ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಅತ್ಯಂತ ಕಡಿಮೆ ಮೊತ್ತಕ್ಕೆ ಒಮನ್‌ ತಂಡವನ್ನು ಕಟ್ಟಿ ಹಾಕಿ ವಿಶ್ವ ದಾಖಲೆ ಬರೆದ ಯುಎಸ್‌ಎ!

USA Create History: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭಕ್ಕೂ ಮುನ್ನ, ಅಮೆರಿಕ ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಸ್ವರೂಪದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ನಿಯಂತ್ರಿಸಿ ಅಮೆರಿಕ ವಿಶ್ವ ದಾಖಲೆಯನ್ನು ಬರೆದಿದೆ.

ಭಾರತದ 40 ವರ್ಷಗಳ ದಾಖಲೆ ಮುರಿದ ಯುಎಸ್‌ಎ!

ವಿಶ್ವ ದಾಖಲೆ ಬರೆದ ಯುಎಸ್‌ಎ

Profile Ramesh Kote Feb 18, 2025 10:20 PM

ನವದೆಹಲಿ: ಕ್ರಿಕೆಟ್ ಅನ್ನು ಅನಿಶ್ಚಿತತೆಯ ಆಟ ಎಂದು ಕರೆಯಲಾಗುತ್ತದೆ. ಯಾವ ಪಂದ್ಯದಲ್ಲಿ, ಯಾವಾಗ ಮತ್ತು ಯಾವ ದಾಖಲೆ ಮೂಡಿ ಬರಲಿದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅಮೆರಿಕ ಮತ್ತು ಒಮನ್ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಅಮೆರಿಕ ತಂಡ, ಭಾರತ ತಂಡದ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ದಾಖಲೆಯಾಗಿದೆ. ಈ ದಾಖಲೆಯ ಹೊರತಾಗಿಯೂ ಎರಡೂ ತಂಡಗಳ ಸ್ಪಿನ್ ಬೌಲರ್‌ಗಳು ಈ ಪಂದ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಒಮನ್ ವಿರುದ್ಧದ ಈ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಅಮೆರಿಕ 35.3 ಓವರ್‌ಗಳಲ್ಲಿ ಕೇವಲ 122 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ತಂಡದಿಂದ ಕೇವಲ 5 ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿಯ ಗಡಿ ದಾಟಿದರು. ನಿರಾಶಾದಾಯಕ ಬ್ಯಾಟಿಂಗ್ ನಂತರ, ಬೌಲರ್‌ಗಳು ಅದ್ಭುತ ಪ್ರದರ್ಶನವನ್ನು ತೋರಿದರು. ಅದರಲ್ಲಿಯೂ ಸ್ಪಿನ್ನರ್‌ಗಳು ಸ್ಪಿನ್‌ ಮೋಡಿ ಮಾಡಿದರು.

ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಫರ್ಗುಸನ್: ಜೇಮಿಸನ್‌ ಬದಲಿ ಆಟಗಾರ

ಬ್ಯಾಟಿಂಗ್‌ನಲ್ಲಿ ಕೇವಲ 122 ರನ್‌ಗಳನ್ನು ಗಳಿಸಿದ ನಂತರ, ಅಮೇರಿಕನ್ ಬೌಲರ್‌ಗಳು ಅದ್ಭುತವಾಗಿ ಬೌಲ್‌ ಮಾಡಿದರು. 25.3 ಓವರ್‌ಗಳಲ್ಲಿ ಒಮನ್ ತಂಡವನ್ನು ಕೇವಲ 65 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಯುಎಸ್ಎ 57 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ, ಅಮೆರಿಕ ಅತ್ಯಂತ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆಯನ್ನು ಮಾಡಿತು. ಇದಕ್ಕೂ ಮೊದಲು, ಭಾರತ ತಂಡವು 1985 ರಲ್ಲಿ ಈ ಸಾಧನೆಯನ್ನು ಮಾಡಿತ್ತು.

40 ವರ್ಷಗಳ ಹಿಂದೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಕೇವಲ 124 ರನ್ ಗಳಿಗೆ ಸೀಮಿತವಾಗಿತ್ತು. ಬಳಿಕ ಅಲ್ಪ ಗುರಿಯನ್ನು ಹಿಂಬಾಲಿಸಿದ ಪಾಕ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು ಹಾಗೂ ಈ ಅಲ್ಪ ಗುರಿಯನ್ನು ಚೇಸ್‌ ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಅಮೆರಿಕ ತಂಡ 122 ರನ್‌ಗಳಿಗೆ ಎದುರಾಳಿ ಒಮನ್‌ ತಂಡವನ್ನು ಕಟ್ಟಿ ಹಾಕಿ ವಿಶ್ವ ದಾಖಲೆಯನ್ನು ಬರೆದಿದೆ.

ಚಾಂಪಿಯನ್ಸ್‌ ಟ್ರೋಫಿ ಕೊಹ್ಲಿ, ರೋಹಿತ್‌, ಜಡೇಜಾಗೆ ಕೊನೆಯ ಐಸಿಸಿ ಟೂರ್ನಿ?: ಆಕಾಶ್‌ ಚೋಪ್ರಾ

ಈ ದಾಖಲೆ ಪಂದ್ಯದಲ್ಲಿ ಬೌಲಿಂಗ್‌ನಲ್ಲೂ ಒಂದು ದೊಡ್ಡ ಸಾಧನೆ ಮಾಡಲಾಯಿತು. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಒಬ್ಬನೇ ಒಬ್ಬ ಪೇಸ್ ಬೌಲರ್‌ನನ್ನು ಬಳಸಲಾಗಿಲ್ಲ. ಎರಡೂ ತಂಡಗಳು ಸ್ಪಿನ್ನರ್‌ಗಳೊಂದಿಗೆ ಮಾತ್ರ ಬೌಲಿಂಗ್ ಮಾಡಿದವು, ಇದರಲ್ಲಿ ಒಟ್ಟು 19 ವಿಕೆಟ್‌ಗಳು ಪತನಗೊಂಡವು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಫಾಸ್ಟ್‌ ಬೌಲರ್‌ ಅನ್ನು ಬಳಸದೆ ಕೇವಲ ಸ್ಪಿನ್ನರ್‌ಗಳನ್ನು ಬಳಿಸಿದ ಮೊದಲ ಪಂದ್ಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.