ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs WI: 3 ವಿಕೆಟ್ ಪಡೆದು ಎರಡು ಮಹತ್ವದ ದಾಖಲೆ ಬರೆದ ಪ್ಯಾಟ್ ಕಮಿನ್ಸ್!

Pat Cummins Creates History: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 159 ರನ್‌ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ‌. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಎರಡು ಮಹತ್ವದ ದಾಖಲೆಗಳನ್ನು ಬರೆದಿದ್ದಾರೆ.

3 ವಿಕೆಟ್ ಪಡೆದು ಎರಡು ಮಹತ್ವದ ದಾಖಲೆ ಬರೆದ ಪ್ಯಾಟ್ ಕಮಿನ್ಸ್!

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌.

Profile Ramesh Kote Jun 28, 2025 4:20 PM

ಬಾರ್ಬಡೋಸ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (AUS vs WI) ಆಸ್ಟ್ರೇಲಿಯಾ ತಂಡ 159 ರನ್‌ಗಳ ಗೆಲುವು ಸಾಧಿಸಿದ್ಧು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ( Pat Cummins) ಅವರು ವೆಸ್ಟ್ ಇಂಡೀಸ್ ನಾಯಕ ರಾಸ್ಟನ್ ಚೇಸ್ (Roston Chase) ಅವರ ವಿಕೆಟ್ ಪಡೆಯುವ ಮೂಲಕ ಎರಡು ಮಹತ್ವದ ದಾಖಲೆಗಳನ್ನು ಮುರಿದಿದ್ದಾರೆ.

ವೆಸ್ಟ್ ಇಂಡೀಸ್‌ನ ವೇಗದ ಬೌಲಿಂಗ್‌ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಸರ್ವಪತನಗೊಂಡಿತು. ನಂತರ ದೊಡ್ಡ ಮೊತ್ತ ಗಳಿಸುವ ವೆಸ್ಟ್ ಇಂಡೀಸ್ ಆಸೆಗೆ ಬ್ರೇಕ್ ಹಾಕಿದ ಆಸೀಸ್ ವೇಗಿಗಳು 190 ರನ್‌ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲೂ ಕೆರಿಬಿಯನ್ ಆಟಗಾರರನ್ನು ತಮ್ಮ ಬೌಲಿಂಗ್ ದಾಳಿಯಿಂದ ನಿಯಂತ್ರಿಸಿದ ಆಸ್ಟ್ರೇಲಿಯಾ 159 ರನ್‌ಗಳ ಗೆಲುವು ದಾಖಲಿಸಿತು.

WTC Points Table: ಆಸ್ಟ್ರೇಲಿಯಾಗೆ ಅಗ್ರ ಸ್ಥಾನ, 5ನೇ ಸ್ಥಾನಕ್ಕೆ ಕುಸಿದ ಭಾರತ ತಂಡ!

ಶಮರ್‌ ಜೋಸೆಫ್‌ ಅವರ ವೇಗದ ಬೌಲಿಂಗ್‌ ದಾಳಿಯ ಹೊರತಾಗಿಯೂ ಟ್ರಾವಿಸ್ ಹೆಡ್, ಅಲೆಕ್ಸ್ ಕೇರಿ ಹಾಗೂ ಬೇ ವೆಬ್‌ಸ್ಟರ್‌ ಅವರ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 310 ರನ್ ಕಲೆಹಾಕಿ ವೆಸ್ಟ್ ಇಂಡೀಸ್ ಗೆಲುವಿಗೆ 301 ರನ್‌ಗಳ ಗುರಿಯನ್ನು ನೀಡಿತು. ಈ ದೊಡ್ಡ ಮೊತ್ತ ಹಿಂಬಾಲಿಸಿದ ವೆಸ್ಟ್ ಇಂಡೀಸ್, ಆಸೀಸ್ ವೇಗಿ ಜಾಶ್‌ ಹೇಝಲ್‌ವುಡ್ (5 ವಿಕೆಟ್) ಬೌಲಿಂಗ್‌ ದಾಳಿಗೆ ನಲುಗಿ 141 ರನ್‌ಗಳಿಗೆ ಆಲೌಟ್ ಆಗುವ ಮೂಲಕ 159 ರನ್ ಸೋಲು ಕಂಡಿತು. ಪಂದ್ಯದಲ್ಲಿ ಆಸೀಸ್ನ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಹಾಗೂ ಜಾಶ್ ಹೇಝಲ್‌ವುಡ್ ಅವರು ತಮ್ಮ ವೇಗದ ದಾಳಿಯಿಂದ 14 ವಿಕೆಟ್ ಪಡೆದು ಮಿಂಚಿದರು.

ENG vs IND: ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಹಿನ್ನೋಟ; ಐತಿಹಾಸಿಕ ಗೆಲುವಿಗೆ ಭಾರತ ಕಾತರ

ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಪ್ಯಾಟ್ ಕಮಿನ್ಸ್ ವೆಸ್ಟ್ ಇಂಡೀಸ್ ನಾಯಕ ರಾಸ್ಟನ್ ಚೇಸ್ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಪಂದ್ಯದಲ್ಲಿ 10 ಎದುರಾಳಿ ತಂಡದ ನಾಯಕರ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಪ್ಯಾಟ್ ಕಮಿನ್ಸ್ 6 ಬಾರಿ ಔಟ್ ಮಾಡಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ (3 ಬಾರಿ), ವಿಶ್ವಕಪ್ ವಿಜೇತ ನಾಯಕ ತೆಂಬಾ ಬವೂಮ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ರೈಗ್ ಬ್ರಾಥ್‌ವೇಟ್, ನ್ಯೂಜಿಲೆಂಡ್‌ನ ಟಿಮ್ ಸೌಥಿಯನ್ನು ತಲಾ ಎರಡು ಬಾರಿ, ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಶಾನ್ ಮಸೂದ್, ಟೀಮ್ ಇಂಡಿಯಾದ ಜಸ್‌ಪ್ರೀತ್ ಬುಮ್ರಾ, ವೆಸ್ಟ್ ಇಂಡೀಸ್‌ನ ರಾಸ್ಟನ್ ಚೇಸ್ ಅವರನ್ನು ಒಂದು ಪಂದ್ಯದಲ್ಲಿ ಔಟ್ ಮಾಡಿದ್ದಾರೆ. ವಿಶೇಷವೆಂದರೆ ಕಳೆದ ಆರು ಪಂದ್ಯಗಳಲ್ಲಿ ಎದುರಾಳಿ ತಂಡದ ನಾಯಕರ ವಿಕೆಟ್ ಅನ್ನು ಪ್ಯಾಟ್ ಕಮಿನ್ಸ್‌ ಪಡೆದಿದ್ದಾರೆ.



ರಿಚೀ ಬೆನಾಡ್ ದಾಖಲೆ ಮುರಿದ ಕಮಿನ್ಸ್

ಆಸ್ಟ್ರೇಲಿಯಾದ ಮಾಜಿ ನಾಯಕ 63 ವರ್ಷಗಳ ಹಿಂದೆ 138 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ನಾಯಕ ಎಂಬ ದಾಖಲೆ ಬರೆದಿದ್ದರು. ಈಗ ಆ ದಾಖಲೆಯನ್ನು ಪ್ಯಾಟ್ ಕಮಿನ್ಸ್ (140) ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಯಕ ಎಂಬ ದಾಖಲೆ ಪಾಕಿಸ್ತಾನದ ಇಮ್ರಾನ್ ಖಾನ್ (187 ವಿಕೆಟ್) ಹೆಸರಿನಲ್ಲಿದೆ.