ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyadarshini Mattoo Case: ಅಪರಾಧಿ ಬಿಡುಗಡೆ ಅರ್ಜಿ ತಿರಸ್ಕರಿಸಿದ ನಿರ್ಧಾರವನ್ನು ರದ್ದುಗೊಳಿಸಿದ ಹೈಕೋರ್ಟ್‌

ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟೂ ಅವರ ಮೇಲೆ 1996 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಸಂತೋಷ್ ಕುಮಾರ್ ಸಿಂಗ್ ಅಕಾಲಿಕ ಬಿಡುಗಡೆ ಅರ್ಜಿಯನ್ನು ನಿರಾಕರಿಸಿದ ಮಂಡಳಿಯ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

ಪ್ರಿಯದರ್ಶಿನಿ ಮಟ್ಟೂ ಪ್ರಕರಣ: ಅಪರಾಧಿಯ ಬಿಡುಗಡೆ ನಿರ್ಧಾರ ಹೈ ಕೋರ್ಟ್‌ಗೆ

Profile Vishakha Bhat Jul 1, 2025 11:58 AM

ನವದೆಹಲಿ: ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟೂ ಅವರ (Priyadarshini Mattoo Case) ಮೇಲೆ 1996 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಸಂತೋಷ್ ಕುಮಾರ್ ಸಿಂಗ್ ಅಕಾಲಿಕ ಬಿಡುಗಡೆ ಅರ್ಜಿಯನ್ನು ನಿರಾಕರಿಸಿದ ಮಂಡಳಿಯ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಆದೇಶದಲ್ಲಿ, ದೆಹಲಿ ಹೈಕೋರ್ಟ್ ಅಪರಾಧಿಯಲ್ಲಿ ಸುಧಾರಣೆಯ ಅಂಶ ಕಂಡುಬಂದಿದೆ ಎಂದು ಹೇಳಿದೆ. ಸಿಂಗ್‌ ಮನವಿ ಮೇರೆಗೆ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಮೇ 14 ರಂದು ಆದೇಶವನ್ನು ಕಾಯ್ದಿರಿಸಿದ್ದಾರೆ.

2021 ರ ಅಕ್ಟೋಬರ್ 21 ರಂದು ನಡೆದ ಸಭೆಯಲ್ಲಿ ತನ್ನ ಅಕಾಲಿಕ ಬಿಡುಗಡೆಯನ್ನು ತಿರಸ್ಕರಿಸಿದ ದೆಹಲಿ ಜೈಲುಗಳ ಶಿಕ್ಷೆ ಪರಿಶೀಲನಾ ಮಂಡಳಿಯ (SRB) ಶಿಫಾರಸನ್ನು ರದ್ದುಗೊಳಿಸುವಂತೆ ಸಿಂಗ್ ತಮ್ಮ 2023 ರ ಅರ್ಜಿಯಲ್ಲಿ ಕೋರಿದ್ದಾನೆ. ಸಿಂಗ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮೋಹಿತ್ ಮಾಥುರ್, ತಮ್ಮ ಕಕ್ಷಿದಾರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈಗಾಗಲೇ 25 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ವಾದಿಸಿದ್ದರು.

ತಮ್ಮ ಕಕ್ಷಿದಾರನ ನಡುವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದು ಸುಧಾರಣೆಯನ್ನು ಸೂಚಿಸುತ್ತದೆ ಮತ್ತು ಭವಿಷ್ಯದಲ್ಲಿ ಅಪರಾಧ ಮಾಡುವ ಎಲ್ಲ ಸಾಮರ್ಥ್ಯವನ್ನು ಅವನು ಕಳೆದುಕೊಂಡಿದ್ದಾನೆ ಎಂಬ ಅಂಶವನ್ನು ಸೂಚಿಸುತ್ತದೆ ಎಂದು ಮಾಥುರ್ ಹೇಳಿದರು. ಸೆಪ್ಟೆಂಬರ್ 18, 2024 ರಂದು ಮತ್ತೊಂದು SRB ಸಭೆ ನಡೆದಿದ್ದು, ಅವರ ಅಕಾಲಿಕ ಬಿಡುಗಡೆ ಪ್ರಕರಣವನ್ನು ಮತ್ತೆ ತಿರಸ್ಕರಿಸಲಾಗಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಈ ಸುದ್ದಿಯನ್ನೂ ಓದಿ:ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು

1996 ರ ಜನವರಿಯಲ್ಲಿ ಇಪ್ಪತ್ತೈದು ವರ್ಷದ ಪ್ರಿಯದರ್ಶಿನಿ ಮಟ್ಟೂ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು. ಆಕೆಯ ಸಹಪಾಠಿ ಸಂತೋಷ್‌ ಸಿಂಗ್‌ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ದೆಹಲಿ ಹೈಕೋರ್ಟ್ ಆರಂಭದಲ್ಲಿ ಸಂತೋಷ್ ಸಿಂಗ್‌ನನ್ನು ಖುಲಾಸೆಗೊಳಿಸಲಾಯಿತು. ನಂತರದ ದಿನದಲ್ಲಿ ವಿಚಾರಣೆ ಬಳಿಕ ಆತನ ವಿರುದ್ಧ ಆರೋಪ ಸಾಬೀತಾಗಿತ್ತು. ಅಕ್ಟೋಬರ್ 27, 2006 ರಂದು ದೆಹಲಿ ಹೈಕೋರ್ಟ್ ಈ ನಿರ್ಧಾರವನ್ನು ರದ್ದುಗೊಳಿಸಿ ಮಟ್ಟೂ ಅವರ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಸಿಂಗ್‌ ಅಪರಾಧಿ ಎಂದು ಘೋಷಿಸಲಾಯಿತು.