ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಯುಗಾದಿ ಪ್ರಯುಕ್ತ ರಿಷಬ್‌ ಶೆಟ್ಟಿ ಫ್ಯಾನ್ಸ್‌ಗೆ ಸಿಕ್ತು ಭರ್ಜರಿ ಗಿಫ್ಟ್‌; ʼಜೈ ಹನುಮಾನ್‌ʼ ಚಿತ್ರದ ಪೋಸ್ಟರ್‌ ಔಟ್‌

Jai Hanuman Movie: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಟಿಸುತ್ತಿರುವ ತೆಲುಗಿನ ಮೊದಲ ಚಿತ್ರ ʼಜೈ ಹನುಮಾನ್‌ʼನ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರತಂಡ ಪೋಸ್ಟರ್‌ ಹೊರ ತಂದಿದೆ. ಈ ಸಿನಿಮಾದಲ್ಲಿ ರಿಷಬ್‌ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಿಷಬ್‌ ಶೆಟ್ಟಿ ಅಭಿನಯದ ʼಜೈ ಹನುಮಾನ್‌ʼ ಚಿತ್ರದ ಪೋಸ್ಟರ್‌ ಔಟ್‌

ʼಜೈ ಹನುಮಾನ್‌ʼ ಚಿತ್ರದ ಪೋಸ್ಟರ್‌ ಮತ್ತು ರಿಷಬ್‌ ಶೆಟ್ಟಿ.

Profile Ramesh B Mar 30, 2025 7:12 PM

ಹೈದರಾಬಾದ್‌: 2022ರಲ್ಲಿ ತೆರೆಕಂಡ ʼಕಾಂತಾರʼ (Kantara) ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಸದ್ಯ ಕನ್ನಡದ ಜತೆಗೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ʼಕಾಂತಾರʼ ಪ್ರೀಕ್ವೆಲ್‌ ಶೂಟಿಂಗ್‌ನಲ್ಲಿ ನಿರತರಾಗಿರುವ ಅವರು ಆ ಮೂಲಕ ಮತ್ತೊಮ್ಮೆ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಇದೀಗ ಯುಗಾದಿ ಹಬ್ಬದ ಪ್ರಯುಕ್ತ ರಿಷಬ್‌ ಶೆಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ತೆಲುಗು ಚಿತ್ರ ʼಜೈ ಹನುಮಾನ್‌ʼ (Jai Hanuman)ನ ಪೋಸ್ಟರ್‌ ರಿಲೀಸ್‌ ಆಗಿದೆ.

ಈ ಸಿನಿಮಾದಲ್ಲಿ ರಿಷಬ್‌ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿದ್ದ ʼಹನುಮಾನ್‌ʼ (Hanu-Man) ಸಿನಿಮಾದ ಸೀಕ್ವೆಲ್‌ ಇದಾಗಿದ್ದು, ಪ್ರಶಾಂತ್‌ ವರ್ಮಾ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದು ಭಕ್ತ ಮತ್ತು ಹನುಮಂತನ ಮಧ್ಯೆ ನಡೆಯುವ ಕಥೆಯಾಗಿದ್ದು, ತೇಜ್ ಸಜ್ಜಾ ನಾಯಕನಾಗಿ ಮುಂದುವರಿದಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್‌ ಹಂಚಿಕೊಂಡಿರುವ ಪೋಸ್ಟರ್‌ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Jai Hanuman Movie: ರಿಷಬ್‌ ಶೆಟ್ಟಿಗೆ ಕಾನೂನು ಸಂಕಷ್ಟ; 'ಜೈ ಹನುಮಾನ್‌' ಚಿತ್ರತಂಡದ ವಿರುದ್ಧ ಕೇಸ್‌ ದಾಖಲು

'ಜೈ ಹನುಮಾನ್‌' ನಿರ್ಮಿಸುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಯುಗಾದಿಯಂದು ಈ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದೆ. ಕಾಡಿನ ಮಧ್ಯೆ ಶ್ರೀ ರಾಮ್‌ ಎಂದು ಬರೆದಿರುವ ಬಂಡೆಯ ಚಿತ್ರ ಪೋಸ್ಟರ್‌ ಕಂಡು ಬಂದಿದೆ. ಈ ಪೋಸ್ಟರ್‌ ಹಂಚಿಕೊಂಡಿರುವ ಚಿತ್ರತಂಡ ಯುಗಾದಿ ಶುಭಾಶಯ ಕೋರಿದೆ. ಆ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ʼಜೈ ಹನುಮಾನ್‌ʼ ಇದೀಗ ಮತ್ತೊಮ್ಮೆ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಕಳೆದ ಅಕ್ಟೋಬರ್‌ನಲ್ಲಿ ಸಿನಿಮಾ ತಂಡ ರಿಷಬ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿತ್ತು. ಈ ಪೋಸ್ಟರ್‌ ಸಾಕಷ್ಟು ವೈರಲ್‌ ಆಗಿತ್ತು.

2024ರಲ್ಲಿ ತೆರೆಕಂಡ ʼಹನುಮಾನ್‌ʼ ಆ ವರ್ಷ ಅತೀ ಹೆಚ್ಚು ಗಳಿಸಿದ ತೆಲುಗು ಚಿತ್ರ ಎನಿಸಿಕೊಂಡಿತ್ತು. 40 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 350 ಕೋಟಿ ರೂ. ಬಾಚಿಕೊಂಡಿತ್ತು. ಇದೇ ಕಾರಣಕ್ಕೆ ಸೀಕ್ವೆಲ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಸೂಪರ್‌ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೇಜ್‌ ಸಜ್ಜಾ ಈ ಭಾಗದಲ್ಲಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ʼಹನುಮಾನ್‌ʼ ಸಿನಿಮಾದಲ್ಲಿ ಅಮೃತಾ ಐಯ್ಯರ್‌, ವರಲಕ್ಷ್ಮೀ ಶರತ್‌ಕುಮಾರ್‌, ವಿನಯ್‌ ರೈ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸೀಕ್ವೆಲ್‌ನಲ್ಲಿ ಇವರೆಲ್ಲರ ಪಾತ್ರ ಮುಂದುವರಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ವಿವಾದ

ಕೆಲವು ತಿಂಗಳ ಹಿಂದೆ ರಿಷಬ್‌ ಅವರ ಹನುಮಾನ್‌ ಪಾತ್ರ ವಿವಾದಕ್ಕೂ ಕಾರಣವಾಗಿತ್ತು. ಪೋಸ್ಟರ್‌ ಆಧಾರದಲ್ಲಿ ವಕೀಲ ಮಮಿದಾಲ್‌ ತಿರುಮಲ ರಾವ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಆಂಜನೇಯನ ದೇಹದಲ್ಲಿ ರಿಷಬ್‌ ಶೆಟ್ಟಿಯ ಮುಖ ಕಂಡು ಬಂದಿದೆ ಎಂದು ಅವರು ದೂರು ನೀಡಿದ್ದರು. ʼʼಜೈ ಹನುಮಾನ್‌ʼ ಚಿತ್ರದ ಟೀಸರ್‌ ಅನ್ನು ಮೈತ್ರಿ ಮೂವಿ ಮೇಕರ್ಸ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಲೀಸ್‌ ಮಾಡಿದೆ. ಈ ಸಿನಿಮಾದಲ್ಲಿ ರಿಷಬ್‌ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹನುಮಂತನ ದೇಹದಲ್ಲಿ ರಿಷಬ್‌ ಶೆಟ್ಟಿಯ ಮುಖ ಕಂಡು ಬಂದಿದೆ. ಇದರರ್ಥ ಅವರು ಹನುಮಂತನನ್ನು ಮಾನವ ಮುಖದೊಂದಿಗೆ ಚಿತ್ರಿಸಿದ್ದಾರೆʼʼ ಎಂಬುದಾಗಿ ಆರೋಪಿಸಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.