Rhea Chakraborty: ನಟ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ಬೆನ್ನಲೆ ನಟಿ ರಿಯಾ ಚಕ್ರವರ್ತಿ ಟೆಂಪಲ್ ರನ್
Rhea Chakraborty: ನಟಿ ರಿಯಾ ಚಕ್ರವರ್ತಿ ಕುಟುಂಬಸ್ಥರ ಜತೆಗೆ ಮುಂಬೈಯಲ್ಲಿರುವ ಪ್ರತಿಷ್ಠಿತ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಕ್ತಿ ಸಿಕ್ಕಿದ ಬೆನ್ನಲ್ಲೇ ಟೆಂಪಲ್ ರನ್ ಶುರು ಮಾಡಿರುವ ರಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ತಮ್ಮ ಕುಟುಂಬಸ್ಥರೊಂದಿಗೆ ರಿಯಾ ಚಕ್ರವರ್ತಿ.

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಆರೋಪಕ್ಕೆ ಸಿಲುಕಿದ್ದ ನಟಿ ರಿಯಾ ಚಕ್ರವರ್ತಿಗೆ (Rhea Chakraborty) ಈಗ ಕ್ಲೀನ್ ಚೀಟ್ ನೀಡಲಾಗಿದೆ. ಸುಶಾಂತ್ ಸಿಂಗ್ ಸಾವಿಗೂ ನಟಿ ರಿಯಾ ಚಕ್ರವರ್ತಿಗೂ ಸಂಬಂಧ ಇದೆ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ರಿಯಾ ಒತ್ತಡಕ್ಕೆ ಸುಶಾಂತ್ ಮೃತಪಟ್ಟರು ಎಂಬ ವದಂತಿಯೂ ಹರಿದಾಡಿತ್ತು. ಆದರೆ ಸಿಬಿಐ ಈ ಎಲ್ಲ ಆರೋಪ ತಳ್ಳಿ ಹಾಕಿ ಇದು ಆತ್ಮಹತ್ಯೆ ಎಂದು ಅಂತಿಮ ವರದಿ ನೀಡಿದೆ. ಹೀಗಾಗಿ ನಟಿ ರಿಯಾ ಮತ್ತು ಆಕೆಯ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು ಇದರ ಬೆನ್ನಲ್ಲೇ ಅವರು ಮುಂಬೈ ಸಿದ್ಧಿವಿನಾಯಕ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ನಟಿಯ ದೇಗುಲ ದರ್ಶನದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ನಟಿ ರಿಯಾ ಚಕ್ರವರ್ತಿ ಕುಟುಂಬಸ್ಥರ ಜತೆಗೆ ಮುಂಬೈಯಲ್ಲಿರುವ ಪ್ರತಿಷ್ಠಿತ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಕ್ತಿ ಸಿಕ್ಕಿದ ಬೆನ್ನಲ್ಲೇ ಟೆಂಪಲ್ ರನ್ ಶುರು ಮಾಡಿರುವ ರಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅವರ ಜತೆ ತಂದೆ ಇಂದ್ರಜಿತ್ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ ಕೂಡ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಸದ್ಯ ನಟಿಯ ಫೋಟೊಗಳು ವೈರಲ್ ಆಗಿದ್ದು ಕ್ಲೀನ್ ಚಿಟ್ ಸಿಕ್ಕಿದ್ದರಿಂದ ನಟಿಯ ಕುಟುಂಬದವರ ಮುಖದಲ್ಲಿ ನಗು ಮೂಡಿದೆ.
ಎಫ್‌ಐಆರ್‌ನಲ್ಲಿ ಉಲ್ಲೇಖವಾದ ರಿಯಾ ಮತ್ತು ಆಕೆಯ ಕುಟುಂಬವನ್ನು ಈ ಆರೋಪದಿಂದ ಮುಕ್ತಿಗೊಳಿಸಿದ ವಕೀಲ ಸತೀಶ್ ಅವರಿಗೆ ರಿಯಾ ಧನ್ಯವಾದ ತಿಳಿಸಿದ್ದಾರೆ. ನಟ ಸುಶಾಂತ್ ಸಿಂಗ್ 5 ವರ್ಷದ ಹಿಂದೆ 2020ರ ಜೂನ್ 20ರಂದು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸಾವಿನ ಬಗ್ಗೆ ಅನುಮಾನಗೊಂಡ ಸುಶಾಂತ್ ತಂದೆ ಕೆ.ಕೆ. ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪಾಟ್ನಾದಲ್ಲಿ ಈ ಬಗ್ಗೆ ದೂರು ನೀಡಿದ್ದರು. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎನಿಸಿದ್ದರು ಅದಕ್ಕೂ ಮೊದಲೇ ರಿಯಾ ಜತೆ ಬ್ರೇಕಪ್ ಆಗಿದ್ದು ಕಾರಣ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೂ ಈ ಸಾವಿಗೂ ಸಂಬಂಧ ಇರಬಹುದು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗಿತ್ತು.
ಇದನ್ನು ಓದಿ: Manada Kadalu Movie: ಯೋಗರಾಜ್ ಭಟ್ ನಿರ್ದೇಶನದ ʼಮನದ ಕಡಲುʼ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ರಾಕಿಂಗ್ ಸ್ಟಾರ್ ಯಶ್
ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಹಣವನ್ನು ರಿಯಾ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೂಡ ಎದುರಾಗಿತ್ತು. ಈಗ ಸಿಬಿಐ ತನಿಖೆ ಪೂರ್ಣಗೊಂಡಿದ್ದು, ಸುಶಾಂತ್ ನಿಧನದಲ್ಲಿ ರಿಯಾ ಕೈವಾಡ ಇಲ್ಲ ಎಂದು ಸಿಬಿಐ ಸುದೀರ್ಘ ಕಾಲ ತನಿಖೆ ಮಾಡಿ ಇದು ಆತ್ಮಹತ್ಯೆ ಎಂದು ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.