ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srujan Lokesh: ಸಂಬಂಧ ಕಲ್ಪಿಸ್ತಾರೆ.. ನನಗೇನು ಹೆಂಡತಿ-ಮಕ್ಕಳು ಇಲ್ವಾ: ಕೋಪಗೊಂಡ ಸೃಜನ್ ಲೋಕೇಶ್

ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ ಯಾಕೆಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್‌ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಗೊತ್ತಿಲ್ಲದವರಿಗೆ ಪ್ರಾಮುಖ್ಯತೆ ಕೊಡಲಿ ಎಂದು ಸೃಜನ್ ಲೋಕೇಶ್ ಖಡಕ್ ಆಗಿ ಹೇಳಿದ್ದಾರೆ.

ಸಂಬಂಧ ಕಲ್ಪಿಸ್ತಾರೆ.. ನನಗೇನು ಹೆಂಡತಿ-ಮಕ್ಕಳು ಇಲ್ವಾ: ಸೃಜನ್ ಲೋಕೇಶ್

srujan lokesh

Profile Vinay Bhat Mar 17, 2025 7:15 AM

ನಟ, ನಿರೂಪಕ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ (Srujan Lokesh) ಅವರು ಹಿರಿತೆರೆಗಿಂತ ಜಾಸ್ತಿ ಕಿರುತೆರೆಯಲ್ಲಿ ಹೆಚ್ಚು ಹೆಸರು ಮಾಡಿದವರು. ಸಿನಿಮಾ ರಂಗ ಇವರಿಗೆ ದೊಡ್ಡ ಮಟ್ಟದ ಸಾಥ್ ಕೊಟ್ಟಿಲ್ಲ. ಆದರೆ ಕಿರುತೆರೆಯಲ್ಲಿ ಇವರು ನಡೆಸಿಕೊಡುವ ಶೋಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಇರುವವರು ಸೃಜನ್ ಲೋಕೇಶ್. ಹೀಗಿದ್ದರೂ ಸೃಜನ್ ಕುರಿತು ಗಾಸಿಪ್‌ಗಳು ಈ ಹಿಂದೆ ಕೇಳಿಬಂದಿದ್ದವು. ಇದೀಗ ಇವರು ನೆಗೆಟಿವ್‌ ವಿಷಯಗಳು, ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದು, ಕೆಲ ವಿಚಾರಗಳ ಬಗ್ಗೆ ಮೌನ ಮುರಿದಿದ್ದಾರೆ.

ಈ ಕುರಿತು ಗೋಲ್ಡ್ ಕ್ಲಾಸ್ ವಿಥ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೃಜನ್ ಲೋಕೇಶ್, ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ ಯಾಕೆಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್‌ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಗೊತ್ತಿಲ್ಲದವರಿಗೆ ಪ್ರಾಮುಖ್ಯತೆ ಕೊಡಲಿ ಎಂದು ಹೇಳಿದ್ದಾರೆ.

ನನಗೆ ನಿನಗೆ ಸಂಬಂಧ ಕಲ್ಪಿಸಿ ಇವ್ರೇ ಇರಬಹುದು ಎಂದರೆ ಏನು ಮಾಡಲಿ? ಪರ್ಸನಲ್‌ ವಿಷಯಗಳನ್ನು ಮಾತಾಡೋ ಅಧಿಕಾರ ಯಾರಿಗೂ ಇಲ್ಲ. ಗೊತ್ತಿಲ್ಲದ ವಿಚಾರವನ್ನು ಹೀಗೆ ಇರಬಹುದು ಅಂತ ಹೇಳಿದ್ರೆ ಹೇಗೆ?. ನನಗೇನು ಹೆಂಡತಿ ಮಕ್ಕಳು ಇಲ್ವಾ? ಅವರಿಗೆ ಬೇಜಾರಾಗುತ್ತೆ ಎನ್ನುವ ಸಾಮಾನ್ಯ ಪರಿಜ್ಞಾನ ಕೂಡ ಬೇಡವಾ?. ನೀನು ಯಾರು ಗುರು ನನ್ನ ಬಗ್ಗೆ ಡಿಸೈಡ್ ಮಾಡೋಕೆ. ನಿನ್ನ ಹತ್ರ ಯಾವುದಾದ್ರು ದಾಖಲೆ ಇದ್ಯಾ? ಎಲ್ಲದಕ್ಕೂ ಒಂದು ಲೈನ್ ಅನ್ನೋದು ಇರುತ್ತೆ. ಅದನ್ನ ಕ್ರಾಸ್ ಮಾಡಿದ್ರೆ ಎಂಥವರಿಗೆ ಆಗಲಿ ಕೋಪ ಬಂದೇ ಬರುತ್ತೆ ಎಂದು ಕಿಡಿ ಕಾರಿದ್ದಾರೆ.



ನನ್ನ ತಾಯಿ, ಪತ್ನಿ, ಅಕ್ಕ, ಮಕ್ಕಳು, ಸ್ನೇಹಿತರು, ಶತ್ರುಗಳು ಪ್ರಶ್ನೆ ಮಾಡಿದರೆ ಉತ್ತರ ಕೊಡ್ತೀನಿ. ಗೊತ್ತಿಲ್ಲದವರು ಪ್ರಶ್ನೆ ಮಾಡಿದರೆ ಏನು ಮಾಡಲಿ? ಇದಕ್ಕೆ ಸಂಬಂಧಪಟ್ಟಂತೆ ನನ್ನ ಕಡೆಯವರು ಫೋನ್‌ ಮಾಡಿ ಯಾಕೆ ಹೀಗೆ ಬರೆದ್ರಿ ಅಂತ ಪ್ರಶ್ನೆ ಕೇಳಿದ್ರೆ, ಫೋಟೋ ಹಾಕಿದ್ರೆ ಅಟ್ರ್ಯಾಕ್ಟ್‌ ಆಗ್ತಾರೆ ಅಂತ ಹಾಕಿದ್ವಿ ಅಂತ ಹೇಳ್ತಾರೆ. ಮೊಬೈಲ್‌ ಇದ್ದವರೆಲ್ಲ ಜರ್ನ್‌ಲಿಸ್ಟ್‌ ಆಗ್ತಾರೆ ಅಂದ್ರೆ ಏನರ್ಥ?. ನಾನು ಈಗ ಕಿವಿ ಮುಚ್ಚಿಕೊಂಡು ಕೆಲಸ ಮಾಡ್ತೀನಿ. ಕೆಲಸದ ಮೂಲಕ ನಾನು ಉತ್ತರ ಕೊಡಬೇಕು. ನಾನು ಯಾರ ಬೆನ್ನಹಿಂದೆ ಕೂಡ ಮಾತಾಡೋದಿಲ್ಲ, ಅದು ನನಗೆ ಇಷ್ಟವೂ ಇಲ್ಲ. ನನ್ನ ಬಗ್ಗೆ ಇನ್ನೊಬ್ಬರು ಮಾತಾಡೋದು ನನಗೆ ಇಷ್ಟ ಇಲ್ಲ ಅಂದ್ಮೇಲೆ ನಾನು ಯಾಕೆ ಬೇರೆಯವರ ಬಗ್ಗೆ ಮಾತಾಡಲಿ? ಎಂದು ಸೃಜನ್‌ ಲೋಕೇಶ್‌ ಹೇಳಿದ್ದಾರೆ.

Kiran Raj: ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್