Sleep Divorce: ಚೆನ್ನಾಗಿ ನಿದ್ರೆ ಮಾಡೋಕೆ ಸ್ಲೀಪ್ ಡೈವೋರ್ಸ್ ತಗೋಳೋದಾ...? ಏನಿದು ಹೊಸ ವಿಷ್ಯ...?
ಇಂದಿನ ಯುಗದಲ್ಲಿ ಡಿವೋರ್ಸ್ ಎನ್ನುವುದು ಸಾಮಾನ್ಯ ಸಂಗತಿಯಾಗಿದ್ದು, ಅದರಲ್ಲಿ ವಿಚಿತ್ರ ವಿಚಿತ್ರ ಡಿವೋರ್ಸ್‌ಗಳಿದೆ. ಅದರಲ್ಲಿ ಸದ್ಯ ಟ್ರೆಂಡ್ ಆಗಿರುವುದು ಎಂದರೆ ಅದುವೇ ಸ್ಲೀಪ್ ಡಿವೋರ್ಸ್. ಸ್ಲೀಪಿಂಗ್ ಡಿವೋರ್ಸ್ (Sleeping divorce) ಭಾರೀ ಸದ್ದು ಮಾಡುತ್ತಿದೆ. ಅರೇ ಇದ್ದೇನಪ್ಪಾ ಸ್ಲೀಪ್ ಡಿವೋರ್ಸ್ ಎಂದು ಯೋಚಿಸುತ್ತಿದ್ದೀರಾ...? ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಸ್ಲೀಪ್ ಡಿವೋರ್ಸ್

ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆಧುನಿಕ ಕಾಲದ ಜೀವನ ಪದ್ಧತಿ, ಒತ್ತಡ, ಹೊಂದಾಣಿಕೆ ಕೊರತೆ ಹೀಗೆ ಹತ್ತು ಹಲವು ಕಾರಣಗಳಿಂದ ವಿಚ್ಛೇದನ ಪ್ರಕರಣಗಳು ಪ್ರಮಾಣ ಜಾಸ್ತಿ ಆಗುತ್ತಿದೆ. ಕಷ್ಟವೋ ನಷ್ಟವೋ, ಸುಖವೋ ದುಃಖವೋ ದಾಂಪತ್ಯ ಎನ್ನುವುದು ಏಳು ಜನ್ಮದ ಸಂಬಂಧ ಎನ್ನುವ ಆದರ್ಶಗಳೆನೆಲ್ಲಾ ಗಾಳಿಯಲ್ಲಿ ತೂರಿ ಬಿಟ್ಟಿದ್ದು, ಈ ಆಚಾರ-ವಿಚಾರ, ಸಂಪ್ರಾದಾಯ ಕಟ್ಟುಪಾಡುಗಳು ಡಂಬಾಚಾರದಂತೆ ಕಾಣತ್ತಿದೆ. ಕೂಡು ಕುಟುಂಬ ಹಾಗೂ ದೊಡ್ಡ ಕುಟುಂಬಗಳು ಈ ಕಾಲಯ ಯುವಜನತೆಗೆ ಹೆಚ್ಚು ಕಡಿಮೆ ಅಲರ್ಜಿ ಅನಿಸಲು ಶುರುವಾಗಿದೆ. ಈ ನಡುವೆ ಮತ್ತೊಂಡು ಟ್ರೆಂಡ್ ಶುರು ಆಗಿದ್ದು, ಸ್ಲೀಪಿಂಗ್ ಡಿವೋರ್ಸ್ (Sleeping divorce) ಭಾರೀ ಸದ್ದು ಮಾಡುತ್ತಿದೆ. ಅರೇ ಇದ್ದೇನಾಪ್ಪ ಸ್ಲಿಪ್ ಡಿವೋರ್ಸ್ ಎಂದು ಯೋಚಿಸುತ್ತಿದ್ದೀರಾ...? ಇಲ್ಲಿದೆ ನೋಡಿ ಅದಕ್ಕೆ ಉತ್ತರ
ಸ್ಲೀಪಿಂಗ್ ಡಿವೋರ್ಸ್ ಎಂದರೇನು?
ಸ್ಲೀಪಿಂಗ್ ಡಿವೋರ್ಸ್ (Sleeping divorce) ಎಂದರೆ ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಆಯ್ಕೆ ಮಾಡುತ್ತಾರೆ. ಈ ಟ್ರೆಂಡ್ ನಮ್ಮ ಪ್ರಸ್ತುತ ಜೀವನಶೈಲಿ ಮತ್ತು ಕೆಲಸದ ಸಂಸ್ಕೃತಿಯಿಂದ ಆರಂಭವಾಗಿದೆ. ಯಾವುದೇ ಒಬ್ಬ ಸಂಗಾತಿಗೆ ರಾತ್ರಿ ಪಾಳಿ ಇದ್ದರೆ, ಗೊರಕೆ ಅಭ್ಯಾಸ ಅಥವಾ ರಾತ್ರಿ ತಡವಾಗಿ ಫೋನಿನಲ್ಲಿ ಮಾತನಾಡುವ ಅಭ್ಯಾಸ ಅಥವಾ ಕೆಲಸವಿದ್ದರೆ ಇನ್ನೊಬ್ಬ ಸಂಗಾತಿಯ ನಿದ್ರೆಗೆ ಭಂಗ ತರುತ್ತದೆ. ಅದಕ್ಕೆ ಪರಿಹಾರವೆಂದರೆ ಸ್ಲೀಪಿಂಗ್ ಡಿವೋರ್ಸ್. ಈ ಟ್ರೆಂಡ್ ನಗರಗಳಲ್ಲಿ ಹೆಚ್ಚಾಗಿದೆ.
ಹೌದು ಉತ್ತಮ ನಿದ್ರೆಯನ್ನು ಹೊಂದಲು ಹೆಚ್ಚಿನ ದಂಪತಿಗಳು ಈ ಸ್ಲೀಪ್ ಡಿವೋರ್ಸ್ ನ ಮೊರೆ ಹೋಗುತ್ತಿದ್ದು, ಸತಿ-ಪತಿಗಳು ಇಬ್ಬರು ಪ್ರತ್ಯೇಕವಾಗಿ ಮಲಗುವ ನಿಯಮವನ್ನು ಹಾಕಿಕೊಳ್ಳುತ್ತಿದ್ದಾರೆ. ಚೆನ್ನಾಗಿ ನೆಮ್ಮದಿಯಾಗಿ ಮಲಗಬೇಕೆಂಬ ದೃಷ್ಟಿಯಿಂದ ಸಂಗಾತಿಗಳು ಬೇರೆ ಬೇರೆ ಕೋಣೆಗಳಲ್ಲಿ ಪ್ರತ್ಯೇಕವಾಗಿ ಮಲಗುವುದೇ ಸ್ಲೀಪ್ ಡಿವೋರ್ಸ್ ಆಗಿದ್ದು, ಸಾಮಾನ್ಯವಾಗಿ ದಂಪತಿಗಳು ಒಂದೇ ಕೋಣೆಯಲ್ಲಿ ಒಟ್ಟಿಗೆ ಮಲಗುತ್ತಾರೆ. ಆದ್ರೆ ಈ ಸ್ಲೀಪ್ ಡಿವೋರ್ಸ್ ಪ್ರವೃತ್ತಿಯಲ್ಲಿ ಗಂಡ-ಹೆಂಡತಿ ಬೇರೆ ಬೇರೆ ಮಲಗುತ್ತಾರೆ. ಯಾವುದೇ ಡಿಸ್ಟರ್ಬ್ ಇಲ್ಲದೆ ಉತ್ತಮ ನಿದ್ರೆಯನ್ನು ಪಡೆಯುವುದು ಸ್ಲೀಪ್ ಡಿವೋರ್ಸ್‌ನ ಮೂಲ ಉದ್ದೇಶವಾಗಿದೆ. ಇಲ್ಲಿ ದಂಪತಿಗಳು ದೈಹಿಕವಾಗಿ ಬೇರೆಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಜೊತೆಯಾಗಿರುತ್ತಾರೆ.
ಈ ಸುದ್ದಿಯನ್ನು ಓದಿ: Viral Video: ಶಾಪಿಂಗ್ ಮಾಲ್‌ನ ಬಾಲ್ಕನಿಯಿಂದ ಹುಡುಗರು ಕೆಳಗೆ ಎಸೆದಿದ್ದೇನು? ಕಿಡಿಕಾರಿದ ನೆಟ್ಟಿಗರು!
ಇನ್ನು ಇದರ ಪ್ರಯೋಜನಗಳ ಬಗ್ಗೆ ಹೇಳೋದಾದ್ರೆ, ಸ್ಲೀಪಿಂಗ್ ಡಿವೋರ್ಸ್ ಟ್ರೆಂಡ್ ತುಂಬಾ ವೇಗವಾಗಿ ಜನಪ್ರಿಯವಾಗುತ್ತಿದೆ ಮತ್ತು ಕಪಲ್ಸ್ ಸಹ ಅದನ್ನು ಫಾಲೋ ಮಾಡ್ತಿದ್ದಾರೆ. ದೇಹ ಚೆನ್ನಾಗಿರಲು ಆಹಾರ ಮತ್ತು ನಿದ್ರೆ ಎರಡು ತುಂಬಾ ಮುಖ್ಯ. ಈ ಎರಡು ವಿಷಯಗಳ ಕೊರತೆ ಇಡೀ ದಿನಚರಿಯನ್ನು, ಉತ್ತಮ ಸಂಬಂಧವನ್ನು ಸಹ ಹಾಳು ಮಾಡಬಹುದು. ಸ್ಲೀಪಿಂಗ್ ಡಿವೋರ್ಸಿನಿಂದ ವೈವಾಹಿಕ ಜೀವನಹಾಳಾಗುತ್ತೆ ಎಂದು ತಿಳ್ಕೊಳ್ಳೋದು ಬೇಡ, ಆದರೆ ವ್ಯಕ್ತಿಯು ಆರಾಮವಾಗಿದ್ದರೆ, ವೈವಾಹಿಕ ಜೀವನವೂ ಚೆನ್ನಾಗಿರುತ್ತೆ.
ಜೊತೆಗೆ ಇದರಿಂದ ಅವರ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂಬ ನಂಬಿಕೆ ಅವರಲ್ಲಿದ್ದು, ಉತ್ತಮ ನಿದ್ರೆಯು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ದೈನಂದಿನ ಜೀವನ ಹಾಗೂ ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ನಿದ್ರೆಯ ಕೊರತೆ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಆದ್ರೆ ಸ್ಲೀಪಿಂಗ್ ಡಿವೋರ್ಸ್ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ದಂಪತಿ ಹೆಚ್ಚು ವಿಶ್ರಾಂತಿ, ಶಾಂತವಾಗಿರಬಹುದು.