V Ravichandran: 64ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್; ಅಪರೂಪದ ಫೋಟೋ ಇಲ್ಲಿದೆ
ಬಾಲನಟನಾಗಿ ಗುರುತಿಸಿಕೊಂಡ ರವಿಚಂದ್ರನ್ ಅವರು ನಂತರ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರು. 1982ರಲ್ಲಿ ಅವರು ಹೀರೋ ಆಗಿ ಬಡ್ತಿ ಪಡೆದರು. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.



ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಇಂದು (May 30) 64 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು 1961 ರಂದು ಜನಿಸಿದರು. ನಟನಾಗಿ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕ, ಸಂಗೀತಗಾರರಾಗಿದ್ದಾರೆ. ರವಿಂಚಂದ್ರನ್ ಅವರ ತಂದೆ ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು.

ರವಿಚಂದ್ರನ್ ಅವರ ಮೊದಲ ಹೆಸರು ಈಶ್ವರ ಅವರ ತಾಯಿ ಅವರಿಗೆ ಈಶ್ವರ ಎಂದು ಹೆಸರನ್ನಿಟ್ಟಿದ್ದರು. ರವಿಚಂದ್ರನ್ ಅವರು ಮೊದಲ ಬಾರಿಗೆ ಧೂಮಕೇತು ಮತ್ತು ಕುಲ ಗೌರವ (1971) ಚಿತ್ರಗಳಲ್ಲಿ ಬಾಲನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಪ್ರೇಮಲೋಕ, ರಣಧೀರ, ಸಿಪಾಯಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ತಮ್ಮ ತಂದೆ ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರ ರೀತಿಯಲ್ಲೇ ತಾನೂ ದೊಡ್ಡ ನಿರ್ಮಾಪಕನಾಗಬೇಕೆಂದು ರವಿ ಕನಸು ಕಂಡಿದ್ದರೆ. ಇದೀಗ ಕನ್ನಡ ಚಿತ್ರರಂಗದ ಮೇರು ನಟನಾಗಿ ಗುರುತಿಸಿಕೊಂಡಿದ್ದಾರೆ.

ರವಿಚಂದ್ರನ್ 1986ರಲ್ಲಿ ಪ್ರೇಮಿಗಳ ದಿನವಾದ ಏಪ್ರಿಲ್ 14ರಂದು ಸುಮತಿಯವರನ್ನು ವಿವಾಹವಾದರು. ದಂಪತಿಗೆ ಗೀತಾಂಜಲಿ ಎಂಬ ಪುತ್ರಿಯಿದ್ದಾರೆ. ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹೀರೋ ಎಂದು ರವಿ ಗುರುತಿಸಿಕೊಂಡಿದ್ದರು. ಈ ಫೋಟೋದಲ್ಲಿ ಶಂಕರ್ನಾಗ್, ಅನಂತ್ನಾಗ್, ಅಂಬರೀಷ್ ಜೊತೆ ರವಿಚಂದ್ರನ್ ನಿಂತಿದ್ದಾರೆ.

ಕನಸುಗಾರ ಎಂದೇ ಗುರುತಿಸಿಕೊಂಡಿದ್ದ ಇವರು ಚಿತ್ರರಂಗದ ಕುರಿತು ಹಲವು ಕನಸುಗಳನ್ನು ಹೊಂದಿದ್ದಾರೆ. ಅಂದಿನ ಕಾಲದಲ್ಲೇ ಬೆಂಗಳೂರಿನಲ್ಲಿ ಒಂದು ಫಿಲ್ಮ್ ಸಿಟಿ ಮಾಡಬೇಕು ಎಂಬ ಪ್ರಪೋಸಲ್ನ ರಾಮಕೃಷ್ಣ ಹೆಗಡೆ ಅವರಿಗೆ ರವಿಚಂದ್ರನ್ ನೀಡಿದ್ದರು. ಒಬ್ಬ ಪ್ರೊಡ್ಯೂಸರ್, ಆರ್ಟಿಸ್ಟ್ ಹಾಗೂ ತಂತ್ರಜ್ಞರ ಜೊತೆ ಫಿಲ್ಮ್ ಸಿಟಿ ಒಳಗೆ ಹೋದರೆ ಸಿನಿಮಾದ ಫಸ್ಟ್ ಕಾಪಿಯೊಂದಿಗೆ ಹೊರಗೆ ಬರಬೇಕು ಅನ್ನೋದು ಅವರ ಕಾನ್ಸೆಪ್ಟ್ ಆಗಿತ್ತು.

ಹಲವು ವರ್ಷಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ಪ್ರೀತಿಯ ಕುರಿತು ಮಾತನಾಡಿದ್ದರು. ತಾನು ಒಂದು ಹುಡುಗಿಯನ್ನು ಪ್ರೀತಿಸಿದ್ದೆ ಆದರೆ ಅದು ಸಫಲವಾಗಲೇ ಇಲ್ಲ. ಅಪ್ಪನಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ದೆ ಎಂದು ಹೇಳಿಕೊಂಡಿದ್ದರು. ತಮ್ಮ ಪತ್ನಿಯ ಕುರಿತು ಸುಮತಿಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು ನನ್ನ ಕರೀಯರ್ನ ಉತ್ತುಂಗದಲ್ಲಿರುವಾಗ ಮದುವೆ ಆದೆ. ಆಕೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಳು ಎಂದು ಹೇಳಿದ್ದಾರೆ.