ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Orry : ವೈಷ್ಣೋದೇವಿ ಬೇಸ್ ಕ್ಯಾಂಪ್ ಬಳಿ ಮದ್ಯಪಾನ ಮಾಡಿದ ಆರೋಪ: ಓರ್ರಿ ವಿರುದ್ಧ ಎಫ್‌ಐಆರ್‌

ವೈಷ್ಣೋ ದೇವಿ ಯಾತ್ರಾ ಸ್ಥಳದ ಬಳಿ ಮದ್ಯ ಸೇವನೆ ಮಾಡಿರುವ ಆರೋಪದ ಮೇಲೆ ಸೋಶಿಯಲ್‌ ಮೀಡಿಯಾ ಸ್ಟಾರ್‌ ಓರ್ಹಾನ್ ಅವತ್ರಮಣಿ, ಅಲಿಯಾಸ್ ಓರ್ರಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಓರ್ರಿ ಸೇರಿದಂತೆ 8 ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಸೋಶಿಯಲ್‌ ಮೀಡಿಯಾ ಸ್ಟಾರ್‌ ಓರ್ರಿ ವಿರುದ್ಧ ಎಫ್‌ಐಆರ್‌ !

ಓರ್ರಿ

Profile Vishakha Bhat Mar 17, 2025 2:24 PM

ಶ್ರೀನಗರ: ವೈಷ್ಣೋ ದೇವಿ ಯಾತ್ರಾ ಸ್ಥಳದ ಬಳಿ ಮದ್ಯ ಸೇವನೆ ಮಾಡಿರುವ ಆರೋಪದ ಮೇಲೆ ಸೋಶಿಯಲ್‌ ಮೀಡಿಯಾ ಸ್ಟಾರ್‌ ಓರ್ಹಾನ್ ಅವತ್ರಮಣಿ, ಅಲಿಯಾಸ್ ಓರ್ರಿ (Orry) ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಓರ್ರಿ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವೈಷ್ಣೋದೇವಿ ಯಾತ್ರಾ ಸ್ಥಳದಲ್ಲಿ ಕಟ್ಟುನಿಟ್ಟಾಗಿ ಮದ್ಯ ಹಾಗೂ ಮಾಂಸಹಾರವನ್ನು ನಿಷೇಧಿಸಲಾಗಿದೆ.

ಹೋಟೆಲ್ ಆಫ್ ಕತ್ರಾದಲ್ಲಿ ತಂಗಿದ್ದ ಕೆಲವು ಅತಿಥಿಗಳು ಮದ್ಯ ಸೇವಿಸುತ್ತಿರುವುದು ಕಂಡುಬಂದಿರುವ ಬಗ್ಗೆ ಬಂದಿರುವ ದೂರನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 15 ರಂದು ಓರ್ಹಾನ್ ಅವತ್ರಮಣಿ (ORRY), ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಾಶಿ ದತ್ತಾ, ರಕ್ಷಿತಾ ಭೋಗಲ್, ಶಗುನ್ ಕೊಹ್ಲಿ ಮತ್ತು ಅನಸ್ತಾಸಿಲಾ ಅರ್ಜಮಸ್ಕಿನಾ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ವೈಷ್ಣೋ ದೇವಿ ಯಾತ್ರಾ ಸ್ಥಳದ ಬಳಿ ಮದ್ಯ ಮತ್ತು ಮಾಂಸಾಹಾರಿ ಆಹಾರವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದ್ದರೂ ಇವರ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ.

ವಿಷಯದ ಗಂಭೀರತೆಯನ್ನು ಗ್ರಹಿಸಿದ ಎಸ್‌ಎಸ್‌ಪಿ ರಿಯಾಸಿ ಪರಮವೀರ್ ಸಿಂಗ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿ, ಕರ್ತವ್ಯಲೋಪ ಎಸಗಿದವರನ್ನು ಬಂಧಿಸಲು ಆದೇಶಿಸಿದರು, ಇದರಿಂದಾಗಿ ಧಾರ್ಮಿಕ ಸ್ಥಳಗಳಲ್ಲಿ ಸಾಮಾನ್ಯ ಜನರ ಭಾವನೆಗಳಿಗೆ ನೋವುಂಟುಮಾಡುವ ಯಾವುದೇ ಮಾದಕ ದ್ರವ್ಯ ಅಥವಾ ಮದ್ಯದ ಕೃತ್ಯವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿರುವ ಓರ್ರಿ, ಖುಷಿ-ಜಾನ್ವಿ ಕಪೂರ್, ನೈಸಾ ದೇವಗನ್ ಅವರ ಆಪ್ತ ಸ್ನೇಹಿತ. ಅವರು ಹೈ ಪ್ರೊಫೈಲ್ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಕಾಫಿ ವಿತ್ ಕರಣ್ 8 ಎಂಬ ಟಾಕ್ ಶೋನಲ್ಲಿಯೂ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Pan Masala Ad: ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್‌ ಖ್ಯಾತ ನಟರಿಗೆ ನ್ಯಾಯಾಲಯದಿಂದ ನೋಟಿಸ್

ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಆದಾಯದ ಪ್ರಾಥಮಿಕ ಮೂಲವನ್ನು ಬಹಿರಂಗಪಡಿಸಲು ಕೇಳಿದಾಗ, ಓರಿ ಮಾಹಿತಿ ನೀಡಿದ್ದರು. ಈ ಹಿಂದೆ, ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 17' ನಲ್ಲಿ ಕಾಣಿಸಿಕೊಂಡಾಗ, ಒರ್ರಿ ಅವರು ಕೇವಲ ಚಿತ್ರಗಳಿಗೆ ಪೋಸ್ ನೀಡಲು ಸುಮಾರು 20 ರಿಂದ 30 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು.