Ananya Panday: ನಟಿ ಅನನ್ಯ ಪಾಂಡೆ ವರ್ಕೌಟ್ ಲುಕ್ ಹೀಗಿದೆ
ಬಾಲಿವುಡ್ ನಟಿ ಅನನ್ಯ ಪಾಂಡೆ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ʼಸ್ಟೂಡೆಂಟ್ ಆಫ್ ದಿ ಇಯರ್ 2ʼ ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದ ಇವರು ಸಿನಿಮಾ ಕೆಲಸದಲ್ಲಿ ಸದಾ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಕೆಲವು ಪ್ರಾಡೆಕ್ಟ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಖ್ಯಾತಿ ಗಳಿಸಿದ್ದಾರೆ. ಈ ಬಿಡುವಿಲ್ಲದ ವೇಳೆಯ ನಡುವೆಯೂ ನಟಿಯ ಯೋಗ, ವರ್ಕೌಟ್ ಮಾಡುವ ಅನೇಕ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Ananya Panday


'ಸ್ಟೂಡೆಂಟ್ ಆಫ್ ದಿ ಇಯರ್ 2', 'ಪತಿ ಪತ್ನಿ ಔರ್ ವೊ', 'ಕಾಲಿ ಪಿಲಿ', 'ಲೈಗರ್', 'ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ಡ್ರೀಮ್ ಗರ್ಲ್ 2', 'ಕೇಸರಿ ಚಾಪ್ಟರ್ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಜನ ಮನ ಗೆದ್ದ ಅನನ್ಯಾ ಈಗಲೂ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ. ಅವರ ಫಿಟ್ನೆಸ್ ಸಿಕ್ರೆಟ್ಗಳೇ ಇವರ ಯಂಗ್ ಲುಕ್ಗೆ ಕಾರಣ ಎನ್ನಲಾಗುತ್ತಿದೆ. ಅನನ್ಯಾ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಫೋಟೊ ಹಂಚಿಕೊಂಡಿದ್ದು ಗ್ರೀನ್ ಕಲರ್ ವರ್ಕೌಟ್ ಡ್ರೆಸ್ನಲ್ಲಿ ಹೆಚ್ಚು ಸ್ಲಿಮ್ ಆಗಿ ಕಂಡಿದ್ದಾರೆ. ಮಿರರ್ ಎದುರಿಗೆ ಈ ಫೋಟೊವನ್ನು ತೆಗೆಸಿಕೊಂಡಿದ್ದು ಅವರ ಲುಕ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಅನನ್ಯ ಪಾಂಡೆ ಪರ್ಪಲ್ ಕಲರ್ ಜಾಕೆಟ್ ಧರಿಸಿದ್ದಾರೆ. ಪಿಂಕ್ ಕಲರ್ ಜಾಗಿಂಗ್ ಪ್ಯಾಂಟ್ ಮತ್ತು ಅದಕ್ಕೆ ಹೊಂದಿಕೆಯಾಗುವ ಸ್ಪೋರ್ಟ್ಸ್ ಬ್ರಾ ಧರಿಸಿ ಸಖತ್ ಹಾಟ್ ಆಗಿ ಕಂಡಿದ್ದಾರೆ.

ಯುವ ನಟಿ ಅನನ್ಯ ಪಾಂಡೆ ಅವರು ಬ್ಲ್ಯಾಕ್ ಕಲರ್ ಲೆಗ್ಗಿಂಗ್ಸ್ ಹಾಗೂ ಸ್ಪೋರ್ಟ್ಸ್ ಟಾಪ್ ಧರಿಸಿ ಬೋಲ್ಡ್ ಆಗಿ ಕಂಡಿದ್ದಾರೆ. ಮೇಕಪ್ ಇಲ್ಲದೆ ನಟಿ ನ್ಯಾಚುರಲ್ ಆಗಿ ಕಂಗೊಳಿಸಿದ್ದಾರೆ.

ಇನ್ನೊಂದು ಫೋಟೊದಲ್ಲಿ ನಟಿ ಅನನ್ಯಾ ಪಾಂಡೆ ಪೀಚ್ ಬಣ್ಣದ ವರ್ಕೌಟ್ ಬಟ್ಟೆ ಧರಿಸಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ. ಈ ಮೂಲಕ ನಟಿ ಅನನ್ಯ ಯೋಗಾಭ್ಯಾಸದ ಪ್ರಾಮುಖ್ಯತೆಯನ್ನು ಅಭಿಮಾನಿಗಳಿಗೆ ತಿಳಿಸಿದಂತಿದೆ.

ಇನ್ನೊಂದು ಫೋಟೊದಲ್ಲಿ ನಟಿ ಅನನ್ಯ ಪಾಂಡೆ ಬ್ಲ್ಯಾಕ್ ಕಲರ್ ಸ್ಪೋರ್ಟ್ಸ್ ಬಟ್ಟೆ ಧರಿಸಿದ್ದು ಸಖತ್ ಯಂಗ್ ಲುಕ್ನಲ್ಲಿ ಮಿಂಚಿದ್ದಾರೆ. ನಟಿ ಅನನ್ಯಾ ತಮ್ಮ ಯೋಗಾಭ್ಯಾಸದ ವಿಶೇಷ ಭಂಗಿಯ ಮೂಲಕ ಫೋಟೊಗೆ ಪೋಸ್ ನೀಡಿದ್ದಾರೆ. ಈ ಯೋಗಾಭ್ಯಾಸದ ವಿಭಿನ್ನವಾದ ಫೋಟೊ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.