ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chandan Shetty: ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

ಚಂದನ್ ಶೆಟ್ಟಿ ಸೂತ್ರಧಾರಿ ಚಿತ್ರದ ಮೂಲಕ ಕಂಬ್ಯಾಕ್ ಮಾಕೋಕೆ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ‌ ಹಾಗೂ ಅಪೂರ್ವ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಿಡುಗಡೆ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಇದೇ ವೇದಿಕೆಯಲ್ಲಿ ಚಂದನ್ ಹಾಗೂ ಸಂಜನಾ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

Chandan Shetty Sanjana

Profile Vinay Bhat Mar 19, 2025 7:16 AM

ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty), ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್​ಗಳು ಹರಿದಾಡಿದವು. ಇದೀಗ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್‌ ಶೆಟ್ಟಿ ಮತ್ತು ಸಂಜನಾ ಆನಂದ್‌ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಗಾಸಿಪ್‌ ಹೇಗೆ ಶುರುವಾಯ್ತು ಗೊತ್ತಿಲ್ಲ. ಈ ವಿಚಾರ ಎಲ್ಲ ಸುಳ್ಳು ಎಂದಿದ್ದಾರೆ.

ಚಂದನ್ ಶೆಟ್ಟಿ ಸೂತ್ರಧಾರಿ ಚಿತ್ರದ ಮೂಲಕ ಕಂಬ್ಯಾಕ್ ಮಾಕೋಕೆ ಸಜ್ಜಾಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ‌ ಹಾಗೂ ಅಪೂರ್ವ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಿಡುಗಡೆ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಇದೇ ವೇದಿಕೆಯಲ್ಲಿ ಚಂದನ್ ಹಾಗೂ ಸಂಜನಾ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘‘ನಾನು ನಟಿಸಿರುವ ಸೂತ್ರಧಾರಿ ಸಿನಿಮಾ ಮೇ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಡ್ಯಾಶ್‌ ಸಾಂಗ್‌ ಈಗಾಗಲೇ ಜನರಿಗೆ ಕನೆಕ್ಟ್‌ ಆಗಿದೆ. ಸಂಜನಾ ಆನಂದ್‌ ಹಾಡಿನಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಸಂಜನಾ ಜೊತೆ ಡ್ಯಾಶ್‌ ಸಾಂಗ್‌ ಮಾಡಿ ನನ್ನ ಲೈಫ್‌ನಲ್ಲಿ ಏನೇನೋ ಆಗಿಬಿಟ್ಟಿದೆ’’ ಎಂದು ನಕ್ಕಿದ್ದಾರೆ.

Shishir Shastry: ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್

‘‘ನಾನು ಸಂಜನಾ ಮದುವೆ ಆಗುತ್ತೇವೆ ಅಂತ ಎಲ್ಲಾ ಕಡೆ ವೈರಲ್ ಆಗಿತ್ತು. ನನ್ನ ಸ್ನೇಹಿತರು ನನಗೆ ಕಾಲ್ ಮಾಡಿ ನೀನು ಮತ್ತು ಸಂಜನಾ ಮದುವೆ ಆಗುತ್ತಿದ್ದೀರಾ ಎಂದೆಲ್ಲಾ ಕೇಳಿದ್ದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲದೆ ಬೇರೆ ಎಲ್ಲರೂ ಮಾತನಾಡುತ್ತಿದ್ದರು. ನಮ್ಮ ನಡುವೆ ಆ ರೀತಿಯ ವಿಷ್ಯ ಏನು ಇಲ್ಲ’’ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಇದೇ ವೇಳೆ ಈ ಗಾಸಿಪ್‌ ಬಗ್ಗೆ ಸಂಜನಾ ಆನಂದ್‌ ಕೂಡ ಮಾತನಾಡಿದ್ದು, ‘‘ನಾವು ಸ್ಪಷ್ಟನೆ ಕೊಡಬೇಕಿತ್ತು. ಸೋಶಿಯಲ್‌ ಮೀಡಿಯಾ ಜೊತೆ ಜೊತೆಗೆ ಫ್ಯಾಮಿಲಿಗಳ ಕಡೆಯಿಂದಲೂ ಮದುವೆ ಬಗ್ಗೆ ಪ್ರಶ್ನೆಗಳನ್ನು ಕೇಳಿ ಒತ್ತಡ ಹಾಕುವುದಕ್ಕೆ ಶುರು ಮಾಡಿಬಿಟ್ಟಿದ್ದಾರೆ. ಚಂದನ್‌ ಶೆಟ್ಟಿ ನನಗೆ ಒಳ್ಳೆ ಗೆಳೆಯ ಅನ್ನುವುದಕಿಂತಲೂ ಹೆಚ್ಚಾಗಿ ಒಳ್ಳೆಯ ಅಣ್ಣನಂತೆ’’ ಎಂದು ಸಂಜನಾ ಆನಂದ್‌ ಹೇಳಿದ್ದಾರೆ. ಈ ಸ್ಪಷ್ಟನೆಯ ಮೂಲಕ ಮದುವೆ ವದಂತಿಗಳಿಗೆ ಇಬ್ಬರೂ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.