Rekhachithram: ಒಟಿಟಿಗೆ ಬಂದಿದೆ ಮಲಯಾಳಂನ ಹೊಸ ಸೀಟ್ ಎಡ್ಜ್ ಥ್ರಿಲ್ಲರ್ ಸಿನಿಮಾ: ಮಿಸ್ ಮಾಡ್ಬೇಡಿ
2025 ರಲ್ಲಿ ಸೌತ್ ಸಿನಿಮಾ ಸಖತ್ ಓಪನಿಂಗ್ ಕಂಡಿತು. ಅದರಲ್ಲೂ ಈ ಸಿನಿಮಾ ನಿರೀಕ್ಷೆಗೂ ಮೀರಿದ ಪ್ರದರ್ಶನ ಕಂಡಿತು. ಕಡಿಮೆ ಬಜೆಟ್ನಲ್ಲಿ ನಿರ್ಮಿಸಲಾದ ಈ ಸಿಮಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಆ ಸಿನಿಮಾದ ಹೆಸರು ಮಲಯಾಳಂನ 'ರೇಖಾಚಿತ್ರಂ'. ಜನವರಿ 9 ರಂದು ಯಾವುದೇ ದೊಡ್ಡ ಆಡಂಬರ, ಗದ್ದಲವಿಲ್ಲದೆ ಚಿತ್ರಮಂದಿರಗಳಲ್ಲಿ ಸೈಲೆಂಟ್ ಆಗಿ ಈ ಸಿನಿಮಾ ಬಿಡುಗಡೆಯಾಯಿತು.

Rekhachithram

ಇಂದು ಸಿನಿಮಾಗಳು (Movies) ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬರಲೆಂದೇ ಕಾದು ಕುಳಿತಿರುವ ಪ್ರೇಕ್ಷರ ವರ್ಗ ಹುಟ್ಟಿಕೊಂಡಿದೆ. ಒಟಿಟಿಯಲ್ಲೇ ಸಿನಿಮಾ ನೋಡುವ ವೀಕ್ಷಕರ ಒಂದು ವರ್ಗ ಇಂದು ಹೆಚ್ಚಾಗಿದೆ. ಶುಕ್ರವಾರ ಬಂತೆಂದರೆ ಹಿಂದೆಲ್ಲ ಎಂಜಾಯ್ ಮಾಡಲು ಔಟಿಂಗ್ ಹೋಗುತ್ತಿದ್ದ ಕೆಲ ಮಂದಿ ಈಗ ಒಟಿಟಿಯಲ್ಲಿ ಯಾವ ಸಿನಿಮಾ ರಿಲೀಸ್ ಆಗಿದೆ.. ಅದನ್ನು ನೋಡೋಣ ಎಂದು ಕಾದು ಕುಳಿತಿರುತ್ತಾರೆ. ಅಂತಹ ಸಿನಿ ಪ್ರಿಯರಿಗೆ ಈಗ ಒಂದು ಅದ್ಭುತ ಥ್ರಿಲ್ಲರ್ ಸಿನಿಮಾ ಒಟಿಟಿಗೆ ಬಂದಿದೆ.
2025 ರಲ್ಲಿ ಸೌತ್ ಸಿನಿಮಾ ಸಖತ್ ಓಪನಿಂಗ್ ಕಂಡಿತು. ಅದರಲ್ಲೂ ಈ ಸಿನಿಮಾ ನಿರೀಕ್ಷೆಗೂ ಮೀರಿದ ಪ್ರದರ್ಶನ ಕಂಡಿತು. ಕಡಿಮೆ ಬಜೆಟ್ನಲ್ಲಿ ನಿರ್ಮಿಸಲಾದ ಈ ಸಿಮಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಆ ಸಿನಿಮಾದ ಹೆಸರು ಮಲಯಾಳಂನ 'ರೇಖಾಚಿತ್ರಂ'. ಜನವರಿ 9 ರಂದು ಯಾವುದೇ ದೊಡ್ಡ ಆಡಂಬರ, ಗದ್ದಲವಿಲ್ಲದೆ ಚಿತ್ರಮಂದಿರಗಳಲ್ಲಿ ಸೈಲೆಂಟ್ ಆಗಿ ಈ ಸಿನಿಮಾ ಬಿಡುಗಡೆಯಾಯಿತು. ಇದು ನಿಗೂಢ ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ವ್ಯವಹಾರ ಮಾಡಿತು. ತಮ್ಮ ಪವರ್ಫುಲ್ ನಟನೆಗೆ ಹೆಸರುವಾಸಿಯಾದ ಆಸಿಫ್ ಅಲಿ 'ರೇಖಾಚಿತ್ರಂ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಾರ್ಚ್ 7ರಂದು ರೇಖಾಚಿತ್ರಂ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಆಗಿದೆ. ಸೋನಿ ಲೈವ್ನಲ್ಲಿ ಮಲಯಾಳಂ ಜೊತೆಗೆ ಕನ್ನಡ, ತಮಿಳು ಹಾಗೂ ಇತರೆ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಸಿನಿಮಾ ತೆರೆಕಂಡು ಭರ್ತಿ 2 ತಿಂಗಳ ನಂತರ ಒಟಿಟಿಗೆ ಬಂದಿರುವುದು ವಿಶೇಷ.
ಅನಸ್ವರ ರಂಜನ್ ಅವರು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 6 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಈ ವರ್ಷ ಅತ್ಯಧಿಕ ಗಳಿಕೆ ಮಾಡಿರುವ ಮಲಯಾಳಂ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾಗೆ ಸಿಕ್ಕಿದೆ. ರೇಖಾಚಿತ್ರಂ'ಚಿತ್ರದಲ್ಲಿ ಆಸಿಫ್ ಅಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿ ವಿವೇಕ್ ಗೋಪಿನಾಥ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ತೆಲುಗಿನ ಸೂಪರ್ ಹಿಟ್ ಆದ ತಂಡೇಲ್ ಚಿತ್ರ ಕೂಡ ಒಟಿಟಿ ಮೂಲಕ ಪ್ರಸಾರ ಆರಂಭಿಸಿದೆ. ಈ ಸಿನಿಮಾ ಥಿಯೇಟರ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ. ನೆಟ್ಫ್ಲಿಕ್ಸ್ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ನೈಜ ಘಟನೆ ಆಧಾರಿತ ಸಿನಿಮಾ ಆಗಿರುವುದರಿಂದ ಸಿನಿಮಾ ಕ್ರೇಜ್ ಹೆಚ್ಚಿಸಿಕೊಂಡಿದೆ. ಮೀನುಗಾರನೋರ್ವ ಅಂತಾರಾಷ್ಟ್ರೀಯ ಜಲ ಗಡಿ ದಾಟಿ ಪಾಕಿಸ್ತಾತನಕ್ಕೆ ಹೋಗುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
Bhoomi Shetty: ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದ್ದ ಕಿನ್ನರಿ: ಭೂಮಿ ಶೆಟ್ಟಿ ಹಾಟ್ ಫೋಟೋ ಶೂಟ್