Viral News: ಗಡ್ಡ ಬಿಟ್ಟ ಪತಿಯನ್ನು ಬಿಟ್ಟು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನ ಜೊತೆ ಓಡಿ ಹೋದ ಮಹಿಳೆ; ಏನಿದು ಘಟನೆ?
ಉತ್ತರ ಪ್ರದೇಶದ ಮೀರತ್‌ನಲ್ಲಿ ಗಡ್ಡ ಬೋಳಿಸಲು ನಿರಾಕರಿಸಿದ ಪತಿಯನ್ನು ಬಿಟ್ಟು ಮಹಿಳೆಯೊಬ್ಬಳು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನನ್ನು ಇಷ್ಟಪಟ್ಟು ಆತನ ಜೊತೆ ಓಡಿಹೋಗಿದ್ದಾಳೆ. ಆದರೆ ತಾನು ಗಡ್ಡದ ವಿಚಾರಕ್ಕೆ ಪತಿಯನ್ನು ಬಿಟ್ಟಿಲ್ಲ ಬದಲಾಗಿ ಆತ "ಲೈಂಗಿಕವಾಗಿ ಅನರ್ಹ" ಎಂಬ ಕಾರಣ ಅವನನ್ನು ಬಿಟ್ಟಿರುವುದಾಗಿ ಹೇಳಿದ್ದಾಳೆ. ಈ ಸುದ್ದಿ ಇದೀಗ ವೈರಲ್(Viral News) ಆಗಿದೆ.


ಲಖನೌ: ಗಡ್ಡ ಬಿಡುವುದು ಈಗಿನ ಯುವಕರ ಫ್ಯಾಶನ್ ಆಗಿದೆ. ಹಾಗೇ ಹೆಚ್ಚಿನ ಯುವತಿಯರು ಕೂಡ ಕ್ಲೀನ್ ಶೇವ್ ಮಾಡುವ ಯುವಕರಿಗಿಂತ ಗಡ್ಡ ಬಿಡುವ ಯುವಕರನ್ನೇ ಹೆಚ್ಚು ಇಷ್ಟಪಡುತ್ತಾರೆ. ಹೀಗಿರುವಾಗ ಗಡ್ಡ ಬೋಳಿಸಲು ನಿರಾಕರಿಸಿದ ಪತಿಯನ್ನು ಬಿಟ್ಟು ಮಹಿಳೆಯೊಬ್ಬಳು ಗಡ್ಡವನ್ನು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನನ್ನು ಇಷ್ಟಪಟ್ಟು ಆತನ ಜೊತೆ ಓಡಿಹೋಗಿದ್ದಾಳಂತೆ. ಈ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಪತ್ನಿ "ಕ್ಲೀನ್-ಶೇವ್" ಮಾಡುತ್ತಿದ್ದ ತನ್ನ ಸಹೋದರನ ಜೊತೆ ಓಡಿಹೋಗಿದ್ದಾಳೆ ಎಂದು ಆಕೆಯ ಪತಿ ಆರೋಪಿಸಿದ್ದಾನೆ. ಆದರೆ ಮಹಿಳೆ ಈ ಆರೋಪವನ್ನು ಅಲ್ಲಗೆಳೆದಿದ್ದಾಳೆ. ಮತ್ತು ಪತಿ "ಲೈಂಗಿಕವಾಗಿ ಅನರ್ಹ" ಎಂಬ ಕಾರಣಕ್ಕೆ ಆತನನ್ನು ಬಿಟ್ಟಿರುವುದಾಗಿ ಹೇಳಿದ್ದಾಳೆ.
ಮಾಹಿತಿ ಪ್ರಕಾರ, ಏಳು ತಿಂಗಳ ಹಿಂದೆ ಮೊಹಮ್ಮದ್ ಸಗೀರ್ ಅರ್ಶಿಯನ್ನು ಮದುವೆಯಾಗಿದ್ದ. ಮದುವೆಯಾದ ಕೆಲವು ದಿನಗಳ ನಂತರ, ಅರ್ಶಿ ಸಗೀರ್ ಗಡ್ಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಶುರುಮಾಡಿದ್ದಾಳಂತೆ. ಮತ್ತು ಅವಳು ಅದನ್ನು ಶೇವ್ ಮಾಡಲು ಒತ್ತಾಯಿಸಿದ್ದಾಳೆ. ಆದರೆ ಸಗೀರ್ ಅವನ ಗಡ್ಡವನ್ನು ತುಂಬಾ ಇಷ್ಟಪಡುತ್ತಿದ್ದ ಕಾರಣ ಅದನ್ನು ತೆಗೆಯಲು ನಿರಾಕರಿಸಿದ್ದಾನೆ. ಇದು ಅವರ ನಡುವೆ ಜಗಳಕ್ಕೆ ಕಾರಣವಾಗಿದೆ.
ಈ ನಡುವೆ ಅರ್ಶಿ ಕ್ಲೀನ್ ಶೇವ್ ಮಾಡಿಕೊಳ್ಳುತ್ತಿದ್ದ ಮೈದುನ ಸಬೀರ್ ಅನ್ನು ಪ್ರೀತಿಸುತ್ತಿದ್ದಳಂತೆ. ಅತ್ತಿಗೆ ಮೈದುನ ಯಾರಿಗೂ ತಿಳಿಯದಂತೆ ಮನೆಬಿಟ್ಟು ಓಡಿಹೋಗಿದ್ದಾರೆ.ಮೂರು ತಿಂಗಳವರೆಗೆ ಪತ್ನಿಯ ಸುಳಿವು ಸಿಗದಿದ್ದಾಗ ಪತಿ ಪೊಲೀಸರನ್ನು ಸಂಪರ್ಕಿಸಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾನೆ. ಅರ್ಶಿ ತನ್ನ ಗಡ್ಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು. ಕುಟುಂಬದ ಒತ್ತಡದ ಮೇರೆಗೆ ಅವಳು ತನ್ನನ್ನು ಮದುವೆಯಾಗಿದ್ದಾಳೆ. ಅವಳು ತನ್ನ ಸಹೋದರನ ಜೊತೆ ಸಂಬಂಧ ಹೊಂದಿದ್ದಳು.ಅವರಿಬ್ಬರು ತನ್ನ ಆಹಾರದಲ್ಲಿ ವಿಷ ಬೆರೆಸಿ ತನ್ನನ್ನು ಕೊಂದು ಅವರ ಮದುವೆಯಾಗಲು ಯೋಜಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ ರೆಕಾರ್ಡಿಂಗ್ ತನ್ನ ಬಳಿ ಇದೆ ಎಂದು ಸಗೀರ್ ದೂರಿನಲ್ಲಿ ತಿಳಿಸಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮಹಿಳೆಗೆ ಪೊಲೀಸರಿಂದ ಕಪಾಳಮೋಕ್ಷ; ನೆಟ್ಟಿಗರು ಫುಲ್ ಗರಂ!
ಅರ್ಶಿ ತನ್ನ ಪ್ರಿಯಕರನೊಂದಿಗೆ ಹೆತ್ತವರ ಮನೆಗೆ ಬಂದು ಇನ್ನು ಮುಂದೆ ತಾನು ಸಗೀರ್ ಜೊತೆ ವಾಸಿಸಲು ಬಯಸುವುದಿಲ್ಲ ಬದಲಾಗಿ, ಸಬೀರ್ ಅನ್ನು ಮದುವೆಯಾಗಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾಳೆ. ಹಾಗೂ ಗಡ್ಡದ ಬಗ್ಗೆ ಯಾವುದೇ ವಿವಾದವಿಲ್ಲ. ಆದರೆ ಸಗೀರ್ ಲೈಂಗಿಕವಾಗಿ ಅನರ್ಹ ಎಂದು ಅವಳು ಆರೋಪಿಸಿದ್ದಾಳೆ. ಈ ಆರೋಪಗಳಿಂದ ನಿರಾಶೆಗೊಂಡ ಸಗೀರ್ ಪೊಲೀಸರ ಮುಂದೆ ಅರ್ಶಿಗೆ ವಿಚ್ಛೇದನ ನೀಡಿದ್ದಾನೆ. ಈ ವೇಳೆ ವರದಕ್ಷಿಣೆಯಾಗಿ ತಂದ 5ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಅರ್ಶಿ ತನ್ನ ಪತಿಯನ್ನು ಕೇಳಿದ್ದಾಳೆ.