Amit Shah: ಪಹಲ್ಗಾಮ್ ದಾಳಿಯ ಭಯೋತ್ಪಾದಕರನ್ನು ಹುಡುಕಿ ಹೊಡೆಯುತ್ತೇವೆ; ಅಮಿತ್ ಶಾ ಗುಡುಗು
Pahalgam Attack: ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ನಾಗರಿಕರನ್ನು ಹತ್ಯೆಗೈದ ಭಯೋತ್ಪಾದಕರನ್ನು ಹುಡುಕಿ ಹೊಡೆಯುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದರು. ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಲ್ಲೇ ಅಡಗಿದ್ದರೂ ಭಯೋತ್ಪಾದಕರನ್ನು ಹುಡುಕಿ ಹೊಡೆಯುತ್ತೇವೆ ಎಂದು ಗುಡುಗಿದರು.

ಅಮಿತ್ ಶಾ.

ಹೊಸದಿಲ್ಲಿ: ʼʼಯುದ್ಧ ಗೆದ್ದಿದ್ದೇವೆ ಎಂದು ಉಗ್ರರು ಭಾವಿಸುವುದು ಬೇಡ. ಈ ಕದನ ಇಲ್ಲಿಗೆ ಮುಗಿದಿಲ್ಲ. ಎಲ್ಲ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆʼʼ-ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ನಾಗರಿಕರನ್ನು ಹತ್ಯೆಗೈದ ಭಯೋತ್ಪಾದಕರಿಗೆ (Pahalgam Attack) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೀಡಿದ ಎಚ್ಚರಿಕೆ ಇದು. ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಲ್ಲೇ ಅಡಗಿದ್ದರೂ ಭಯೋತ್ಪಾದಕರನ್ನು ಹುಡುಕಿ ಹೊಡೆಯುತ್ತೇವೆ ಎಂದು ಗುಡುಗಿದರು. ಈ ಮೂಲಕ ಕಠಿಣ ಕ್ರಮದ ಎಚ್ಚರಿಕೆಯ ಸಂದೇಶ ರವಾನಿಸಿದರು.
"ಪಹಲ್ಗಾಮ್‌ನಲ್ಲಿ ರಕ್ತ ಹರಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಈ ಭಯೋತ್ಪಾದಕ ದಾಳಿಯ ಪ್ರತಿಯೊಬ್ಬ ದುಷ್ಕರ್ಮಿಯನ್ನು ನಾವು ಬೇಟೆಯಾಡುತ್ತೇವೆ. 26 ಜನರನ್ನು ಕೊಲ್ಲುವ ಮೂಲಕ ನೀವು ಗೆದ್ದಿದ್ದೀರಿ ಎಂದು ಭಾವಿಸಬೇಡಿ. ನಿಮ್ಮಲ್ಲಿ ಪ್ರತಿಯೊಬ್ಬನನ್ನೂ ಹೊಣೆಗಾರನನ್ನಾಗಿ ಮಾಡಲಾಗುವುದು" ಎಂದು ಅವರು ಎಚ್ಚರಿಸಿದರು.
ಅಮಿತ್ ಶಾ ಭಯೋತ್ಪಾದಕರಿಗೆ ನೀಡಿದ ಎಚ್ಚರಿಕೆಯ ಸಂದೇಶ:
#WATCH | Delhi: Union Home Minister Amit Shah says, "...If someone, by doing a cowardly attack, thinks that it is their big victory, then understand one thing, this is the Narendra Modi government, no one will be spared. It is our resolve to uproot terrorism from every inch of… pic.twitter.com/c4c4FPN17h
— ANI (@ANI) May 1, 2025
“ಹೇಡಿಗಳಂತೆ ದಾಳಿ ಮಾಡುವ ಮೂಲಕ ಗೆಲುವು ಸಾಧಿಸಿದ್ದೇವೆ ಎಂದು ಎಂದು ಭಾವಿಸಿದರೆ ಅವರು ಅವರ ದೊಡ್ಡ ಭ್ರಮೆ. ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಿ. ಇದು ನರೇಂದ್ರ ಮೋದಿ ಸರ್ಕಾರ. ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಈ ದೇಶದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದು ನಮ್ಮ ಸಂಕಲ್ಪವಾಗಿದೆ ಮತ್ತು ಅದನ್ನು ಸಾಧಿಸಿಯೇ ಸಾಧಿಸುತ್ತೇವೆ" ಎಂದು ಶಾ ಹೇಳಿದರು.
"ಈ ಹೋರಾಟದಲ್ಲಿ 140 ಕೋಟಿ ಭಾರತೀಯರು ಮಾತ್ರವಲ್ಲ, ಇಡೀ ಜಗತ್ತು ನಮ್ಮೊಂದಿಗೆ ನಿಂತಿದೆ. ವಿಶ್ವದ ಎಲ್ಲ ದೇಶಗಳು ಒಗ್ಗೂಡಿವೆ ಮತ್ತು ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಭಾರತದ ಜನರೊಂದಿಗೆ ನಿಂತಿವೆ" ಎಂದು ಅವರು ಹೇಳಿದರು.
Bodofa Upendranath Brahma Ji dedicated his entire life to the progress of the Bodo community in Assam. It is a matter of immense joy that today his statue is being unveiled and a road is being dedicated in his honour in New Delhi. https://t.co/i5KVVR1XOz
— Amit Shah (@AmitShah) May 1, 2025
ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿಯ ಉಗ್ರರು ಇನ್ನೂ ಅಲ್ಲೇ ಇದ್ದಾರೆ; ಸ್ಥಳೀಯರಿಂದ ಆಹಾರ ಸಪ್ಲೈ?
26 ಮಂದಿಯನ್ನು ಹತ್ಯೆಗೈದಿದ್ದ ಉಗ್ರರು
ಏ. 22ರಂದು ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 26 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ಸೇರಿ ಒಟ್ಟು 26 ಮಂದಿ ಅಸುನೀಗಿದ್ದರು. ಪಾಕಿಸ್ತಾನ ಮೂಲದ ಉಗ್ರರು ಈ ಕೃತ್ಯ ಎಸಗಿದ್ದು, ಭಾರತ ಸೇಡು ತೀರಿಸಲು ಮುಂದಾಗಿದೆ. 2019ರ ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮತರಾದ ಬಳಿಕ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಇದಾದ ಬಳಿಕ ಭಾರತ ಪಾಕಿಸ್ತಾನದ ವಿರುದ್ದ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಸಿಂಧೂ ನದಿ ಜಲ ಒಪ್ಪಂದ ಅಮಾನತು ಮಾಡಿದ್ದಲ್ಲದೆ, ಅಲ್ಪ ಕಾಲದ ವೀಸಾ ಹೊಂದಿರುವ ಪಾಕ್ ಪ್ರಜೆಗಳನ್ನು ಕೂಡಲೇ ದೇಶ ಬಿಟ್ಟು ಹೋಗುವಂತೆ ಆದೇಶಿಸಿದೆ. ಅಲ್ಲದೆ ಪಾಕ್‌ನ ಎಲ್ಲ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ಬಂದ್ ಮಾಡಿದೆ. ಈ ಕಾರಣಗಳಿಂದ 2 ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ ಪಹಲ್ಗಾಮ್ ದಾಳಿಯ ತನಿಖೆಯನ್ನು ಕೈಗೆತ್ತಿಕೊಂಡಿದೆ. ಉಗ್ರರ ಚಲನವಲನ ಕೆಲವು ಪ್ರವಾಸಿಗರ ವಿಡಿಯೊದಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.