb 23, 2025 11:52 PM

ಇಂಡಿ: ಇಂದು ಪುರಸಭೆಯ ಸಭಾ ಭವನದಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಘನಅಧ್ಯಕ್ಷತೆ ಹಾಗೂ ಉಪಾಧ್ಯಕ್ಷ ಮಹಮ್ಮದ ಸೌದಾಗರ ಇವರ ನೈತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿತು. ಈ ಸಂದರ್ಭದಲ್ಲಿ ಪುರಸಭೆ ಕಛೇರಿ ವ್ಯವಸ್ಥಾಪಕ ಅಧಿಕಾರಿ ಪ್ರವೀಣ ಸೋನಾರ ಸಭೆ ಯಲ್ಲಿ ಪುರಸಭೆಯ ಹಿಂದಿನ ನಡಾವಳಿಗಳನ್ನು ಓದಿ ಧೃಡೀಕರೀಸುವಂತೆ ಸೂಚಿಸಿದರು. ಪಟ್ಟಣದಲ್ಲಿ ಒಳಚರಂಡಿ ಕಸ,ಕಡ್ಡಿ ತುಂಬಿಕೊಂಡು ರಸ್ತೆಯ ಮೇಲೆ ಹರಿದಾಡುತ್ತಿರುವು ದರಿಂದ ಸಾರ್ವಜನಿಕರು ನಮಗೆ ದೂರುತ್ತಿದ್ದಾರೆ. ಕಳೆದ 3 ವರ್ಷ ಗಳಿಂದ ಜಟ್ಟಿಂಗ್ ಮಸಿನ್ ತರುವುದಾಗಿ ಪ್ರತಿಸಭೆಯಲ್ಲಿ ಹೇಳುತ್ತಿರುವುದು ಸಾಮಾನ್ಯ ವಾಗಿದೆ.

ನೂತನ ಪುರಸಭೆಗೆ ಮುಖ್ಯಾಧಿಕಾರಿ ಆಗಮ ಆಗಿರುವುದರಿಂದ ಹಿಂದಿನ ಅಧಿಕಾರಿ ಬರೇ ಶೋಕಿ ಮಾಡಿ ಹೋಗಿದ್ದಾರೆ ಅಭಿವೃದ್ದಿ ಶೂನ್ಯ ನೀವು ಸ್ಥಳೀಯರಾಗಿದ್ದು ನಿಮ್ಮ ಹೆಸರು ಉಳಿ ಯಲಿ. ನಮ್ಮ ಅವಧಿ 6 ತಿಂಗಳು ಮಾತ್ರ ಉಳಿದಿದೆ. ಅಲ್ಪಸ್ವಲ್ಪ ವಾರ್ಡಗಳ ಕೆಲಸಗಳು ಮಾಡಿ ನಮ್ಮ ಹೆಸರು ಬರುವಂತೆ ಕಾಳಜಿ ವಹಿಸಿ ಕೂಡಲೆ ಜಟ್ಟಿಂಗ್ ಮಶಿನ್ ತರುವಂತೆ ಸದಸ್ಯ ಅನೀಲಗೌಡ ಬಿರಾದಾರ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಇಸ್ಮಾ ಯಿಲ್ ಅರಬ್ ಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: Vijayapura News: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು; ಹೊಸ ವರ್ಷದ ಮೊದಲ ದಿನವೇ ದಾರುಣ ಘಟನೆ

24*7 ನೀರಿನ ಮನೆಗಳಿಗೆ ಜೋಡಣೆ ಮಾಡುವಾಗ ಪಟ್ಟಣದ ಒಳ ಸಿ.ಸಿ ರಸ್ತೆಗಳು ಸಂಪೂ‌ ರ್ಣ ಹಾಳಾಗಿವೆ, ಮಣ್ಣು ಮುಚ್ಚಿ ಹೋಗಿದ್ದಾರೆ ಕೂಡಲೆ ಕ್ರಮ ಕೈಗೊಳ್ಳಿ ಪಟ್ಟಣದಲ್ಲಿ ೨೪*೭ ನೀರು ಪ್ರತಿ ಮನೆಗಳಿಗೆ ನೀರು ನಿರ್ವಹಣೆಯ ಬಾಕಿ ಉಳಿದ ಬಿಲ್ಲು ಎಷ್ಟು ? ಬಿಲ್ಲ ಪಾವತಿಸದಿದ್ದರೆ ಠರಾವು ಮಾಡಿ ಒಂದೇ ಅವಧಿಯಲ್ಲಿ ಅರ್ಧ ಬಿಲ್ ಪಾವತಿಸುವಂತೆ ಆದೇಶ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯ ಅಯೂ್ ಬಾಗವಾನ ಹಾಗೂ ಮುಸ್ತಾಕ ಇಂಡಿಕರ್ ಜಂಟಿ ಸಭೆಯಲ್ಲಿ ತಿಳಿಸಿದರು.‌

ಇದಕ್ಕೆ ಉತ್ತರಿಸಿದ ನಗರ ಕುಡಿಯುವ ನೀರು ಒಳಚರಂಡಿ ಮಂಡಳಿಯ ಇಇ ನೋಡಿ ನೀವು ಪುರಸಭೆಯಿಂದ ಠರಾವು ಮಾಡಿ ನಾನು ಮೇಲಿನವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ೨೪*೭ ನೀರು ನಿರ್ವಹಣೆ ಪುರಸಭೆಗೆ ಹ್ಯಾಂಡವರ್ ಮಾಡಿಕೊಳ್ಳುುದರ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಯಿತು ನಂತರ ಎಲ್ಲಾ ಸದಸ್ಯರು ಇದರ ನಿರ್ವಹಣೆ ಮತ್ತು ಟೇಕ್ನೀಕಲ್ ಸಮಸ್ಯಗಳು ಸಾಕಷ್ಟು ನಮ್ಮ ಪುರಸಭೆಗೆ ಹ್ಯಾಂಡವರ್ ಮಾಡುವುದು ಬೇಡ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುತ್ತದೆ ನಗರ ನೀರು ಸರಬರಾಜು ಇಲಾಖೆ ಯವರೆೇನೋಡಿಕೊಳ್ಳಲಿ ಎಂದು ಸರ್ವಸದಸ್ಯರು ಕೈಚೆಲ್ಲಿ ಕುಳಿತರು.

ಪಟ್ಟಣದ ಸಾರ್ವಜನಿಕ ಸ್ಥಳಗಳಾದ ಗುಡಿ, ಮಸಿದಿ, ಹಳ್ಳ, ಉದ್ಯಾನವನ, ಸ್ಮಶಾನ ಸೇರಿ ದಂತೆ ಅನೇಕ ಸ್ಥಳಗಳು ಸರ್ವೆ ಮಾಡಲು ಹಿಂದಿನ ಸಭೆಯಲ್ಲಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಸಾಹೇಬರು ಠರಾವು ಮಾಡಿಸಿದ್ದರು ೩ ತಿಂಗಳಾದರೂ ಇನ್ನು ಸರ್ವೆ ಕಾರ್ಯ ಮಾಡಿಲ್ಲ ಇಂತಹ ಖಡಕ್ ಅಧಿಕಾರಿ ಆದೇಶ ಗಮನಕ್ಕೆ ಇಲ್ಲ ಎಂದರೆ ಹೇಗೆ ? ಎಂದು ಸದಸ್ಯ ದೇವೇಂದ್ರ ಕುಂಬಾರ ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿ ಕಾರಿ ಶಿವಾನಂದ ಪೂಜಾರಿ ನನ್ನ ಗಮನಕ್ಕೆ ತಂದಿಲ್ಲ. ತಕ್ಷಣ ಸರ್ವೆಕಾರ್ಯ ಮಾಡುತ್ತೇನೆ ಎಂದು ಸಮಾಧಾನ ಮಾಡಿದರು. ನಂತರ ಮಾತನಾಡಿದ ಸದಸ್ಯ ದೇವೇಂದ್ರ ಕುಂಬಾರ, ಉಮೇಶ ದೇಗಿನಾಳ ಗುಡಿ,ಧಾರ್ಮಿಕ ಕ್ಷೇತ್ರಗಳಿಗೆ, ಮಠಮಾನ್ಯಗಳಿಗೆ ಉಚಿತ ನೀರು ಸರಬರಾಜು ಮಾಡಿ ಬಿಲ್ ಪಾವತಿಸಬೇಡಿ ಎಂದು ಸೂಚನೆ ನೀಡಿದಾಗ ಮಧ್ಯಪ್ರವೇಶಿಸಿದ ನಗರ ನೀರು ಸರಬರಾಜು ಇಇ‌, ನೋಡಿ, ಪುಕ್ಕಟೆ ಸರಬರಾಜು ಮಾಡುವುದು ಹೇಗೆ ಎಂದಾಗ ಸದಸ್ಯ ದೇವೇಂದ್ರ ಕುಂಬಾರ ಇಡೀ ರಾಜ್ಯ ಗ್ಯಾರಂಟಿ ಯೋಜನೆ ಮಾಡಿ ಪುಕ್ಕಟೆ ಎಲ್ಲಾ ಯೋಜನೆ ಮಾಡಿರುವಾಗ ನಿಮಗೆ ಆಗುವುದಿಲ್ಲ ಎಂದರೆ ಹೇಗೆ ಠರಾವು ಮಾಡಿ ಎಂದು ಸೂಚಿಸಿದರು.

ಪೂಜಾರಿ ವಸತಿ, ಹರಳಯ್ಯ, ಬಿರಾದಾರ ವಸತಿ ಇತರೆ ವಸತಿ ಪ್ರದೇಶಗಳಿಗೂ ಕುಡಿಯುವ ನೀರಿನ ಜೊಡಣೆ ಮಾಡಲು ಠರಾವು ಪಾಸು ಮಾಡಲು ಮಾಜಿ ಪುರಸಭೆ ಅಧ್ಯಕ್ಷ ಶೈಲಜಾ ಪೂಜಾರಿ ಸೂಚಿಸಿದಾಗ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ಘನತ್ಯಾಜ್ಯ ವಿಲೇವಾರಿ ಮಾಡಲು ಅವಶ್ಯಕ ಆಪರೇಟರ್, ಚಾಲಕ ಇತರೆ ಕಾಮಗಾರಿಗಳ ಟೆಂಡರ್ ಅವಧಿ ಮುಗಿದಿರುವ ಬಗ್ಗೆ ಚರ್ಚಿಸಿದರು ಟೆಂಡರ್ ಆಗುವವರೆಗೂ ಹಿಂದಿ ನವರನ್ನೆ ಮುಂದುವರೆಸುವAತೆ ಸೂಚಿಸಿದರು. ಮುಸ್ಲಿಂ ಸಮುದಾಯದವರಿಗೆ ಮುಕ್ತಿ ವಾಹನ ಟೆಂಡರ್ ಕುರಿತು ಚರ್ಚಿಸಿದಾಗ ತ್ವರಿತಗತಿಯಲ್ಲಿ ಪೂರೈಸುವಂತೆ ಎಲ್ಲ ಸದಸ್ಯರು ಒಪ್ಪಿಗೆ ನೀಡಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಭೀಮನ ಗೌಡ ಪಾಟೀಲ, ಸಂಗೀತಾ ಕರಕಟ್ಟಿ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಮುಸ್ತಾಕ ಇಂಡಿಕರ್, ಅಯೂಬ ಬಾಗವಾನ, ಇಸ್ಮಾಯಿಲ್ ಅರಬ, ವಿಜಯಕುಮಾರ ಮೂರಮನ್, ಅಸ್ಲಂ ಕಡಣಿ, ಶಬ್ಬಿರ ಖಾಜಿ, ರೇಖಾ ಮೂರಮನ್, ಬನ್ನೇಮ್ಮಾ ಹದರಿ, ಶೈಲಜಾ ಪೂಜಾರಿ, ಜ್ಯೋತಿ ರಾಠೋಡ,ಸೈಪನ್ ಪವಾರ, ಅನುಸುಯ್ಯಾ ಕಾಲೇಬಾಗ, ಉಮೇಶ ದೇಗಿನಾಳ, ಸುಜಾತಾ ಪಾಟೀಲ ನಾಮನಿದೇರ್ಶಕ ಸದಸ್ಯರಾದ ಅಬ್ದುಲ ರಷೀದ ಅರಬ, ಶಾಂತು ಬಿರಾದಾರ, ಶಿವಪ್ಪ ಬಡಿಗಡೇರ, ಸಂಜಯ ರಾಠೋಡ, ಪುರಸಭೆ ಮುಖ್ಯಾ ಧಿಕಾರಿ ಶಿವಾನಂದ ಪೂಜಾರಿ, ಪುರಸಭೆ ಇಇ ಅಶೋಕ ಚಂದನ, ಅಸ್ಲಂ ಖಾದಿಂ, ಚಂದು ಕಾಲೇಬಾಗ, ಹುಚ್ಚಪ್ಪ ಶಿವಶರಣ, ಮುರಾಳ ಸೇರಿದಂತೆ ಪುರಸಭೆಯ ಅಧಿಕಾರಿಗಳು ,ಪೌರ ಕಾರ್ಮಿಕರು ಇದ್ದರು.