Indrajeet Saroj: "ನಮ್ಮ ದೇವರು, ದೇವತೆಗಳು ಅಷ್ಟು ಶಕ್ತಿವಂತರಲ್ಲ"; ವಿವಾದ ಹುಟ್ಟು ಹಾಕಿದ ಸಮಾಜವಾದಿ ಶಾಸಕ
ಸಮಾಜವಾದಿ ಪಕ್ಷದ ಶಾಸಕ ಇಂದ್ರಜೀತ್ ಸರೋಜ್ ಮಂಗಳವಾರ ವಿವಾದಾತ್ಮಕ ಹೇಳಿಕಯನ್ನು ನೀಡಿದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ದೇವರು ಮತ್ತು ದೇವತೆಗಳ ಬಗ್ಗೆ ಶಾಸಕ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ನಮ್ಮ ದೇವರುಗಳು ಮತ್ತು ದೇವತೆಗಳು ಅಷ್ಟೊಂದು ಶಕ್ತಿಶಾಲಿಗಳಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.


ಲಖನೌ: ಸಮಾಜವಾದಿ ಪಕ್ಷದ ಶಾಸಕ ಇಂದ್ರಜೀತ್ ಸರೋಜ್ (Indrajeet Saroj) ಮಂಗಳವಾರ ವಿವಾದಾತ್ಮಕ ಹೇಳಿಕಯನ್ನು ನೀಡಿದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ದೇವರು ಮತ್ತು ದೇವತೆಗಳ ಬಗ್ಗೆ ಶಾಸಕ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ನಮ್ಮ ದೇವರುಗಳು ಮತ್ತು ದೇವತೆಗಳು ಅಷ್ಟೊಂದು ಶಕ್ತಿಶಾಲಿಗಳಾಗಿರಲಿಲ್ಲ. ಕ್ರಿ.ಶ. 712 ರಲ್ಲಿ, ಮುಹಮ್ಮದ್ ಬಿನ್ ಖಾಸಿಮ್ ಅರೇಬಿಯಾದಿಂದ ಈ ದೇಶಕ್ಕೆ ಬಂದು ದೇಶವನ್ನು ಲೂಟಿ ಮಾಡಿದನು. ಮುಹಮ್ಮದ್ ಘೋರಿ ಈ ಸ್ಥಳವನ್ನು ಲೂಟಿ ಮಾಡಲು ಈ ದೇಶಕ್ಕೆ ಬಂದನು. ಹಾಗಾದರೆ, ಈ ದೇಶದ ದೇವರುಗಳು ಮತ್ತು ದೇವತೆಗಳು ಏನು ಮಾಡಿದರು? ಎಂದು ಅವರು ಪ್ರಶ್ನಿಸಿದ್ದಾರೆ.
ದೇವಾಲಯಗಳ ಮೇಲಿನ ದಾಳಿ ಸಲುವಾಗಿ ದೇವತೆಗಳು ಮುಸ್ಲಿಮರನ್ನು ಶಪಿಸಬೇಕಾಗಿತ್ತು. ಅವರು ಬೂದಿಯಾಗಬೇಕಿತ್ತು. ಆದರೆ ಯಾವುದೂ ಆ ರೀತಿ ಆಗಿಲ್ಲ. ಇದರರ್ಥ ಏನೋ ಕೊರತೆಯಿದೆ ಮತ್ತು ನಮ್ಮ ದೇವರುಗಳು ಮತ್ತು ದೇವತೆಗಳು ಅಷ್ಟೊಂದು ಶಕ್ತಿಶಾಲಿಗಳಲ್ಲ ಎಂದು ಇಂದ್ರಜೀತ್ ಸರೋಜ್ ಹೇಳಿದ್ದಾರೆ. ಸೋಮವಾರ, ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರೋಜ್, ಭಾರತದ ದೇವಾಲಯಗಳಿಗೆ ಶಕ್ತಿಯಿದ್ದರೆ, ಮೊಹಮ್ಮದ್ ಬಿನ್ ಖಾಸಿಮ್, ಮಹ್ಮದ್ ಘಜ್ನವಿ ಮತ್ತು ಮೊಹಮ್ಮದ್ ಘೋರಿಯಂತಹ ಆಕ್ರಮಣಕಾರರು ದೇಶಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.
ಇತ್ತೀಚೆಗೆ, ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ರಾಮ್‌ಜಿ ಲಾಲ್ ಸುಮಾ, 16 ನೇ ಶತಮಾನದ ರಜಪೂತ ರಾಜ ರಾಣಾ ಸಂಗ ಅವರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಇಬ್ರಾಹಿಂ ಲೋದಿಯನ್ನು ಸೋಲಿಸಲು ಮೊಘಲ್ ರಾಜವಂಶದ ಸ್ಥಾಪಕ ಬಾಬರ್‌ನನ್ನು ಕರೆತಂದ ಆರೋಪದ ಮೇಲೆ ಅವರನ್ನು "ದೇಶದ್ರೋಹಿ" ಎಂದು ಕರೆದಿದ್ದರು. ಇದು ದೊಡ್ಡ ವಿವಾದವಾಗಿ ಪರಿಣಮಿಸಿತ್ತು. ಮಾರ್ಚ್ 26 ರಂದು, ಆಗ್ರಾದಲ್ಲಿರುವ ರಾಜ್ಯಸಭಾ ಸಂಸದರ ನಿವಾಸದ ಹೊರಗೆ ಹಿಂಸಾಚಾರ ಭುಗಿಲೆದ್ದಿತು. ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ, ಕಿಟಕಿ ಗಾಜುಗಳನ್ನು ಒಡೆದು ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದರು.
ಈ ಸುದ್ದಿಯನ್ನೂ ಓದಿ: Malappuram District: ಮಲಪ್ಪುರಂ ಜಿಲ್ಲೆ ʼಪ್ರತ್ಯೇಕ ರಾಷ್ಟ್ರʼವಂತೆ! ವಿವಾದದ ಕಿಡಿ ಹಚ್ಚಿದ ಕೇರಳದ ನಾಯಕ
ಏತನ್ಮಧ್ಯೆ, ಮೇವಾರದ ದೊರೆ ರಾಣಾ ಸಂಗ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ಷತ್ರಿಯ ಸಮುದಾಯ ಸಂಘಟನೆಯಾದ ಕರ್ಣಿ ಸೇನಾ ಶನಿವಾರ ಉತ್ತರ ಪ್ರದೇಶದ ಆಗ್ರಾದಲ್ಲಿ 'ರಕ್ತ ಸ್ವಾಭಿಮಾನ ಸಮ್ಮೇಳನ'ವನ್ನು ಆಯೋಜಿಸಿತ್ತು.