ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಪಿಂಗ್‌ ಮಾಲ್‌ನ ಬಾಲ್ಕನಿಯಿಂದ ಹುಡುಗರು ಕೆಳಗೆ ಎಸೆದಿದ್ದೇನು ಗೊತ್ತಾ? ಕಿಡಿಕಾರಿದ ನೆಟ್ಟಿಗರು!

ಲಂಡನ್‍ನ ಸ್ಟ್ರಾಟ್‌ಫೋರ್ಡ್‌ ವೆಸ್ಟ್‌ಫೀಲ್ಡ್‌ ಶಾಪಿಂಗ್ ಸೆಂಟರ್‌ನಲ್ಲಿ ಹದಿಹರೆಯದ ಹುಡುಗರಿಬ್ಬರು ಮೂರನೇ ಮಹಡಿಯಿಂದ ಭಾರವಾದ ಸೀಟನ್ನು ಕೆಳಗೆ ಎಸೆದಿದ್ದಾರೆ. ಅವರು ಸೀಟನ್ನು ಕೆಳಗೆ ಎಸೆದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರನ್ನು ಬೆಚ್ಚಿ ಬೀಳಿಸಿದೆ.

ಮೂರನೇ ಮಹಡಿಯಿಂದ ಈ ವಸ್ತುವನ್ನು ಬಿಸಾಡಿದ ಕಿಡಿಗೇಡಿಗಳು!

Profile pavithra Mar 6, 2025 4:28 PM

ಲಂಡನ್: ಲಂಡನ್‍ನ ಸ್ಟ್ರಾಟ್‌ಫೋರ್ಡ್‌ ವೆಸ್ಟ್‌ಫೀಲ್ಡ್‌ ಶಾಪಿಂಗ್ ಸೆಂಟರ್‌ನಲ್ಲಿ ಹದಿಹರೆಯದ ಹುಡುಗರಿಬ್ಬರು ಭಾರವಾದ ಸೀಟನ್ನು ಹೊತ್ತುಕೊಂಡು ಕೆಳಗೆ ತರುವ ಬದಲು ಮೂರನೇ ಮಹಡಿಯಿಂದ ಭಾರವಾದ ಸೀಟನ್ನು ಕೆಳಗೆ ಎಸೆದಿದ್ದಾರೆ. ಈ ಆರೋಪದ ಮೇಲೆ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಸೀಟ್‌ವೊಂದನ್ನು ಕೆಳಗೆ ಎಸೆದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮಾರ್ಚ್ 1ರ ಶನಿವಾರ ನಡೆದಿದ್ದು, ಈ ಕೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ವೈರಲ್ ವಿಡಿಯೊದಲ್ಲಿ ಸೀಟನ್ನು ಮಹಡಿಯಿಂದ ಕೆಳಗೆ ಎಸೆಯುವುದು ಹಾಗೂ ನಂತರ ಹುಡುಗರು ಎಸ್ಕಲೇಟರ್ ಮೇಲೆ ಓಡಾಡುವುದು ರೆಕಾರ್ಡ್ ಆಗಿದೆ. ಹುಡುಗರು ಸೀಟನ್ನು
ಮೇಲಿನಿಂದ ಕೆಳಗೆ ಎಸೆದಾಗ ಅಲ್ಲಿ ಕೆಳಗಡೆ ಹಲವು ಜನರು ಓಡಾಡುತ್ತಿದ್ದರು. ಅದು ಅಪ್ಪಿತಪ್ಪಿ ಯಾರ ಮೇಲಾದರೂ ಬಿದ್ದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ದುರಂತ ಸಂಭವಿಸಿಲ್ಲ.



ವರದಿ ಪ್ರಕಾರ, ಕ್ರಿಮಿನಲ್ ಹಾನಿಯ ಅನುಮಾನದ ಮೇಲೆ 14 ವರ್ಷ ಮತ್ತು 16 ವರ್ಷದ ಹುಡುಗರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇಬ್ಬರೂ ಶಂಕಿತರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರಂತೆ. ವೆಸ್ಟ್‌ಫೀಲ್ಡ್‌ ಮ್ಯಾನೇಜ್‌ಮೆಂಟ್‌ ಕೂಡ ಈ ಘಟನೆಯನ್ನು ಒಪ್ಪಿಕೊಂಡಿದೆ. ಇನ್ಸ್‌ಪೆಕ್ಟರ್‌ ಡಾನ್ ವಿಂಡೋ ಈ ಕೃತ್ಯದ ಕುರಿತು ಮಾತನಾಡಿದ್ದಾರೆ. ಇಂತಹ ಘಟನೆಯಿಂದ ದುರಂತಗಳು ಸಂಭವಿಸಬಹುದು ಮತ್ತು ಭಾಗಿಯಾಗಿರುವ ಎಲ್ಲರನ್ನೂ ಗುರುತಿಸಿ ತನಿಖೆ ನಡೆಸುತ್ತೇವೆ ಎಂದು ವಿಂಡೋ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಕೃತ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಹದಿಹರೆಯದವರ ಅಜಾಗರೂಕ ನಡವಳಿಕೆಯನ್ನು ಖಂಡಿಸಿದ್ದಾರೆ. ಈ ಘಟನೆಗೆ ಕಾರಣ ಮತ್ತು ಅದರಲ್ಲಿ ಭಾಗಿಯಾಗಿರುವ ಇತರ ಯಾವುದೇ ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಈಗ ಶಾಪಿಂಗ್ ಸೆಂಟರ್‌ನ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ಘಟನೆಯಲ್ಲಿ ಇತರರು ಭಾಗಿಯಾಗಿದ್ದರೆ ಅವರನ್ನು ಕೂಡ ಅರೆಸ್ಟ್ ಮಾಡಬಹುದು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಹೈವೇಯಲ್ಲಿ ಡ್ರಿಂಕ್ಸ್‌ ಬಾಟಲಿ ಹಿಡಿದು ಚಿಯರ್ಸ್‌ ಎಂದ ಕಿಡಿಗೇಡಿಗಳು; ಕುಡಿದ ಮತ್ತಿನಲ್ಲಿ ಮಾಡಿದ ಅವಾಂತರಗಳು ಒಂದೆರಡಲ್ಲ! ವಿಡಿಯೊ ಇದೆ

ಇಂತಹ ಅಜಾಗರುಕೃತ ಕೃತ್ಯ ನಡೆದಿರುವುದು ಇದೇ ಮೊದಲಲ್ಲ! ಇತ್ತೀಚೆಗೆ ಚಲಿಸುತ್ತಿದ್ದ ಕಾರಿನಲ್ಲಿದ್ದ ಯುವಕರು ಡ್ರಿಂಕ್ಸ್‌ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾರಿನ ವಿಂಡೋದ ಹೊರಗೆ ತಲೆ ಹಾಕಿ ನಿಂತಿದ್ದಾರೆ. ಹಾಗೇ ಬೈಕ್‌ನಲ್ಲಿದ್ದ ಯುವಕರು ಕೈಯಲ್ಲಿ ಡ್ರಿಂಕ್ಸ್‌ ಬಾಟಲಿ ಹಿಡಿದುಕೊಂಡು ಅವರನ್ನು ಫಾಲೋ ಮಾಡಿರುವುದು ಸೆರೆಯಾಗಿದೆ. ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿಯ ದಿದೌಲಿ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ.ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹೆದ್ದಾರಿಯಲ್ಲಿ ಅಜಾಗರೂಕ ಸ್ಟಂಟ್‍ನಲ್ಲಿ ತೊಡಗಿರುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಿದೌಲಿ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.