ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LSG vs PBKS: ರಿಷಭ್‌ ಪಂತ್‌ ಮತ್ತೆ ವೈಫಲ್ಯ, ಓನರ್‌ ಸಂಜೀವ್‌ ಗೋಯಂಕಾ ಪ್ರತಿಕ್ರಿಯೆ!

ಲಖನೌ ಸೂಪರ್‌ ಜಯಂಟ್ಸ್‌ ನಾಯಕ ರಿಷಭ್ ಪಂತ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಪಂತ್ 17 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಪಂತ್ ವಿಕೆಟ್ ಪಡೆದ ನಂತರ ಸಂಜೀವ್ ಗೋಯೆಂಕಾ ತುಂಬಾ ನಿರಾಶೆಯಾದರು.

LSG vs PBKS: ರಿಷಭ್‌ ಪಂತ್‌ ವೈಫಲ್ಯ, ಸಂಜೀವ್‌ ಗೋಯಂಕಾ ಪ್ರತಿಕ್ರಿಯೆ!

ರಿಷಭ್‌ ಪಂತ್‌ ವೈಫಲ್ಯದ ಬಗ್ಗೆ ಸಂಜೀವ್‌ ಗೋಯಂಕಾ ನಿರಾಶೆ.

Profile Ramesh Kote May 5, 2025 9:38 AM

ಧರ್ಮಶಾಲಾ: ಐಪಿಎಲ್ (IPL 2025) ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್ (Rishabh Pant) 18ನೇ ಸೀಸನ್‌ನಲ್ಲಿ ದೊಡ್ಡ ವೈಫಲ್ಯ ಅನುಭವಿಸಿದ್ದಾರೆ. ಭಾನುವಾರ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ಪಂತ್ 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾದರು. ರಿಷಭ್‌ ಪಂತ್ ವಿಕೆಟ್ ಕಳೆದುಕೊಂಡ ರೀತಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ನಿರಾಶೆಗೊಳಿಸಿತು. ಧರ್ಮಶಾಲಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ, ಗುರಿಯನ್ನು ಬೆನ್ನಟ್ಟುವ ಲಖನೌ ಸೂಪರ್‌ ಜಯಂಟ್ಸ್‌ ಆರಂಭ ಉತ್ತಮವಾಗಿರಲಿಲ್ಲ. ಅಗ್ರ ಕ್ರಮಾಂಕ ಕುಸಿದ ನಂತರ ತಂಡ ಸಂಕಷ್ಟಕ್ಕೆ ಸಿಲುಕಿತು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಿಷಭ್ ಪಂತ್ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದಾಗ್ಯೂ, ದೊಡ್ಡ ಗುರಿಯಿಂದಾಗಿ ಲಖನೌ ತಂಡದ ಮೇಲಿನ ಒತ್ತಡ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಈ ವೇಳೆ ನಾಯಕ ಪಂತ್ ರನ್ ಗಳಿಸುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡರು, ಆದರೆ ಈ ಪ್ರಯತ್ನದಲ್ಲಿ ಅವರು ತಮ್ಮ ವಿಕೆಟ್ ಕಳೆದುಕೊಂಡರು. ಪಂತ್ ಔಟ್ ಆದ ನಂತರ, ಪಂಜಾಬ್ ಕಿಂಗ್ಸ್ ತಂಡ, ಲಖನೌ ವಿರುದ್ಧ ಪ್ರಾಬಲ್ಯ ಸಾಧಿಸಿತು.

PBKS vs LSG: ಲಕ್ನೋ ವಿರುದ್ಧ ಪಂಜಾಬ್‌ಗೆ 37 ರನ್‌ ಜಯಭೇರಿ

ಪಂಜಾಬ್ ಕಿಂಗ್ಸ್ 236 ರನ್

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆರಂಭ ಕೂಡ ಕಳಪೆಯಾಗಿತ್ತು. ಪ್ರಿಯಾಂಶ್ ಆರ್ಯ ಮೊದಲ ಓವರ್‌ನಲ್ಲಿಯೇ ಔಟಾದರು ಆದರೆ ಪ್ರಭ್‌ ಸಿಮ್ರನ್ ಸಿಂಗ್ ಮತ್ತು ಜಾಶ್‌ ಇಂಗ್ಲಿಸ್ ಇನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಪಂಜಾಬ್ ಪರ ಜಾಶ್‌ ಇಂಗ್ಲಿಸ್ 14 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಸಣ್ಣ ಇನಿಂಗ್ಸ್‌ನಲ್ಲಿ ಅವರು ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯನ್ನು ಸಹ ಹೊಡೆದರು.



ಇಂಗ್ಲಿಸ್‌ ವಿಕೆಟ್ ಒಪ್ಪಿಸಿದ ನಂತರ, ನಾಯಕ ಶ್ರೇಯಸ್ ಅಯ್ಯರ್ ಕೂಡ ಕೈ ಚಾಚಿದರು. 25 ಎಸೆತಗಳಲ್ಲಿ 45 ರನ್ ಗಳಿಸಿ ಬಿರುಗಾಳಿಯ ಇನಿಂಗ್ಸ್‌ ಆಡಿದ ಅಯ್ಯರ್ ಔಟಾದರು. ಆದರೆ ಪ್ರಭ್‌ಸಿಮ್ರನ್ ಸಿಂಗ್ 90 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಪ್ರಭ್‌ಸಿಮ್ರನ್ 48 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿಗಳಿಂದ 91 ರನ್ ಗಳಿಸಿದರು. ಇದಲ್ಲದೆ, ಕೊನೆಯಲ್ಲಿ, ಶಶಾಂಕ್ ಸಿಂಗ್ 15 ಎಸೆತಗಳಲ್ಲಿ 33 ರನ್ ಗಳಿಸಿದರೆ, ನೆಹಾಲ್ ವಧೇರಾ 16 ಮತ್ತು ಮಾರ್ಕಸ್ ಸ್ಟೋಯ್ನಿಸ್ 15 ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್‌ 236 ರನ್‌ ಗಳಿಸಿತ್ತು.



ಲಖನೌಗೆ 37 ರನ್‌ಗಳ ಸೋಲು

ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಮಿಚೆಲ್‌ ಮಾರ್ಷ್‌ ಡಕ್‌ಔಟ್‌, ಏಡೆನ್‌ ಮಾರ್ಕ್ರಮ್‌(13), ನಿಕೋಲಸ್‌ ಪೂರನ್‌ (6) ಹಾಗೂ ರಿಷಭ್‌ ಪಂತ್‌ (18) ವಿಫಲರಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಆಯುಷ್‌ ಬದೋನಿ, 40 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 74 ರನ್‌ ಸಿಡಿಸಿ ಲಖನೌಗೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ಆದರೆ, 20ನೇ ಓವರ್‌ನಲ್ಲಿ ಔಟ್‌ ಆದರು. ಇವರಿಗೆ ಕೆಲಕಾಲ ಬೆಂಬಲ ನೀಡಿದ್ದ ಅಬ್ದುಲ್‌ ಸಮದ್‌ ಕೇವಲ 24 ಎಸೆತಗಳಲ್ಲಿ 45 ರನ್‌ ಚಚ್ಚಿದ್ದರು. ಆದರೂ ಇನ್ನುಳಿದ ಬ್ಯಾಟರ್‌ಗಳ ವೈಫಲ್ಯದಿಂದ ಎಲ್‌ಎಸ್‌ಜಿ 37 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.