ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani Sister: ಈಕೆ ನಿಜಕ್ಕೂ ರಿಯಲ್‌ ಲೈಫ್‌ ಹೀರೋ; ಅಪಾಯದಲ್ಲಿದ್ದ ಮಗುವನ್ನು ರಕ್ಷಿಸಿದ ಖ್ಯಾತ ನಟಿಯ ಸಹೋದರಿ

Disha Patani’s sister: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಅವರು ಭಾನುವಾರ ಬೆಳಗ್ಗೆ ಶಿಥಿಲಗೊಂಡ ಕಟ್ಟಡವೊಂದರಿಂದ ಸುಮಾರು 9 ರಿಂದ 10 ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖುಷ್ಬೂ ಪಟಾನಿ ಅವರು ಗೋಡೆಯನ್ನು ಹತ್ತಿ ಹೋಗಿ ಶಿಶುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ

ಮಗುವನ್ನು ರಕ್ಷಿಸಿದ ನಟಿ ದಿಶಾ ಪಟಾನಿ ಸಹೋದರಿ

ಶಿಶುವನ್ನು ರಕ್ಷಿಸಿದ ಖುಷ್ಬೂ ಪಟಾನಿ

Profile Sushmitha Jain Apr 21, 2025 12:47 PM

ರಾಯ್‌ಬರೇಲಿ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ (Disha Patani’s sister) ಖುಷ್ಬೂ ಪಟಾನಿ (Khushboo Patani) ಅವರು ಭಾನುವಾರ ಬೆಳಗ್ಗೆ ಶಿಥಿಲಗೊಂಡ ಕಟ್ಟಡವೊಂದರಿಂದ ಸುಮಾರು 9 ರಿಂದ 10 ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ (Rescued an abandoned child ) ಎಂದು ಪೊಲೀಸರು ತಿಳಿಸಿದ್ದಾರೆ. ಖುಷ್ಬೂ ಪಟಾನಿ ಅವರು ಗೋಡೆಯನ್ನು ಹತ್ತಿ ಹೋಗಿ ಶಿಶುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ದಿಶಾ ಅವರ ಬರೇಲಿ ನಿವಾಸದ ಸಮೀಪದಲ್ಲಿ ನಡೆದಿದ್ದು, ಖುಷ್ಬೂ ಅವರು ತಮ್ಮ ತಂದೆ ನಿವೃತ್ತ ಪೊಲೀಸ್ ಸರ್ಕಲ್ ಆಫೀಸರ್ ಜಗದೀಶ್ ಪಟಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಖುಷ್ಬೂ ಅವರ ಈ ಧೈರ್ಯದ ಕಾರ್ಯಕ್ಕೆ ನಗರದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸರ್ಕಲ್ ಆಫೀಸರ್ (ಸಿಟಿ-I) ಪಂಕಜ್ ಶ್ರೀವಾಸ್ತವ್ ಅವರ ಪ್ರಕಾರ, ಖುಷ್ಬೂ ಅವರು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ಸಮೀಪದಲ್ಲಿ ಶಿಥಿಲಗೊಂಡ ಕಟ್ಟಡದಿಂದ ಶಿಶುವೊಂದರ ಕೂಗು ಕೇಳಿದ್ದಾರೆ. "ಕಟ್ಟಡಕ್ಕೆ ನೇರವಾಗಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಅವರು ಧೈರ್ಯದಿಂದ ಗೋಡೆಯನ್ನು ಹತ್ತಿ ಹೋಗಿ ಸ್ಥಳವನ್ನು ತಲುಪಿದರು. ಒಳಗೆ, ಶಿಶುವೊಂದು ನೆಲದ ಮೇಲೆ ಬಿದ್ದು, ಅಳುತ್ತಿರುವುದನ್ನು ಕಂಡಿದ್ದಾರೆ. ಮಗುವಿನ ಮುಖದ ಮೇಲೆ ಗಾಯಗಗಳಾಗಿವೆ” ಎಂದು ಶ್ರೀವಾಸ್ತವ್ ಹೇಳಿದ್ದಾರೆ.

ವೈರಲಾಗ್ತಿರುವ ವಿಡಿಯೊ

ಈ ಸುದ್ದಿಯನ್ನು ಓದಿ: DK Shivakumar: ಧರ್ಮಸ್ಥಳ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧ: ಡಿಕೆಶಿ

ಖುಷ್ಬೂ ಅವರು ತಕ್ಷಣ ಶಿಶುವನ್ನು ಮನೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಕುಟುಂಬವು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಮೀಪದ CCTV ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಶಿಶುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. “ಮಗುವನ್ನು ಇಂತಾ ಸ್ಥಿತಿಯಲ್ಲಿ ಬಿಟ್ಟವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ" ಎಂದು ಶ್ರೀವಾಸ್ತವ್ ಹೇಳಿದ್ದಾರೆ.

ನಟಿ ದಿಶಾ ಪಟಾನಿಯವರ ಸಹೋದರಿ ಖುಷ್ಬೂ ಪಟಾನಿ ಅವರು ಮಾಜಿ ಸೇನಾ ಅಧಿಕಾರಿಯಾಗಿದ್ದಾರೆ. 33 ವರ್ಷದ ಖುಷ್ಬೂ ಈಗ ಫಿಟ್ನೆಸ್ ತರಬೇತುದಾರಾಗಿದ್ದು, ಉದ್ಯಮಿ ಸಲಹೆಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಖುಷ್ಬೂ ಅವರು ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ಒಂದು ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.