#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Akkineni Family: ಅಕ್ಕಿನೇನಿ ನಾಗಾರ್ಜುನ ಕುಟುಂಬದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

ಅಕ್ಕಿನೇನಿ ಕುಟುಂಬದ ಕುಡಿ, ನಟ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಅವರ ವಿವಾಹ ಇತ್ತೀಚೆಗೆ ನಡೆದಿತ್ತು. ಇದೀಗ ಅಕ್ಕಿನೇನಿ ಕುಟುಂಬ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಅವರಿಗೆ ಎರಡು ಅಮೂಲ್ಯ ಗಿಫ್ಟ್ ನೀಡಿದೆ. ಇಲ್ಲಿದೆ ವಿವರ.

ಪ್ರಧಾನಿ ಮೋದಿಗೆ ಗಿಫ್ಟ್ ನೀಡಿ ಶೋಭಿತಾ ಧೂಳಿಪಾಲ ಭಾವುಕ

Profile Sushmitha Jain Feb 9, 2025 8:31 PM

ನವದೆಹಲಿ: ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಟಾಲಿವುಡ್‌ನ (Tollywood) ಖ್ಯಾತ ನಟ ನಾಗಾರ್ಜುನ (Nagarjuna) ಅವರ ಪುತ್ರ ನಾಗ ಚೈತನ್ಯ (Naga Chaitanya) ಮತ್ತು ಸೊಸೆ ಶೋಭಿತಾ ಧೂಳಿಪಾಲ (Sobhita Dhulipala) ದಂಪತಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದರು. ಫೆ. 7ರಂದು ನವದೆಹಲಿಯಲ್ಲಿರುವ (New Delhi) ಪಾರ್ಲಿಮೆಂಟ್ ಹೌಸ್‌ನಲ್ಲಿ (Parliament House) ಭೇಟಿಯಾಗಿದ್ದರು. ಇವರ ಜತೆ ನಾಗಾರ್ಜುನ ಅವರ ಪತ್ನಿ ಅಮಲಾ ಅಕ್ಕಿನೇನಿ (Amala Akkineni) ಸಹ ಇದ್ದರು. ಪ್ರಧಾನಿ ಮೋದಿ ಅವರನ್ನು ಅಕ್ಕಿನೇನಿ ಕುಟುಂಬ ಭೇಟಿಯಾದ ಸಂದರ್ಭದಲ್ಲಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ಅವರು, ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ (Akkineni Nageswara Rao) ಅವರ ಬಗ್ಗೆ ಬರೆದಿರುವ ʼಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವʼ (Akkineni Ka Virat Vyaktitva) ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು.

ನವ ವಧು, ಅಕ್ಕಿನೇನಿ ಕುಟುಂಬದ ಸೊಸೆ ಶೋಭಿತಾ ಧೂಳಿಪಾಲ ಅವರು ಪ್ರಧಾನಿ ಮೋದಿ ಅವರಿಗೆ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಆಂಧ್ರ ಪ್ರದೇಶದ ವಿಶೇಷ ಕಲಾಕೃತಿಯಾಗಿರುವ ಕೊಂಡಪಳ್ಳಿ ಬೊಮ್ಮಲು (ನರ್ತಿಸುವ ಗೊಂಬೆಗಳು) ಅನ್ನು ಕೊಡುಗೆಯಾಗಿ ಹಸ್ತಾಂತರಿಸಿದ್ದಾರೆ.

ಶೋಭಿತಾ ಹಾಗೂ ನಾಗ ಚೈತನ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ (Instagram) ಜಂಟಿಯಾಗಿ ಒಂದು ಫೊಟೋ ಶೇರ್ ಮಾಡಿದ್ದು, ಇದರಲ್ಲಿ ಅಕ್ಕಿನೇನಿ ಕುಟುಂಬ ಸದಸ್ಯರು ಪ್ರಧಾನಿ ಮೋದಿ ಅವರೊಂದಿಗೆ ಫೊಟೋಗೆ ಪೋಸ್ ನೀಡಿದ್ದಾರೆ. ಶೋಭಿತಾ ಅವರು ಪ್ರಧಾನಿ ಮೋದಿ ಅವರಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡುತ್ತಿರುವ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ನಾಗಚೈತನ್ಯ ನಿಂತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಶೋಭಿತಾ ಅವರು ಬಿಳಿ ಮತ್ತು ಗೋಲ್ಡನ್ ಸೀರೆಯನ್ನು ಉಟ್ಟಿಕೊಂಡಿದ್ದರು. ಚೈತನ್ಯ ಅವರು ಕಪ್ಪು ಬಂಧ್ ಗಲ (ಕುತ್ತಿಗೆ ಆವೃತ) ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು.

ಈ ಪೋಸ್ಟ್‌ ಅನ್ನು ಶೇರ್ ಮಾಡುವ ಸಂದರ್ಭದಲ್ಲಿ ಶೋಭಿತಾ ಅವರು ಹೀಗೆ ಬರೆದುಕೊಂಡಿದ್ದಾರೆ. ʼʼಪಾರ್ಲಿಮೆಂಟ್ ಹೌಸ್‌ನಲ್ಲಿ ತಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ಅವರು ಬರೆದಿರುವ ‘ಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವ’ ಪುಸ್ತಕವನ್ನು ಅವರಿಗೆ ನೀಡಲು ಹೆಮ್ಮೆ ಎನಿಸುತ್ತಿದೆ. ಇದು ಎ.ಎನ್.ಆರ್ ಗಾರು ಅವರ ಚಿತ್ರ ಪಯಣದ ನೆನಪಿಗಾಗಿ ಬರೆದಿರುವ ಪುಸ್ತಕ ಇದಾಗಿದೆ. ನೀವು ಅವರ ಕೆಲಸಗಳನ್ನು ಗುರುತಿಸಿ ಗೌರವಿಸಿರುವುದು ನಮಗೆ, ಅಕ್ಕಿನೇನಿ ಕುಟುಂಬಕ್ಕೆ ಹಾಗೂ ಚಿತ್ರಪ್ರೇಮಿಗಳಿಗೆಲ್ಲ ಸಂತಸ ಮತ್ತು ಹೆಮ್ಮೆಯ ವಿಚಾರʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Naga Chaitanya: ಕ್ರಿಮಿನಲ್‌ ತರಹ ಏಕೆ ಟ್ರೀಟ್‌ ಮಾಡ್ತೀರಿ? ಡಿವೋರ್ಸ್‌ ನೀಡುವ ಮುನ್ನ ಹಲವು ಬಾರಿ ಯೋಚಿಸಿದ್ದೆ-ನಾಗಚೈತನ್ಯ ಹೀಗಂದಿದ್ದೇಕೆ?



ʼʼಕೊಂಡಪಳ್ಳಿ ಬೊಮ್ಮಲು (ನರ್ತಿಸುವ ಗೊಂಬೆಗಳು) ನನ್ನ ಜೀವನದಲ್ಲಿ ಎಂತಹ ಸವಿ ನೆನಪುಗಳನ್ನು ಹೊಂದಿದೆ ಎಂದು ಯಾರಿಗಾದರೂ ಗೊತ್ತಿದೆಯೇ? ಈ ಸವಿ ನೆನಪುಗಳು ನನ್ನನ್ನು ನನ್ನ ಬಾಲ್ಯ ಕಾಲಕ್ಕೆ ಕರೆದೊಯ್ಯುತ್ತದೆ. ತೆನಾಲಿಯಲ್ಲಿದ್ದ ನನ್ನ ಅಜ್ಜಿ-ತಾತನ ಮನೆಗೆ ಇದು ನನ್ನ ನೆನಪುಗಳನ್ನು ಒಯ್ಯುತ್ತದೆʼʼ ಎಂದು ನಟಿ ಭಾವುಕರಾಗಿ ಬರೆದುಕೊಂಡಿದ್ದಾರೆ. ʼʼಇಂತಹ ಸವಿ ನೆನಪನ್ನು ಹೊಂದಿರುವ ಕೊಂಡಪಳ್ಳಿ ಬೊಮ್ಮಲು ವನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಲು ತುಂಬಾ ಸಂತೋಷವಾಗುತ್ತಿದೆ. ಇನ್ನೂ ಖುಷಿಯ ವಿಚಾರವೆಂದರೆ, ಪ್ರಧಾನಿಯವರಿಗೆ ಈ ಗೊಂಬೆಗಳ ಬಗ್ಗೆ ಮತ್ತು ಇದರ ಇತಿಹಾಸದ ಬಗ್ಗೆಯೂ ಗೊತ್ತಿದೆ ಎಂಬುದನ್ನು ತಿಳಿದು ನಮಗೆ ಇನ್ನಷ್ಟು ಖುಷಿ ಮತ್ತು ಆಶ್ಚರ್ಯವಾಯಿತುʼ’ ಎಂದು ಶೋಭಿತಾ ಅವರು ತಮ್ಮ ಬರಹವನ್ನು ಮುಕ್ತಾಯಗೊಳಿಸಿದ್ದಾರೆ. ಇದಕ್ಕೆ ಸ್ಮೈಲ್ ಮತ್ತು ಹಾರ್ಟ್ ಇಮೋಜಿಗಳನ್ನು ಕೊಟ್ಟಿದ್ದಾರೆ.



ನಟ ನಾಗಾರ್ಜುನ ಅವರೂ ಸಹ ತಮ್ಮ ಎಕ್ಸ್ ಖಾತೆಯಲ್ಲಿ, ತಾವು, ತಮ್ಮ ಮಗ, ಸೊಸೆ ಮತ್ತು ಪತ್ನಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಫೋಟೊವನ್ನು ಹಂಚಿಕೊಂಡಿದ್ದಾರೆ. 2024ರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಭಾರತೀಯ ಚಿತ್ರರಂಗದ ನಾಲ್ವರು ದಿಗ್ಗಜರಿಗೆ ನಮನಗಳನ್ನು ಸಲ್ಲಿಸಿದ್ದರು. ರಾಜ್ ಕಪೂರ್, ಮಹಮ್ಮದ್ ರಫಿ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ತಪನ್ ಸಿನ್ಹಾ ಅವರ ಸೇವೆಯನ್ನು ಕೊಂಡಾಡಿದ್ದರು.