ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ರಣಹದ್ದುಗಳಿಗೆ ಕಂಡಿದ್ದು ಶವಗಳು, ಹಂದಿಗಳಿಗೆ ಕಂಡಿದ್ದು ಹೊಲಸು..!

ಮೌನಿ ಅಮಾವಾಸ್ಯೆ ದಿನದ ಕಾಲ್ತುಳಿತಕ್ಕೆ 30ಕ್ಕೂ ಹೆಚ್ಚು ಜನರು ಅಸುನೀಗಿದ್ದು ದುರದೃಷ್ಟ ಕರ. ಕುಂಭಮೇಳದ ಚಟುವಟಿಕೆಗೆ ಇದೊಂದು ಕಪ್ಪುಚುಕ್ಕೆಯಾಗಿಬಿಟ್ಟಿತು. ಆದರೆ ಈ ಘಟನೆ ಯನ್ನೂ ರಾಜಕೀಯೀಕರಣಗೊಳಿಸಲಾಯಿತು. ಅಂಥ ಗಂಭೀರ ಸಂದರ್ಭ ದಲ್ಲಿಯೂ ಪೊಲೀಸರು ಕಿಂಚಿತ್ತೂ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಯಂತ್ರಣಕ್ಕೆ ತಂದರು ಎಂದು ಪ್ರತ್ಯಕ್ಷದರ್ಶಿ ಬಿಜೆಪಿ ನಾಯಕ ಗಣೇಶ್ ಕೃಷ್ಣಮೂರ್ತಿ ಹೇಳುತ್ತಾರೆ. ದೆಹಲಿಯ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 18 ಜನ ಅಸುನೀಗಿದರು

ರಣಹದ್ದುಗಳಿಗೆ ಕಂಡಿದ್ದು ಶವಗಳು, ಹಂದಿಗಳಿಗೆ ಕಂಡಿದ್ದು ಹೊಲಸು..!

ಅಂಕಣಕಾರ ಪ್ರಕಾಶ ಶೇಷರಾಘವಾಚಾರ್‌

Profile Ashok Nayak Mar 11, 2025 9:20 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಹಿಂದೂಗಳ ಜಾಗೃತಿಯು ಸಹಜವಾಗಿ ಢೋಂಗಿ ಜಾತ್ಯತೀತವಾದಿಗಳ ನಿದ್ರೆಗೆಡಿ ಸಿರುವುದು ಸುಳ್ಳಲ್ಲ. ಊಹೆಗೆ ನಿಲುಕದಷ್ಟು ಜನರು ಈ ಮಹಾಕುಂಭದಲ್ಲಿ ಪಾಲ್ಗೊಂಡಿದ್ದನ್ನು ಕಂಡು ಅವರು ತಬ್ಬಿಬ್ಬಾಗಿ ಹೋಗಿದ್ದಾರೆ. ಹಿಂದೂ ಸಮಾಜದ ಸಂಸ್ಕೃತಿ, ನಂಬಿಕೆಯ ವಿಷಯ ದಲ್ಲಿ ತಾವು ದಶಕಗಳಿಂದ ಮಾಡುತ್ತಲೇ ಬಂದಿದ್ದ ಅಪಪ್ರಚಾರವು ತ್ರಿವೇಣಿ ಸಂಗಮದಲ್ಲಿ ತೊಳೆದುಹೋಗಿದ್ದಕ್ಕೆ ಇವರೆಲ್ಲಾ ಆಘಾತಕ್ಕೆ ಒಳಗಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಮಹಾ ಕುಂಭವನ್ನು ಹೊಗಳಲು ಇಷ್ಟವಿಲ್ಲ; ಆದರೆ ಜನರ ಭಯದಿಂದಾಗಿ ತೆಗಳಲು ಸಾಧ್ಯವಾಗದೆ ಸಮಯ ದೊರೆತಾಗಲೆಲ್ಲಾ ಅವರು ಕುಂಭದ ವ್ಯವಸ್ಥೆಯನ್ನು ಟೀಕಿಸುತ್ತಿದ್ದರು.

ವಿರೋಧ ಪಕ್ಷಗಳು ಮಹಾಕುಂಭಮೇಳವನ್ನು ಬಿಜೆಪಿಯ ಕಾರ್ಯಕ್ರಮ ಎಂಬಂತೆ ನೋಡಿದವು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಕುಂಭಮೇಳಕ್ಕೆ ಹೋದರೆ ಜನರ ಬಡತನ ನಿವಾರಣೆಯಾಗುವುದಾ?" ಎಂದು ಪ್ರಶ್ನಿಸುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಲೇವಡಿ ಮಾಡಿದರು. 60 ವರ್ಷಗಳವರೆಗೆ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ಜನರ ಬಡತನವನ್ನೇಕೆ ದೂರ ಮಾಡಲಿಲ್ಲ? ಖರ್ಗೆಯವರು ದಶಕಗಳ ಕಾಲ ಶಾಸಕರಾಗಿದ್ದವರು, ಮಂತ್ರಿಯಾಗಿದ್ದವರು; ಅವರಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ಏಕೆ ಮಾಡಲಾಗಲಿಲ್ಲ? ಗಾಂಧಿ ಕುಟುಂಬದ ಕೃಪಾಕಟಾಕ್ಷದಿಂದಾಗಿ ಇಳಿ ವಯಸ್ಸಿನಲ್ಲೂ ಅಧಿಕಾರ ಅನುಭವಿಸುತ್ತಿರುವ ಖರ್ಗೆಯವರು ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಪಾತಾಳ ತಲುಪಿರುವುದರ ಬಗ್ಗೆ ಚಿಂತಿಸುವ ಬದಲು, ಹಿಂದೂಗಳ ಅವಹೇಳನ ಮಾಡುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ!

ಇದನ್ನೂ ಓದಿ: Prakash Shesharaghavachar Column: ಅಶ್ವಮೇಧ ಕುದುರೆಯನ್ನು ಕಟ್ಟುವವರಾರು ?

ಮಮತಾ ಬ್ಯಾನರ್ಜಿಯವರು ಮಹಾಕುಂಭಮೇಳವನ್ನು ‘ಮೃತ್ಯುಕುಂಭ’ ಎಂದು ಅವಹೇಳನ ಮಾಡುತ್ತಾರೆ. ಜೈಲುಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಯಾದವರಿಗೆ ಇದೊಂದು ನಿಷ್ಪ್ರಯೋಜಕ ಮೇಳವಾಗಿ ಕಾಣುತ್ತದೆ. ರಾಹುಲ್ ಗಾಂಧಿಯವರಂತೂ ಪ್ರಯಾಗದ ಕಡೆ ತಲೆಯನ್ನೂ ಹಾಕಲಿಲ್ಲ.

ಅನೇಕ ವಿಪಕ್ಷ ನಾಯಕರಿಗೆ ಕುಂಭಮೇಳದ ಬಗ್ಗೆ ಹಗುರವಾಗಿ ಮಾತಾಡುವುದು ಹವ್ಯಾ ಸವೇ ಆಗಿಬಿಟ್ಟಿತ್ತು. ಒಂದೆಡೆ, ಬರೋಬ್ಬರಿ 66 ಕೋಟಿ ಜನರು ಅನನ್ಯ ಭಕ್ತಿಯಿಂದ ಪ್ರಯಾಗಕ್ಕೆ ತೆರಳಿ, ಸಂಗಮದಲ್ಲಿ ಸ್ನಾನ ಮಾಡಿ, ದೈವಿಕ ಅನುಭವ ಪಡೆದರೆ, ಮತ್ತೊಂದೆ ಡೆ ರಾಜಕೀಯ ನಾಯಕರು ಅವರನ್ನು ಹೀಗೆ ಲೇವಡಿ ಮಾಡುವ ಕೆಲಸದಲ್ಲಿ ವ್ಯಸ್ತರಾಗಿ ದ್ದರು!

ಮೌನಿ ಅಮಾವಾಸ್ಯೆ ದಿನದ ಕಾಲ್ತುಳಿತಕ್ಕೆ 30ಕ್ಕೂ ಹೆಚ್ಚು ಜನರು ಅಸುನೀಗಿದ್ದು ದುರ ದೃಷ್ಟಕರ. ಕುಂಭಮೇಳದ ಚಟುವಟಿಕೆಗೆ ಇದೊಂದು ಕಪ್ಪುಚುಕ್ಕೆಯಾಗಿಬಿಟ್ಟಿತು. ಆದರೆ ಈ ಘಟನೆಯನ್ನೂ ರಾಜಕೀಯೀಕರಣಗೊಳಿಸಲಾಯಿತು. ಅಂಥ ಗಂಭೀರ ಸಂದರ್ಭ ದಲ್ಲಿಯೂ ಪೊಲೀಸರು ಕಿಂಚಿತ್ತೂ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಯಂತ್ರಣಕ್ಕೆ ತಂದರು ಎಂದು ಪ್ರತ್ಯಕ್ಷದರ್ಶಿ ಬಿಜೆಪಿ ನಾಯಕ ಗಣೇಶ್ ಕೃಷ್ಣಮೂರ್ತಿ ಹೇಳುತ್ತಾರೆ. ದೆಹಲಿಯ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 18 ಜನ ಅಸುನೀಗಿದರು, ಇಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿತ್ತು. ಈ ಎರಡು ಅವಘಡಗಳನ್ನು ಹೊರತುಪಡಿಸಿದರೆ ಕುಂಭಮೇಳವು ಅಚ್ಚುಕಟ್ಟಾಗಿ, ಸುವ್ಯವಸ್ಥೆ ಯೊಂದಿಗೆ ನಿರ್ವಹಿಸಲ್ಪಟ್ಟಿತು.

ಹತ್ತಾರು ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿದಾಗ, ಕುಂಭಮೇಳದ ವಿರೋಧಿಗಳು ವಾಸ್ತವಿಕತೆಯ ಅರಿವೇ ಇಲ್ಲದೆ, “ಯಾವ ವ್ಯವಸ್ಥೆಯೂ ಸರಿಯಾಗಿಲ್ಲ" ಎಂದು ಅರಚಾಡಿ ದರು. ಆದರೆ ಉತ್ತರ ಪ್ರದೇಶದ ಪೊಲೀಸರು ಪ್ರತಿದಿನ ಹೊಸ ಹೊಸ ಸವಾಲನ್ನು ಎದುರಿಸಿ, ಅವು ಮತ್ತೆ ಮರುಕಳಿಸದ ಹಾಗೆ ವ್ಯವಸ್ಥೆ ಕೈಗೊಳ್ಳುತ್ತಿದ್ದರು. ಇವರ ಮಿಂಚಿನ ಪ್ರತಿಕ್ರಿಯೆ ಗಳು ಸಂವೇದನಾಶೀಲ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಹಾಗೆ ನೋಡಿದರೆ, ಬೆಂಗಳೂರಿನ ‘ಏರೋ ಇಂಡಿಯಾ’ ಪ್ರದರ್ಶನಕ್ಕೆ ಬಂದಿದ್ದ ನಾಲ್ಕೈದು ಸಾವಿರ ವಾಹನಗಳ ದಟ್ಟಣೆ ನಿರ್ವಹಿಸಲು ಪೊಲೀಸರು ಪರದಾಡಿದರು. ಈ ದಟ್ಟಣೆಯಲ್ಲಿ ಸಿಲುಕಿದ ಜರ್ಮನಿ ಪೈಲಟ್‌ಗಳು ತಾವು ನೀಡಬೇಕಿದ್ದ ಪ್ರದರ್ಶನದಿಂದ ವಂಚಿತರಾದರು.

ಗೊಂದಲದ ಗೂಡಾಗಿದ್ದ ಅಖಿಲೇಶ್ ಯಾದವ್: ಹಿಂದೂಗಳ ಜಾಗೃತಿಯು ಸಹಜ ವಾಗಿ ಢೋಂಗಿ ಜಾತ್ಯತೀತವಾದಿಗಳ ನಿದ್ರೆಗೆಡಿಸಿರುವುದು ಸುಳ್ಳಲ್ಲ. ಊಹೆಗೆ ನಿಲುಕದಷ್ಟು ಜನರು ಈ ಮಹಾಕುಂಭದಲ್ಲಿ ಪಾಲ್ಗೊಂಡಿದ್ದನ್ನು ಕಂಡು ಅವರು ತಬ್ಬಿಬ್ಬಾಗಿ ಹೋಗಿ ದ್ದಾರೆ. ಹಿಂದೂ ಸಮಾಜದ ಸಂಸ್ಕೃತಿ, ನಂಬಿಕೆಯ ವಿಷಯದಲ್ಲಿ ತಾವು ದಶಕಗಳಿಂದ ಮಾಡುತ್ತಲೇ ಬಂದಿದ್ದ ಅಪಪ್ರಚಾರವು ತ್ರಿವೇಣಿ ಸಂಗಮದಲ್ಲಿ ತೊಳೆದುಹೋಗಿದ್ದಕ್ಕೆ ಇವರೆಲ್ಲಾ ಆಘಾತಕ್ಕೆ ಒಳಗಾಗಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಮಹಾಕುಂಭವನ್ನು ಹೊಗಳಲು ಇಷ್ಟವಿಲ್ಲ; ಆದರೆ ಜನರ ಭಯದಿಂದಾಗಿ ತೆಗಳಲು ಸಾಧ್ಯವಾಗದೆ ಸಮಯ ದೊರೆತಾಗ ಲೆಲ್ಲಾ ಅವರು ಕುಂಭದ ವ್ಯವಸ್ಥೆಯನ್ನು ಟೀಕಿಸುತ್ತಿದ್ದರು. ಅಖಿಲೇಶ್‌ರವರು ಸರಕಾರ ಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, “ಕುಂಭಮೇಳದಲ್ಲಿ 60 ಕೋಟಿ ಜನರು ಭಾಗಿಯಾಗಿ ದ್ದಾರೆ, ಸರಕಾರವು ಕೇವಲ 50 ಕೋಟಿ ಎನ್ನುತ್ತಿದೆ; ಕುಂಭಮೇಳವನ್ನು ಕೆಲವು ದಿನಗಳ ವರೆಗೆ ವಿಸ್ತರಿಸಬೇಕು" ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಮಹಾಕುಂಭದ ಬಗ್ಗೆ ಟೀಕಿಸಿ ಟೀಕಿಸಿ ಸುಸ್ತಾಗಿ ಹೋಗಿದ್ದರು. ಜನ್ಮದತ್ತವಾದ ಧಾರ್ಮಿಕ ನಂಬಿಕೆಯನ್ನು ನಕಾರಾತ್ಮಕ ಪ್ರಚಾರದಿಂದ ಅಲುಗಾಡಿ ಸುವುದು ಅಸಾಧ್ಯ ಎಂಬ ಸಾಮಾನ್ಯ ಜ್ಞಾನವೂ ಇವರಿಗೆ ಇರಲಿಲ್ಲ.

ಕುಂಭ ವಿರೋಧಿಗಳು ಅಪಪ್ರಚಾರಕ್ಕೆ ಆಯ್ದುಕೊಂಡ ಮತ್ತೊಂದು ಅಸವೆಂದರೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಯ (ಎನ್‌ಜಿಟಿ) ಮುಂದೆ ಸಲ್ಲಿಸಿದ್ದ ‘ಸಂಗಮದ ನೀರಿನ ಗುಣಮಟ್ಟ ಸರಿಯಿಲ್ಲ’ ಎಂಬ ಧಾಟಿ ಯ ಪ್ರಮಾಣಪತ್ರ. ಆದರೆ ವಿರೋಧಿಗಳಿಗೆ ಇಲ್ಲಿಯೂ ನಿರಾಶೆ ಕಾದಿತ್ತು. ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯು, ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ತಳ್ಳಿಹಾಕಿ, ‘ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿದೆ’ ಎಂದು ನ್ಯಾಯಾಲಯದ ಮುಂದೆ ಪ್ರಮಾಣಪತ್ರವನ್ನು ಸಲ್ಲಿಸಿತು.

ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ. ಅಜಯ್ ಸೋನ್‌ಕರ್ ಅವರು ನೀರಿನ ಪರೀಕ್ಷೆಯ ನಂತರ, ‘ಗಂಗಾನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕದಿಂದ ಚರ್ಮ ರೋಗವೂ ಉಂಟಾಗುವುದಿಲ್ಲ’ ಎಂದು ವರದಿ ನೀಡಿದರು. ಉತ್ತರ ಪ್ರದೇಶ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕುಂಭಮೇಳದ ಟೀಕಾಕಾರರಿಗೆ ಉತ್ತರಿಸುತ್ತಾ, “ರಣಹದ್ದುಗಳಿಗೆ ಶವಗಳೇ ಕಂಡವು, ಹಂದಿಗಳಿಗೆ ಹೊಲಸು ಕಾಣಿಸಿತು, ಆಸ್ತಿಕರು ಆಶೀರ್ವಾದ ಪಡೆದರು, ಭಕ್ತರಿಗೆ ದೇವರ ದರ್ಶನವಾಯಿತು. ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂಥವು ಕಾಣಿಸಿವೆ" ಎನ್ನುವ ಮೂಲಕ ಜೀವನದಲ್ಲಿ ಮರೆಯಬಾರದ ಹಾಗೆ ತಿರುಗೇಟು ನೀಡಿದರು.

ಮಹಾಕುಂಭ ಮೇಳದಲ್ಲಿ ಅವಘಡಗಳು ಸಂಭವಿಸಲಿ ಎಂದು ಅನೇಕ ವಿಘ್ನ ಸಂತೋಷಿ ಗಳು ರಣಹದ್ದುಗಳ ಹಾಗೆ ಕಾದು ಕುಳಿತಿದ್ದು ಸುಳ್ಳಲ್ಲ. ಮೇಳದ ವ್ಯವಸ್ಥೆಯಲ್ಲಿ ಕೊಂಚ ಏರುಪೇರಾದರೂ ಯೋಗಿ ಸರಕಾರಕ್ಕೆ ಮಸಿ ಬಳಿಯಲು ಇವರೆಲ್ಲ ತುದಿಗಾಲಲ್ಲಿ ನಿಂತಿ ದ್ದರು. ಆದರೆ ಯೋಗಿಯವರು ಸುದೈವದಿಂದ, ಯಾವುದೇ ಅನಾಹುತ ಸಂಭವಿಸದ ಹಾಗೆ ಕುಂಭಮೇಳವನ್ನು ಸುವ್ಯವಸ್ಥಿತವಾಗಿ ನಡೆಸಿ ಇವರೆಲ್ಲರ ಆಸೆಗೆ ತಣ್ಣೀರು ಎರಚಿಬಿಟ್ಟರು.

ಮಹಾಕುಂಭಮೇಳದ ಅಭೂತಪೂರ್ವ ಯಶಸ್ಸು ಯೋಗಿ ಆದಿತ್ಯನಾಥರ ವರ್ಚಸ್ಸನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ದಿದೆ. ಒಬ್ಬ ಸಮರ್ಥ ನಾಯಕ ಮತ್ತು ಸೂಕ್ತ ಮಾರ್ಗ ದರ್ಶನ ದೊರೆತರೆ ಸರಕಾರಿ ಯಂತ್ರವೂ ಹೇಗೆ ಲೋಪವಿಲ್ಲದೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕುಂಭಮೇಳದ ಯಶಸ್ಸು ಸಾಬೀತುಪಡಿಸಿತು.

ಅಯೋಧ್ಯೆ-ಕಾಶಿಗೂ ಹಬ್ಬಿದ ಸುನಾಮಿ: ಕೇವಲ ಪ್ರಯಾಗವಲ್ಲದೆ, ಅಯೋಧ್ಯೆ ಮತ್ತು ವಾರಾಣಸಿಗೂ ಲಕ್ಷಾಂತರ ಭಕ್ತರು ಭೇಟಿ ನೀಡಿ, ಮಂದಿರ ಪ್ರವಾಸೋದ್ಯಮದ ಹೆಬ್ಬಾಗಿಲು ತೆರೆದರು. 2014ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬಂದ ತರುವಾಯದಲ್ಲಿ, ಕಾಶಿ ಕಾರಿಡಾರ್, ಉಜ್ಜಯಿನಿ ಕಾರಿಡಾರ್, ಶ್ರೀರಾಮಮಂದಿರಗಳ ನಿರ್ಮಾಣವಾಗಿ, ಈ ಪುಣ್ಯ ಕ್ಷೇತ್ರಗಳಿಗೆ ಅಸಂಖ್ಯಾತ ಸನಾತನಿಗಳು ಮುಗಿಬಿದ್ದು ಭೇಟಿ ನೀಡುತ್ತಿದ್ದಾರೆ.

ತತ್ಪರಿಣಾಮವಾಗಿ ಮಂದಿರ ಪ್ರವಾಸೋದ್ಯಮ ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುತ್ತಿದೆ ಮತ್ತು ಆಯಾ ನಗರಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಿಗುತ್ತಿದೆ. ಅಯೋಧ್ಯೆ ಮತ್ತು ಕಾಶಿಗೆ ಹೀಗೆ ಹೆಚ್ಚಿನ ಸಂಖ್ಯೆ ಯಲ್ಲಿ ತೆರಳುತ್ತಿದ್ದ ವಾಹನಗಳ ನಿಯಂತ್ರಣ ಅತ್ಯವಶ್ಯಕವಾಗಿತ್ತು. ಎರಡೂ ನಗರಗಳ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಪೊಲೀಸರಿಗೆ ಸವಾಲಾಗಿತ್ತು.

ಹಿರಿಯ ಅಧಿಕಾರಿಗಳು ರಸ್ತೆಗಳಲ್ಲೇ ಬೀಡುಬಿಟ್ಟು, ಸಂಚಾರ ದಟ್ಟಣೆಗೆ ಅವಕಾಶವಾಗ ದಂತೆ ಎಚ್ಚರ ವಹಿಸುತ್ತಿದ್ದರು. ನನಗೆ ಕಂಡುಬಂದ ವಿಶೇಷತೆಯೆಂದರೆ, ವಾಹನಗಳು ಸಾಲುಗಟ್ಟಿ ನಿಂತರೂ ಜನರು ಬೇಸರಿಸಿಕೊಳ್ಳದೆ ತಾಳ್ಮೆಯಿಂದ ಕಾಯುತ್ತಿದ್ದರು. ಪೊಲೀಸ ರೊಂದಿಗೆ ವಾಗ್ವಾದಕ್ಕೆ ಹೋಗುತ್ತಿರಲಿಲ್ಲ. ಎಲ್ಲಿಯೂ ಲೇನ್ ತಪ್ಪಿಸಿ ಹೋಗಿ ಗೊಂದಲ ಸೃಷ್ಟಿಸುವ ಸಂದರ್ಭ ಕಾಣಿಸಲೇ ಇಲ್ಲ. ಇದು ನನ್ನೊಬ್ಬನ ಅನುಭವವಲ್ಲ, ಕುಂಭ ಮೇಳಕ್ಕೆ ತೆರಳಿದ ನನ್ನ ಅನೇಕ ಸ್ನೇಹಿತರಿಗೂ ಆಗಿರುವಂಥದ್ದು.

ಅಯೋಧ್ಯೆ ಮತ್ತು ಕಾಶಿ ನಗರಗಳು 45 ದಿನಗಳ ಕಾಲ ಹೌಸ್ ಫುಲ್ ಆಗಿದ್ದವು. ವಿಶೇಷವಾಗಿ ಕಾಶಿಯ ನಿವಾಸಿಗಳಿಗೆ ಅನಿವಾರ್ಯ ಕೆಲಸವಿದ್ದರೆ ಮಾತ್ರ ವಾಹನಗಳನ್ನು ಹೊರತೆಗೆಯು ವಂತೆ ವಿನಂತಿಸಿಕೊಳ್ಳಲಾಗಿತ್ತು. ಶಾಲಾ-ಕಾಲೇಜುಗಳು ‘ಆನ್‌ಲೈನ್ ಮೋಡ್’ಗೆ ಹೋದವು. ಜನದಟ್ಟಣೆ ಹೆಚ್ಚಾಗಿ ಅವಘಡ ತಪ್ಪಿಸಲು ಕಾಶಿಯ ಪವಿತ್ರ ಗಂಗಾರತಿಯನ್ನು ರದ್ದು ಗೊಳಿಸಲಾಗಿತ್ತು.

ಲಕ್ಷಾಂತರ ಜನರು ಒಮ್ಮೆಗೇ ಬಂದಿದ್ದರಿಂದ, ಎರಡೂ ನಗರಗಳ ಜನಜೀವನ ಅಸ್ತವ್ಯಸ್ತ ವಾಗಿದ್ದವು. ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ; ರುದ್ರಾಕ್ಷಿ ಮಾಲೆ, ತುಳಸಿಮಾಲೆ, ಬಳೆಗಳು, ವಿವಿಧ ಪೂಜಾಸಾಮಗ್ರಿಗಳು ಬಿಸಿದೋಸೆಯಂತೆ ಖರ್ಚಾಗುತ್ತಿದ್ದವು. ಕಾಶಿಯ ಜನಪ್ರಿಯ ತಿನಿಸಿನ ಅಂಗಡಿಗಳಿಗೆ ಜನರು ದಾಂಗುಡಿಯಿಟ್ಟಿದ್ದರು.

ಊಹೆಗೂ ನಿಲುಕದಷ್ಟು ಸಂಖ್ಯೆಯಲ್ಲಿದ್ದ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀ ದಿಸುವುದನ್ನು ನೋಡುವುದೇ ಒಂದು ಹಬ್ಬವಾಗಿತ್ತು. ಕಳೆದ ಒಂದು ವರ್ಷದಲ್ಲಿ ಅಯೋಧ್ಯೆಯು ದೇಶದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿ ಸಿಕೊಂಡಿದೆ.

ಕುಂಭಮೇಳದ ಫಲಶ್ರುತಿಯಾಗಿ ಕಳೆದ 45 ದಿನಗಳಲ್ಲಿ ಇಲ್ಲಿಗೆ 1.25 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಯಾಗ, ವಾರಾಣಸಿ ಮತ್ತು ಅಯೋಧ್ಯೆ ಈ ಮೂರೂ ಕ್ಷೇತ್ರಗಳು ಅತಿದೊಡ್ಡ ತೀರ್ಥಕ್ಷೇತ್ರಗಳಾಗಿ ಅಭಿವೃದ್ಧಿ ಹೊಂದಲಿವೆ. ಜನ ದಟ್ಟಣೆಯ ನಿಯಂತ್ರಣದ ಬಗ್ಗೆ ಅಧ್ಯಯನ ಮಾಡಲು ಮಹಾಕುಂಭಮೇಳಕ್ಕೆ ಬನ್ನಿ ಎಂದು ಪೊಲೀಸ್ ಅಕಾಡೆಮಿಗೆ ಯೋಗಿಯವರು ಆಹ್ವಾನ ನೀಡಿದ್ದರು. ಇತ್ತೀಚಿನ ದಿನಗ ಳಲ್ಲಿ ಅನೇಕ ಧಾರ್ಮಿಕ ಮತ್ತು ಮಠ-ಮಂದಿರಗಳ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ.

ಅಂಥ ಸಂದರ್ಭದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ, ಮಹಾಕುಂಭದ ಅನು ಭವವು ನೆರವಾಗಬಲ್ಲದು ಮತ್ತು ಸೂಕ್ತ ಮಾರ್ಗದರ್ಶಿ ಸೂತ್ರವನ್ನು ರಚಿಸುವಲ್ಲಿ ಅದು ಪೂರಕವಾಗಬಲ್ಲದು. ಮೋದಿಯವರ ‘ವಿಕಸಿತ ಭಾರತ’ ಪರಿಕಲ್ಪನೆಗೆ ಮಹಾ ಕುಂಭ ಮೇಳವು ಮುನ್ನುಡಿಯಾಗಿದೆ. ಬದಲಾಗುತ್ತಿರುವ ಭಾರತವು 66 ಕೋಟಿ ಜನರು ಭಾಗ ವಹಿಸಿದ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ, ಸುರಕ್ಷಿತವಾಗಿ ನಿರ್ವಹಿಸಿ, ಬದಲಾದ ಭಾರತದ ಅಗಾಧ ಶಕ್ತಿ ಮತ್ತು ಕರ್ತೃತ್ವ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ.

ಹಿಂದೂ ಸಮಾಜವು ತನ್ನ ಜಡತ್ವವನ್ನು ಕೊಡವಿಕೊಂಡು ಎದ್ದು ನಿಂತಿದೆ. ಧರ್ಮ ಜಾಗೃತಿಯು ಎಲ್ಲೆಡೆ ಪಸರಿಸಿದೆ. ಸನಾತನ ಧರ್ಮವನ್ನು ನಾಶಮಾಡಬೇಕು ಎಂದು ಕನಸು ಕಾಣುತ್ತಿರುವವರಿಗೆ, ವಿಕೃತ ಮನಸ್ಸಿನ ಶಕ್ತಿಗಳಿಗೆ ‘ಹಿಂದೂ ಸಮಾಜವನ್ನು ಕೆಣಕುವ ಕಾಲ ಈಗಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಕುಂಭಮೇಳ ರವಾನಿಸಿದೆ.

(ಲೇಖಕರು ಬಿಜೆಪಿಯ ವಕ್ತಾರರು)