ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕುಡಿದ ಮತ್ತಿನಲ್ಲಿ ಬಟ್ಟೆ ಬಿಚ್ಚಿ ಈ ಕಿಡಿಗೇಡಿ ಮಾಡಿದ ನೀಚ ಕೃತ್ಯವೇನು ಗೊತ್ತಾ? ಶಾಕಿಂಗ್‌ ವಿಡಿಯೊ ಫುಲ್‌ ವೈರಲ್

ಥೈಲ್ಯಾಂಡ್‍ನ ಪಟ್ಟಾಯದಲ್ಲಿ ಮದ್ಯದ ಅಮಲಿನಲ್ಲಿ ಪ್ರವಾಸಿಯೊಬ್ಬ ಬಟ್ಟೆಬಿಚ್ಚಿಕೊಂಡು ಬಾರ್ ಹೊರಗೆ ಗಲಾಟೆ ಮಾಡಿದ್ದಾನೆ. ಅವನು ಮಹಿಳೆಯರ ಮುಂದೆ ಲೈಂಗಿಕ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದು ಅಲ್ಲದೇ, ಸಿಬ್ಬಂದಿಯ ತಲೆಯ ಮೇಲೆ ಬಿಯರ್ ಸುರಿದಿದ್ದಾನೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕುಡಿದ ಮತ್ತಿನಲ್ಲಿ ಈತ ಮಹಿಳೆಯರ ಮುಂದೆಯೇ ನೀಚ ಕೃತ್ಯ!

Profile pavithra Apr 21, 2025 1:25 PM

ಕುಡಿದ ಮತ್ತಿನಲ್ಲಿದ್ದ ಜನರಿಗೆ ತಾವು ಏನು ಆಡುತ್ತಿದ್ದೇವೆ ಎಂದು ತಿಳಿಯುವುದಿಲ್ಲ. ಹೀಗಾಗಿ ಬೀದಿಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ರಂಪಾಟ ಮಾಡುತ್ತಾರೆ. ಅದೇರೀತಿ ಇತ್ತೀಚೆಗೆ ಥೈಲ್ಯಾಂಡ್‍ನ ಪಟ್ಟಾಯದಲ್ಲಿ ಮದ್ಯದ ಅಮಲಿನಲ್ಲಿ ಪ್ರವಾಸಿಯೊಬ್ಬ ಬಟ್ಟೆಬಿಚ್ಚಿಕೊಂಡು ಬಾರ್ ಹೊರಗೆ ಗಲಾಟೆ ಮಾಡಿದ್ದಾನೆ.ಅದು ಅಲ್ಲದೇ, ಮಹಿಳೆಯರ ಮುಂದೆ ಲೈಂಗಿಕ ಪ್ರಚೋದನಕಾರಿ ಸನ್ನೆಗಳನ್ನು ಮಾಡಿ, ಸಿಬ್ಬಂದಿಯ ತಲೆಯ ಮೇಲೆ ಬಿಯರ್ ಸುರಿದಿದ್ದಾನೆ. ಅವನ ಈ ನಾಟಕೀಯ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು,ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.

ಕುಡಿದ ಅಮಲಿನಿಲ್ಲಿದ್ದ ವ್ಯಕ್ತಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಬೌನ್ಸರ್ ತಲೆಯ ಮೇಲೆ ಬಿಯರ್ ಸುರಿದಿದ್ದಕ್ಕಾಗಿ ಅವನನ್ನು ಬಾರ್‌ನಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ. ಅವನು ತನ್ನ ಬಟ್ಟೆಗಳನ್ನು ತೆಗೆದು ಬಾರ್‌ನಲ್ಲಿ ಗದ್ದಲವನ್ನುಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆದ ವಿಡಿಯೊದಲ್ಲಿ ಪ್ರವಾಸಿ ಬಟ್ಟೆ ಬಿಚ್ಚಿಕೊಂಡು ಜಗಳವಾಡುವುದು ಸೆರೆಯಾಗಿದೆ. ಅವನನ್ನು ಬೌನ್ಸರ್‌ಗಳು ಥಳಿಸಿ ನೆಲದ ಮೇಲೆ ಎಸೆದಿದ್ದಾರೆ. ಕೊನೆಗೆ ಆತ ಅವಮಾನದಿಂದ ತನ್ನ ಲಾಡ್ಜ್ ಗೆ ಹಿಂತಿರುಗಿದ್ದಾನೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಬಟ್ಟೆಬಿಚ್ಚಿಕೊಂಡು ಗಲಾಟೆ ಮಾಡಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಮುಂಬೈನ ಬಾಂದ್ರಾದ ಟ್ರಾಫಿಕ್ ಸಿಗ್ನಲ್‍ನಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳಿಗೆ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿಕೊಂಡು ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆಯನ್ನು ಮಹಿಳೆ ವಿಡಿಯೊ ರೆಕಾರ್ಡ್ ಮಾಡಿ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಇದು ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಕ್ರೂರಿಗಳ ಚಿತ್ರಹಿಂಸೆಗೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ- ಆಘಾತಕಾರಿ ವಿಡಿಯೊ ಇಲ್ಲಿದೆ

ವೈರಲ್ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಆಹಾರವನ್ನು ಕೇಳಲು ಅವಳ ಆಟೋದ ಬಳಿ ಬಂದಿದ್ದಾನೆ. ಆಗ ಅವಳು ಅವನನ್ನು ನಿರ್ಲಕ್ಷಿಸಿದ್ದಾಳೆ. ಹೀಗಾಗಿ ಕೋಪಗೊಂಡ ಆತ ಬಟ್ಟೆ ಬಿಚ್ಚಿಕೊಂಡು ಅವಳ ಮೇಲೆ ಕಿರುಚಾಡಿದ್ದಾನೆ ಮತ್ತು ಕಾಲುದಾರಿಯಲ್ಲಿ ಹೋಗುತ್ತಾ ಉಗುಳಿದ್ದಾನೆ. ಅಲ್ಲದೇ ಆ ವ್ಯಕ್ತಿ ಅವಳ ತೊಡೆಯನ್ನು ಹಿಡಿದು ಅವಳ ಉಡುಗೆಯ ಬಗ್ಗೆ ಕಾಮೆಂಟ್ ಮಾಡಿ, ಅಂತಹ ಬಟ್ಟೆಗಳು ಕಿರುಕುಳಕ್ಕೆ ಕಾರಣ ಎಂದು ಸೂಚಿಸಿದ್ದಾನೆ ಎಂಬುದಾಗಿ ಆಕೆ ಆರೋಪಿಸಿದ್ದಳು. ಈ ವಿಡಿಯೊ ಮುಂಬೈ ಪೊಲೀಸರ ಗಮನ ಸೆಳೆದಿದೆ. ಹೀಗಾಗಿ ಘಟನೆ ನಡೆದ ಸುಮಾರು 12 ಗಂಟೆಗಳ ನಂತರ, ಮುಂಬೈ ಪೊಲೀಸರು ಆಕೆಯ ಪೋಸ್ಟ್‌ಗೆ ಉತ್ತರಿಸಿ, ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ. ಹೀಗಾಗಿ ಮಹಿಳೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾಳೆ.