Khushi Kapoor: ರೂಮರ್ ಬಾಯ್ಫ್ರೆಂಡ್ ಬರ್ತ್ ಡೇ ಪಾರ್ಟಿಯಲ್ಲಿ ನಟಿ ಖುಷಿ ಕಪೂರ್!
ಮಾಡಲಿಂಗ್ ಮತ್ತು ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಕ್ರಿವಾಗಿರುವ ನಟ ವೇದಾಂಗ್ ರೈನಾ ಅವರು ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಆ್ಯಕ್ಷನ್ ಥ್ರಿಲ್ಲರ್ ಜಿಗ್ರಾ ಚಿತ್ರದ ಮೂಲಕ ಜನಮನ ಗೆದ್ದ ನಟ ವೇದಾಂಗ್ ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಖತ್ ಆ್ಯಕ್ಟಿವ್ ಆಗಿದ್ದಾರೆ. ನಟ ವೇದಾಂಗ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಲಂಡನ್ ನಲ್ಲಿ ಸೆಲೆಬ್ರೆಟ್ ಮಾಡಿಕೊಂಡಿದ್ದು ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.



ಜೂನ್ 2ರಂದು ಲಂಡನ್ನಲ್ಲಿ ತಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ನಟ ವೇದಾಂಗ್ ತಮ್ಮ 25 ನೇ ವರ್ಷದ ಬರ್ತ್ ಡೇ ಸೆಲಬ್ರೇಶನ್ ಮಾಡಿಕೊಂಡಿದ್ದಾರೆ. ವೇದಾಂಗ್ ಹುಟ್ಟುಹಬ್ಬಕ್ಕಾಗಿ ಅವರ ಸ್ನೇಹಿತೆ, ಬಾಲಿವುಡ್ ನಟಿ ಖುಷಿ ಕಪೂರ್ ಕೂಡ ಲಂಡನ್ ಗೆ ಆಗಮಿಸಿದ್ದು ಇದೀಗ ಇವರಿಬ್ಬರಿಬ್ಬರ ನಡುವೆ ಏನೊ ಇದೆ ಎಂಬ ಗಾಸಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವೈರಲ್ ಆದ ಫೋಟೋದಲ್ಲಿ ನಟ ವೇದಾಂಗ್ ಕೇಕ್ ಕಟ್ ಮಾಡುತ್ತಿದ್ದಂತೆ ಖುಷಿ ಕಪೂರ್ ಕೂಡ ಪಕ್ಕದಲ್ಲಿ ನಿಂತು ಸೆಲಬ್ರೇಶನ್ ನಲ್ಲಿ ಭಾಗಿಯಾಗಿದ್ದನ್ನು ಕಾಣಬಹುದು. ಖುಷಿ ಮತ್ತು ವೇದಾಂಗ್ ಇಬ್ಬರು ಕೂಡ ಬ್ಲ್ಯಾಕ್ ಕಲರ್ ಕಾಂಬಿನೇಶನ್ ಡ್ರೆಸ್ ತೊಟ್ಟಿದ್ದು ಈ ಕ್ಯೂಟ್ ಜೋಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಖುಷಿ ಕಪೂರ್ ಕೂಡ ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ತನ್ನ ಸ್ನೇಹಿತೆಯರಾದ ಕರೀಮಾ ಬ್ಯಾರಿ ಮತ್ತು ಆಲಿಯಾ ಕಶ್ಯಪ್ ಜೊತೆ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕೂಡ ಇವರು ಪಾಲ್ಗೊಂಡಿದ್ದು ಈ ಫೋಟೋಗಳನ್ನು ಕರೀಮಾ ಬ್ಯಾರಿ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟ ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಮತ್ತು ಕರೀಮಾ ಅವರ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಬ್ಲ್ಯಾಕ್ ಕಲರ್ ಮಿನಿ ಮಾರ್ಡನ್ ಸ್ಕರ್ಟ್ಸ್ ನಲ್ಲಿ ಖುಷಿ ಸಖತ್ ಹಾಟ್ ಆಗಿ ಕಂಡಿದ್ದಾರೆ. ಕರೀಮಾ ಬ್ಯಾರಿ ಕೂಡ ಡೆನಿಮ್ ಪ್ಯಾಂಟ್ ಮತ್ತು ಮಾಡರ್ನ್ ಟಾಪ್ ನಲ್ಲಿ ಬೋಲ್ಡ್ ಆಗಿ ಕಂಗೊಳಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಖುಷಿ ಬರ್ತ್ ಡೇ ಪಾರ್ಟಿಗೆ ನಟ ವೇದಾಂಗ್ ಬಂದಿದ್ದ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ನ್ಯಾಶನಲ್ ಕ್ರಶ್, ನಟ ವೇದಾಂಗ್ ಅವರು ಕಾಲೇಜು ದಿನಗಳಲ್ಲಿ ಸಂಗೀತಾ ಆಸಕ್ತಿ ಹೊಂದಿದ್ದ ಇವರು ಗಿಟಾರ್ ನಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಮಾಡೆಲಿಂಗ್ ಮತ್ತು ನಟನ ಕ್ಷೇತ್ರದಿಂದಲೂ ಆಸಕ್ತಿ ಹೊಂದಿದ್ದು ಇದಕ್ಕಾಗಿ ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ಸಿನಿಮಾದಲ್ಲಿ ಸದಾ ಬ್ಯುಸಿಯಾಗಿದ್ದ ವೇದಾಂಗ್ ಇತ್ತೀಚೆಗಷ್ಟೇ ಖುಷಿ ಕಪೂರ್ ಜೊತೆಗೆ ರಿಲೆಶನ್ಶಿಪ್ ವಿಚಾರದಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ದಿ ಆರ್ಚೀಸ್ ಸಿನಿಮಾದಲ್ಲಿ ವೇದಾಂಗ್ ಅವರು ಖುಷಿ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದರು.