ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದರ ಬಗ್ಗೆ ಇಂಗ್ಲೆಂಡ್‌ ಹಿರಿಯ ವೇಗಿ ಕ್ರಿಸ್‌ ವೋಕ್ಸ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ವೋಕ್ಸ್‌ ಪ್ರತಿಕ್ರಿಯೆ!

ಕೊಹ್ಲಿ-ರೋಹಿತ್‌ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ.

Profile Ramesh Kote Jun 9, 2025 4:42 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು (IND vs ENG) ಜೂನ್‌ 20 ರಂದು ಆರಂಭವಾಗಲಿದೆ. ಆ ಮೂಲಕ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲಿದೆ. ಆದರೆ, ಈ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಬಗ್ಗೆ ಇಂಗ್ಲೆಂಡ್‌ ವೇಗದ ಬೌಲರ್‌ ಕ್ರಿಸ್‌ ವೋಕ್ಸ್‌ (Chris Woaks) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಗೂ ಮುನ್ನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಕೂಡ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ರೋಹಿತ್‌ ಶರ್ಮಾ ಟೆಸ್ಟ್‌ಗೆ ನಿವೃತ್ತಿ ಹೇಳಿದ ಹಿನ್ನೆಲೆಯಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಮೂವರು ಹಿರಿಯ ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು ಭಾರತ ಟೆಸ್ಟ್‌ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದಿದೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.

IND vs ENG Test Series: ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

"ಬಲಿಷ್ಠ ಎದುರಾಳಿ ತಂಡದ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡುವುದು ಯಾವಾಗಲೂ ಅತ್ಯುತ್ತಮವಾಗಿರುತ್ತದೆ. ಏಕೆಂದರೆ ಈ ಸರಣಿಯಲ್ಲಿ ನಾವು ಕಠಿಣ ಹೋರಾಟವನ್ನು ನಡೆಸಬಹುದಾಗಿದೆ," ಎಂದು ಕ್ರಿಸ್‌ ವೋಸ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಭಾರತ ಎ ವಿರುದ್ದದ ಪಂದ್ಯವನ್ನು ಆಡುವಾಗ ಹೇಳಿಕೊಂಡಿದ್ದಾರೆ.

"ಕಳೆದ ಹಲವು ವರ್ಷಗಳಿಂದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ವಿರುದ್ಧ ನಾವು ಕೆಲ ಕಠಿಣ ಪೈಪೋಟಿಯನ್ನು ನೀಡಿದ್ದೇವೆ. ಆದರೆ, ಈ ಬಾರಿ ಅವರ ಅನುಪಸ್ಥಿತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಭಾರತೀಯ ಕ್ರಿಕೆಟ್‌ ಸಾಕಷ್ಟು ಆಳವಾಗಿದೆ. ಇಲ್ಲಿಗೆ ಬರುವ ಆಟಗಾರರೆಲ್ಲರೂ ಅಗ್ರ ದರ್ಜೆಯ ಗುಣಮಟ್ಟವನ್ನು ಹೊಂದಿರುತ್ತಾರೆಂಬ ಬಗ್ಗೆ ನನಗೆ ಖಚಿತವಾಗಿದೆ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ," ಎಂದು ಅಗರು ತಿಳಿಸಿದ್ದಾರೆ.

IND vs ENG: ಟೆಸ್ಟ್‌ ಸರಣಿಗೆ ಮಾರ್ಕ್‌ ವುಡ್‌ ಲಭ್ಯತೆ ಬಗ್ಗೆ ಇಂಗ್ಲೆಂಡ್‌ ಸೆಲೆಕ್ಟರ್‌ ಮಹತ್ವದ ಹೇಳಿಕೆ!

ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಕ್ರಿಸ್‌ ವೋಕ್ಸ್‌ ಕೀ ಬೌಲರ್‌ ಆಗಿದ್ದಾರೆ. ನಾರ್ಥ್‌ಹ್ಯಾಮ್ಟನ್‌ನಲ್ಲಿ ಭಾರತ ಎ ವಿರುದ್ಧ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಕ್ರಿಸ್‌ ವೋಕ್ಸ್‌ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌ ಹಾಗೂ ಕರುಣ್‌ ನಾಯರ್‌ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ಎ ತಂಡ 348 ರನ್‌ಗಳಿಗೆ ಆಲ್‌ಔಟ್‌ ಆಗಲು ನೆರವು ನೀಡಿದ್ದರು. ಪ್ರವಾಸಿ ತಂಡದ ಪರ ಕೆಎಲ್‌ ರಾಹುಲ್‌ ಶತಕವನ್ನು ಸಿಡಿಸಿದ್ದರು.

ಕೆಎಲ್‌ ರಾಹುಲ್‌ ಶತಕದ ಬಗ್ಗೆ ವೋಕ್ಸ್‌ ಪ್ರತಿಕ್ರಿಯೆ

"ಕೆಎಲ್‌ ರಾಹುಲ್‌ ನಿಜವಾಗಿಯೂ ಚೆನ್ನಾಗಿ ಆಡಿದ್ದಾರೆ ಹಾಗೂ ಒಳ್ಳೆಯ ಶತಕವನ್ನು ಬಾರಿಸಿದ್ದಾರೆ. ಇಡೀ ದಿನ ಇಲ್ಲಿನ ಪಿಚ್‌ ಉತ್ತಮವಾಗಿತ್ತು.

ಕೆಲ ಅವಧಿಗಳಲ್ಲಿ ಪಿಚ್‌ ನಿಧಾನವಾಗುತ್ತಿತ್ತು, ಆದರೆ ದಿನದ ಬಹುತೇಕ ಅವಧಿ ಪಿಚ್‌ ಉತ್ತಮವಾಗಿತ್ತು. ಇನ್ನೂ ಎರಡು ವಿಕೆಟ್‌ಗಳನ್ನು ಕಬಳಿಸಬಹುದಿತ್ತು. ಆದರೆ, ಚೆಂಡು ಹೇಗೆ ವರ್ತಿಸುತ್ತಿತ್ತು ಎಂಬ ಬಗ್ಗೆ ನನಗೆ ಖುಷಿ ಇದೆ. 17 ಓವರ್‌ಗಳನ್ನು ಬೌಲ್‌ ಮಾಡಿದ್ದು ಮುಖ್ಯ ಸಂಗತಿಯಾಗಿದೆ," ಎಂದು ಕ್ರಿಸ್‌ ವೋಕ್ಸ್‌ ಹೇಳಿದ್ದಾರೆ.