ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Usha Vance: ಅಮೆರಿಕದ ಎರಡನೆ ಮಹಿಳೆ ಉಷಾ ವ್ಯಾನ್ಸ್‌ ಯಾರು? ಭಾರತಕ್ಕೂ ಇವರಿಗೂ ನಂಟೇನು?

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದು, ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ವ್ಯಾನ್ಸ್ ಉಷಾ ವ್ಯಾನ್ಸ್, ಅವರ ಮಕ್ಕಳು ಮತ್ತು ಅಮೆರಿಕದ ಆಡಳಿತದ ಇತರ ಹಿರಿಯ ಸದಸ್ಯರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡಿದ್ದಾರೆ.

ಅಮೆರಿಕದ ಎರಡನೆ ಮಹಿಳೆ ಉಷಾ ವ್ಯಾನ್ಸ್‌ ಯಾರು?

Profile Vishakha Bhat Apr 21, 2025 1:49 PM

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದು, ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ವ್ಯಾನ್ಸ್ , (Usha Vance) ಅವರ ಮಕ್ಕಳು ಮತ್ತು ಅಮೆರಿಕದ ಆಡಳಿತದ ಇತರ ಹಿರಿಯ ಸದಸ್ಯರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡಿದ್ದಾರೆ. ವ್ಯಾನ್ಸ್‌ ಕುಟುಂಬಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ಭಾರತೀಯ ಮೂಲವನ್ನು ಹೊಂದಿದ್ದಾರೆ. ಅವರ ತಂದೆ ಆಂಧ್ರಪ್ರದೇಶದವರಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದಾರೆ.

ಉಷಾ ವ್ಯಾನ್ಸ್ ಯಾರು?

ಮೂಲತಃ ಉಷಾ ಚಿಲುಕುರಿಯಾಗಿದ್ದ ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿ ಇವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳನ್ನು ಹೊಂದಿದ್ದಾರೆ. 38 ವರ್ಷದ ಉಷಾ ವ್ಯಾನ್ಸ್ ಅಮೆರಿಕಾದ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ. ಇವರು ರಾಧಾಕೃಷ್ಣ "ಕ್ರಿಶ್" ಚಿಲುಕುರಿ ಮತ್ತು ಲಕ್ಷ್ಮಿ ಚಿಲುಕುರಿ ದಂಪತಿಯ ಪುತ್ರಿ. ಅವರ ಕುಟುಂಬವು ಭಾರತದ ಆಂಧ್ರಪ್ರದೇಶದ ವಡ್ಲೂರು ಎಂಬ ಹಳ್ಳಿಯ ಮೂಲವನ್ನು ಹೊಂದಿದೆ. ಅವರ ತಂದೆ, ಮೆಕ್ಯಾನಿಕಲ್ ಎಂಜಿನಿಯರ್, ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನಿಂದ ಪದವಿ ಪಡೆದಿದ್ದಾರೆ ಮತ್ತು ಅವರ ತಾಯಿ ಜೀವಶಾಸ್ತ್ರಜ್ಞೆ. ಉಷಾ ಅವರ ತಂದೆ ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಉಷಾ ವ್ಯಾನ್ಸ್ ಒಬ್ಬ ಗೌರವಾನ್ವಿತ ವಕೀಲೆ, ಅವರು ಯುನೈಟೆಡ್ ಸ್ಟೇಟ್ಸ್‌ನ ಕೆಲವು ಪ್ರಭಾವಿ ನ್ಯಾಯಾಧೀಶರೊಂದಿಗೆ ಕೆಲಸ ಮಾಡಿದ ಅನುಭವನ್ನು ಹೊಂದಿದ್ದಾರೆ.ಉಷಾ, ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿಪೂರ್ವ ಪದವಿಯನ್ನು ಪಡೆದಿದ್ದು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ಕಾನೂನು ವ್ಯಾಸಂಗ ಮಾಡಲು ಯೇಲ್‌ಗೆ ತೆರಳಿದ್ದಾರೆ. ಅಲ್ಲಿ ಅವರು ಜೆಡಿ ವ್ಯಾನ್ಸ್‌ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿ 2014 ರಲ್ಲಿ ಈ ಜೋಡಿ ವಿವಾಹವಾದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಗೆಲುವಿನ ನಂತರ ಉಷಾ ಅವರ ಮೂಲ ಊರಾಗಿರುವ ವಡ್ಲೂರಲ್ಲಿ ಸಂಭ್ರಮಾಚರಣೆ ನಡೆಸಲಾಗಿತ್ತು.

ಈ ಸುದ್ದಿಯನ್ನೂ ಓದಿ : JD Vance: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಂದು ಭಾರತಕ್ಕೆ ಭೇಟಿ-ದೆಹಲಿಯಲ್ಲಿ ಹೈ ಸೆಕ್ಯೂರಿಟಿ

ಇದೀಗ ವ್ಯಾನ್ಸ್‌ ಕುಟುಂಬ ಇದೀಗ ಭಾರತಕ್ಕೆ ಬಂದಿದೆ. ಉಫಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರಿಗೆ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಸೇನಾ ಗೌರವ ವಂದನೆ ಸಲ್ಲಿಸಲಾಗಿದೆ. ಯುಎಸ್‌ ಉಪಾಧ್ಯಕ್ಷರಿಗೆ ಭಾರತದ ಮೂರೂ ರಕ್ಷಣಾ ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.