ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ವಿಶ್ವದ ಅತಿ ದೊಡ್ಡ ಮತ್ತು ಅತಿ ಚಿಕ್ಕ ಶ್ವಾನಗಳು ಮುಖಾಮುಖಿ; ಈ ಕ್ಯೂಟ್‌ ವಿಡಿಯೊ ನೋಡಿ

ವಿಶ್ವದ ಅತಿ ಎತ್ತರವಿರುವ 7 ವರ್ಷದ ಗ್ರೇಟ್ ಡೇನ್ ರೆಗ್ಗಿ ನಾಯಿ ಮತ್ತು ಅತಿ ಚಿಕ್ಕದಾದ 4 ವರ್ಷದ ಚಿಹುವಾವಾ ಪರ್ಲ್ ಜೋ ನಾಯಿ ಐಡಾಹೋದಲ್ಲಿ ಮೊದಲ ಬಾರಿಗೆ ಭೇಟಿಯಾದವು. ರೆಗ್ಗಿ ನಾಯಿ 4 ಅಡಿ ಇಂಚು ಎತ್ತರವಿದ್ದರೆ, ಪರ್ಲ್ ಕೇವಲ 3.59 ಇಂಚು ಎತ್ತರವಿದೆ. ಈ ಜೋಡಿ ಭೇಟಿಯಾದಾಗ ಒಬ್ಬರ ನೋಡಿ ಮತ್ತೊಬ್ಬರು ಹೆದರದೆ ಪ್ರೀತಿಯಿಂದ ಆಟವಾಡಿ ಒಟ್ಟಿಗೆ ಮಲಗಿದ್ದಾವೆ. ಇದೀಗ ವೈರಲ್‌(Viral Video)ಆಗಿವೆ.

ವಿಶ್ವದ ಅತಿ ದೊಡ್ಡ ಮತ್ತು ಅತೀ ಚಿಕ್ಕ ಶ್ವಾನಗಳು ಮುಖಾಮುಖಿ!

Profile pavithra May 1, 2025 7:45 PM

ಬೊಯ್ಸ್‌ ಸಿಟಿ: ವಿಶ್ವದ ಅತಿ ಎತ್ತರದ ಮತ್ತು ಚಿಕ್ಕ ನಾಯಿಗಳೆರಡು ಇತ್ತೀಚೆಗೆ ಐಡಾಹೋದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾವೆ. ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, 3 ಅಡಿ 4 ಇಂಚು ಎತ್ತರವಿರುವ 7 ವರ್ಷದ ಗ್ರೇಟ್ ಡೇನ್ ರೆಗ್ಗಿ ಮತ್ತು ಕೇವಲ 3.59 ಇಂಚು ಅಳತೆಯ 4 ವರ್ಷದ ಚಿಹುವಾವಾ ಪರ್ಲ್ ಜೋಡಿ ಎಲ್ಲರ ಕಣ್ಮನ ಸೆಳೆದಿತ್ತು. ಇವೆರಡರ ಭೇಟಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಜೋಡಿ ಸಂತೋಷದಿಂದ ಮನೆಯೊಳಗೆ ಸುತ್ತಾಡಿ ಫೋಟೋಗಳಿಗೆ ಪೋಸ್ ನೀಡಿವೆ ಮತ್ತು ಹಿತ್ತಲಿನಲ್ಲಿ ಆಟವಾಡಿದ ನಂತರ ರೆಗ್ಗಿಯ ಮನೆಯಲ್ಲಿ ಒಟ್ಟಿಗೆ ಮಂಚದ ಮೇಲೆ ಮಲಗಿದ್ದಾವಂತೆ.

ಪರ್ಲ್ ದೊಡ್ಡ ನಾಯಿಗಳನ್ನು ಭೇಟಿಯಾಗಿ ಅದರ ಜೊತೆ ಸ್ನೇಹದಿಂದ ಇರುವುದನ್ನು ಕಂಡು ಪರ್ಲ್ ಮಾಲೀಕಳಾದ ಫ್ಲೋರಿಡಾದ ವನೇಸಾ ಸೆಮ್ಲರ್ ಆಶ್ಚರ್ಯವ್ಯಕ್ತಪಡಿಸಿದ್ದಾಳೆ. ಪರ್ಲ್‌ಗೆ ಫ್ಯಾಷನ್ ಎಂದರೆ ತುಂಬಾ ಇಷ್ಟವೆಂದು ಕೂಡ ಸೆಮ್ಲರ್ ತಿಳಿಸಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...



ಈ ಭೇಟಿಯಿಂದಾಗಿ ನಾಯಿಗಳು ಮತ್ತು ಅವುಗಳ ಮಾಲೀಕರನ್ನು ಒಟ್ಟಿಗೆ ಸೇರಿಸಿದಂತಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ, ಈ ಸಾಕುಪ್ರಾಣಿಗಳು ತಮ್ಮ ಕುಟುಂಬದವರಿಗೆ ಎಷ್ಟು ಪ್ರಿಯವಾಗಿದ್ದವು ಎಂಬುದನ್ನು ತೋರಿಸಿದೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮಹಿಳೆಗೆ ಪೊಲೀಸರಿಂದ ಕಪಾಳಮೋಕ್ಷ; ನೆಟ್ಟಿಗರು ಫುಲ್‌ ಗರಂ!

ಈ ಹಿಂದೆ 20 ವರ್ಷದ ಬಿಗ್ ಜಾನ್ ಎಂಬ ಕುದುರೆ ಸುಮಾರು ಒಂದು ವರ್ಷ ವಯಸ್ಸಿನ ಮತ್ತು ಎರಡು ಅಡಿ ಎತ್ತರವಿರುವ ಪುಟ್ಟ ಕುದುರೆಯನ್ನು ಭೇಟಿಯಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಟಿಕ್ ಟಾಕ್ ಖಾತೆಯಲ್ಲಿ ಈ ಎರಡು ಸುಂದರವಾದ ಕುದುರೆಗಳ ಭೇಟಿಯ ಬಗ್ಗೆ ಪೋಸ್ಟ್ ಮಾಡಲಾಗಿತ್ತು.ಆದರೆ ಈ ಚಿಕ್ಕ ಕುದುರೆಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಅತ್ಯಂತ ಚಿಕ್ಕ ಕುದುರೆ ಎಂದು ಹೆಸರಿಸಲು ಸಾಧ್ಯವಿಲ್ಲ. ಯಾಕೆಂದರೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಅತ್ಯಂತ ಚಿಕ್ಕ ಕುದುರೆ ಎಂದು ಹೆಸರಿಸಲು ಪ್ರಾಣಿಗಳು ನಾಲ್ಕು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಎನ್ನಲಾಗಿತ್ತು. ಹಾಗಾಗಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಅತಿ ಚಿಕ್ಕ ಕುದುರೆ ಪ್ರಶಸ್ತಿ ಪ್ರಸ್ತುತ ದಾಖಲೆಯನ್ನು ಹೊಂದಿರುವ ಬೊಂಬೆಲ್ ಎಂಬ 22 ಇಂಚಿನ ಮಿನಿ ಅಪ್ಪಲೊಸಾ ಕುದುರೆಗೆ ಸಿಕ್ಕಿದೆ ಎನ್ನಲಾಗಿದೆ.