BAN vs SA Emerging Test: ಕ್ರಿಕೆಟ್ ಮೈದಾನದಲ್ಲೇ ಬಾಕ್ಸಿಂಗ್ ನಡೆಸಿದ ಆಟಗಾರರು; ವಿಡಿಯೊ ವೈರಲ್
ಈ ಘಟನೆಯನ್ನು ಪಂದ್ಯದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಮ್ಯಾಚ್ ರೆಫರಿ ಪಂದ್ಯದ ವರದಿಯನ್ನು ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದ್ದಾರೆ. ಹೀಗಾಗಿ ಇಬ್ಬರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.


ಢಾಕಾ: ಕ್ರಿಕೆಟ್ ಕೇವಲ ಒಂದು ಆಟವಲ್ಲ. ಇದನ್ನು ಜಂಟಲ್ ಮ್ಯಾನ್ ಗೇಮ್ ಎಂದು ಕರೆಯಲಾಗುತ್ತದೆ. ಹಾಗಂತ ಕ್ರಿಕೆಟ್‌ನಲ್ಲಿ ವಿವಾದಗಳಿಗೇನು ಕಡಿಮೆಯಿಲ್ಲ. ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ(BAN vs SA Emerging Test) ಎಮರ್ಜಿಂಗ್ ತಂಡಗಳ ನಡುವಿನ ಪಂದ್ಯದಲ್ಲಿ(emerging test) ಆಟಗಾರರು ಮೈದಾನಲ್ಲೇ ಬಡಿದಾಡಿಕೊಂಡ(Ntuli and Mondol clash) ಘಟನೆ ನಡೆದಿದೆ.
ಪಂದ್ಯದ 2ನೇ ದಿನದಾಟದಂದು ದಕ್ಷಿಣ ಆಟಗಾರ ತ್ಸೆಪೊ ನ್ಟುಲಿ ಮತ್ತು ಬಾಂಗ್ಲಾದೇಶದ ರಿಪನ್ ಮಂಡಲ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ತಾಳ್ಮೆ ಕಳೆದುಕೊಂಡ ತ್ಸೆಪೊ ನ್ಟುಲಿ ಏಕಾಏಕಿ ಬಾಂಗ್ಲಾ ಆಟಗಾರನ ಮೇಲೆ ಹಲ್ಲೆ ನಡೆಸಿದರು. ಇದೇ ವೇಳೆ ರಿಪನ್ ಮಂಡಲ್ ಕೂಡ ಹೊಡೆದಾಟಕ್ಕೆ ಇಳಿದರು. ಉಭಯ ಆಟಗಾರರ ಈ ಗಲಾಟೆ ಬಿಡಿಸಲು ಅಂಪೈರ್‌ಗಳು ಮತ್ತು ಸಹ ಆಟಗಾರರು ಹರಸಾಹಸ ಪಟ್ಟು ಕೊನೆಗೂ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ತ್ಸೆಪೊ ನ್ಟುಲಿ ಮತ್ತು ರಿಪನ್ ಮಂಡಲ್ ನಡುವಣ ಹೊಡೆದಾಟದ ವಿಡಿಯೊ ವೈರಲ್ ಆಗಿದ್ದು ಉಭಯ ಆಟಗಾರರನ್ನು ಕೂಡ ಕ್ರಿಕೆಟ್‌ನಿಂದ ನಿಷೇಧ ಮಾಡಬೇಕೆಂದು ಅನೇಕ ಮಾಜಿ ಆಟಗಾರರು ಆಗ್ರಹಿಸಿದ್ದಾರೆ.
ಸಿಕ್ಸರ್ ಬಾರಿಸಿದ ವಿಚಾರವಾಗಿ ಮಾತಿನ ಚಕಮಕಿಗೆ ಕಾರಣವಾಯಿತು. ಆದರೆ ಆ ಬಳಿಕ ಉಭಯ ಆಟಗಾರರು ಹೊಡೆದಾಡಿಕೊಂಡರು. ಬಾಂಗ್ಲಾದೇಶದ ಕ್ರಿಕೆಟಿಗರು ಈ ರೀತಿ ಮೈದಾನದಲ್ಲಿ ಕಿತ್ತಾಟ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಾಂಗ್ಲಾ ಪ್ರೀಮಿಯರ್ ಲೀಗ್ ಪಂದ್ಯದ ವೇಳೆಯೂ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
Things got out of control between Tshepo Ntuli and Ripon Mondol during the SA Emerging vs Bangladesh Emerging match today and the umpires were forced to intervene pic.twitter.com/EhYC6KVj4u
— Werner (@Werries_) May 28, 2025
ಈ ಘಟನೆಯನ್ನು ಪಂದ್ಯದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಮ್ಯಾಚ್ ರೆಫರಿ ಪಂದ್ಯದ ವರದಿಯನ್ನು ಬಾಂಗ್ಲಾ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದ್ದಾರೆ. ಹೀಗಾಗಿ ಇಬ್ಬರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.