ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs RR: ವೈಭವ್‌ ಸೂರ್ಯವಂಶಿಯನ್ನು ಔಟ್‌ ಮಾಡಲು ರೂಪಿಸಿದ್ದ ರಣತಂತ್ರ ರಿವೀಲ್‌ ಮಾಡಿದ ದೀಪಕ್‌ ಚಹರ್‌!

Deepak Chahar on Vaibhav Suryavanshi: ಗುರುವಾರ ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ 100 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಅಪಾಯಕಾರಿ ವೈಭವ್‌ ಸೂರ್ಯವಂಶಿ ಅವರನ್ನು ದೀಪಕ್‌ ಚಹರ್‌ ಔಟ್‌ ಮಾಡಿದ್ದರು.

ವೈಭವ್‌ ಸೂರ್ಯವಂಶಿಯನ್ನು ಔಟ್‌ ಮಾಡಿದ್ದೇಗೆಂದು ತಿಳಿಸಿದ ಚಹರ್!

ವೈಭವ್‌ ಸೂರ್ಯವಂಶಿ ಬಗ್ಗೆ ದೀಪಕ್‌ ಚಹರ್‌ ಹೇಳಿಕೆ.

Profile Ramesh Kote May 2, 2025 9:18 AM

ಜೈಪುರ: ರಾಜಸ್ಥಾನ್‌ ರಾಯಲ್ಸ್‌ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (aibhav Suryavanshi) ಅವರನ್ನು ಔಟ್‌ ಮಾಡಲು ರೂಪಿಸಿದ್ದ ಬೌಲಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ಮುಂಬೈ ಇಂಡಿಯನ್ಸ್‌ ತಂಡದ ವೇಗದ ಬೌಲರ್‌ ದೀಪಕ್‌ ಚಹರ್‌ (Deepak Chahar) ಬಹಿರಂಗಪಡಿಸಿದ್ದಾರೆ. ಗುರುವಾರ ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 100 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮುಂಬೈ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಸೋತ ಆರ್‌ಆರ್‌ ಪ್ಲೇಆಫ್ಸ್‌ ರೇಸ್‌ನಿಂದ ಹೊರ ನಡೆದಿದೆ.

ಇದೇ ಅಂಗಣದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ದ ಐಪಿಎಲ್‌ ಇತಿಹಾಸದ ಎರಡನೇ ವೇಗದ ಶತಕ ಸಿಡಿಸಿದ್ದ ವೈಭವ್‌ ಸೂರ್ಯವಂಶಿ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿಯೂ ಪ್ರಮುಖ ಆಕರ್ಷಣೆಯಾಗಿತ್ತು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡ 14ರ ಪ್ರಾಯದ ಬಾಲಕನ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಗುಜರಾತ್‌ ವಿರುದ್ಧದ ಪಂದ್ಯದಂತೆಯೇ ಈ ಪಂದ್ಯದಲ್ಲಿ ಆರ್‌ಆರ್‌ಗೆ 200ಕ್ಕೂ ಅಧಿಕ ರನ್‌ಗಳ ಗುರಿಯಿತ್ತು. ಈ ವೇಳೆ ವೈಭವ್‌ ಸೂರ್ಯವಂಶಿ ಮತ್ತೊಂದು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಬಹುದೆಂದು ನಿರೀಕ್ಷೆ ಮಾಡಲಾಗಿತ್ತು.

IPL 2025: ಆರ್‌ಸಿಬಿ, ಮುಂಬೈಗೆ ಒಂದೇ ಹೆಜ್ಜೆ ಬಾಕಿ-8 ತಂಡಗಳ ಐಪಿಎಲ್‌ ಪ್ಲೇಆಫ್ಸ್‌ ಲೆಕ್ಕಾಚಾರ!

ಆದರೆ, ಪಂದ್ಯದ ಮೊದಲನೇ ಓವರ್‌ನಲ್ಲಿ ಎರಡು ಎಸೆತಗಳನ್ನು ಆಡುವ ಮೂಲಕ ದೀಪಕ್‌ ಚಹರ್‌ಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಅವರು ಮಿಡ್‌ ಆನ್‌ ಮೇಲೆ ಬೌಂಡರಿ ಗಳಿಸಲು ವೈಭವ್‌ ಪ್ರಯತ್ನ ನಡೆಸಿದ್ದರು. ಆದರೆ, ವಿಲ್‌ ಜ್ಯಾಕ್ಸ್‌ ಸುಲಭವಾಗಿ ಕ್ಯಾಚ್‌ ಪಡೆದರು. ಅವರು ತಮ್ಮ ಆರಂಭಿಕ ಕೆಲ ಎಸೆತಗಳಲ್ಲಿ ತಲೆ ಬಗ್ಗಿಸಿ ಬ್ಯಾಟ್‌ ಮಾಡಿದ್ದರೆ, ಚೆನ್ನಾಗಿ ಇರುತ್ತಿತ್ತು. ಆದರೆ, ಆರಂಭದಲ್ಲಿ ಗಾಳಿಯಲ್ಲಿ ಹೊಡೆಯಲು ಪ್ರಯತ್ನಿಸಿ ವಿಕೆಟ್‌ ಒಪ್ಪಿಸಬೇಕಾಯಿತು.

ಪಂದ್ಯದ ಬಳಿಕ ಮಾತನಾಡಿದ ದೀಪಕ್‌ ಚಹರ್‌, ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರನ್ನು ಔಟ್‌ ಮಾಡಲು ರೂಪಿಸಿದ್ದ ಗೇಮ್‌ ಪ್ಲ್ಯಾನ್‌ ಏನೆಂದು ಬಹಿರಂಗಪಡಿಸಿದರು ಹಾಗೂ ಗುಜರಾತ್‌ ಟೈಟನ್ಸ್‌ ವಿರುದ್ದ ತೋರಿದ್ದ ದಾಖಲೆಯ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

MI vs RR: ರಾಜಸ್ಥಾನ್‌ ಪ್ಲೇಆಫ್ಸ್‌ ಕನಸು ಭಗ್ನ, ಮುಂಬೈ ಇಂಡಿಯನ್ಸ್‌ಗೆ ಸತತ ಆರನೇ ಜಯ!

"ಗುಜರಾತ್‌ ಟೈಟನ್ಸ್‌ ವಿರುದ್ಧದ ರಾಜಸ್ಥಾನ್‌ ರಾಯಲ್ಸ್‌ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಉಸಿರು ಗಟ್ಟಿಸುವ ಪ್ರದರ್ಶನವನ್ನು ತೋರಿದ್ದಾರೆ. ಅವರು ಕೆಲವೊಂದು ಕಡೆ ಬಲಿಷ್ಠವಾಗಿದ್ದಾರೆ ಆದರೆ, ಕೆಲವೊಂದು ಕಡೆ ದೌರ್ಬಲ್ಯವನ್ನು ಹೊಂದಿದ್ದಾರೆ. ಒಬ್ಬ ಬೌಲರ್‌ ಆಗಿ ಅಥವಾ ಬೌಲಿಂಗ್‌ ವಿಭಾಗವಾಗಿ ನಾವು ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ಯೋಜನೆಯನ್ನು ರೂಪಿಸುತ್ತೇವೆ. ಆದರೆ, ಒಬ್ಬರಿಗೆ ಮಾತ್ರ ನಾವು ಯೋಜನೆಯನ್ನು ರೂಪಿಸುವುದಿಲ್ಲ. ಹೌದು, ಕೆಲವೊಮ್ಮ ಯೋಜನೆಗಳು ಕೈ ಹಿಡಿಯುತ್ತವೆ, ಕೆಲವೊಮ್ಮೆ ಯೋಜನೆಗಳು ಹಿಡಿಯುವುದಿಲ್ಲ. ಹಾಗಾಗಿ ಇಂದು (ಗುರುವಾರ) ಸಂಗತಿಗಳು ನಮ್ಮ ಪರ ಇದ್ದವು ಹಾಗೂ ನಮಗೆ ಅದೃಷ್ಟವಿತ್ತು ಆದರೆ, ಅವರು ಅದ್ಭುತ ಪ್ರತಿಭೆಯನ್ನು ಹೊಂದಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಬಹುದು," ಎಂದು ಸುದ್ದಿಗೋಷ್ಠಿಯಲ್ಲಿ ದೀಪಕ್‌ ಚಹರ್‌ ಹೇಳಿದ್ದಾರೆ.

IPL 2025: ಮುಂಬೈ ಇಂಡಿಯನ್ಸ್‌ ಪರ ವಿಶೇಷ ದಾಖಲೆ ಬರೆದ ರೋಹಿತ್‌ ಶರ್ಮಾ!

ವೈಭವ್‌ ಸೂರ್ಯವಂಶಿ ವಿಕೆಟ್‌ ಒಪ್ಪಿಸಿದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಬ್ಯಾಟಿಂಗ್‌ ಕುಸಿಯಿತು. ಅಂತಿಮವಾಗಿ ಆರ್‌ಆರ್‌, 2018 ರನ್‌ಗಳ ಗುರಿಯನ್ನು ಹಿಂಬಾಲಿಸಿ 117 ರನ್‌ಗಳಿಗೆ ಆಲ್‌ಔಟ್‌ ಆಯಿತು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ ಸತತ ಆರನೇ ಪಂದ್ಯವನ್ನು ಗೆದ್ದುಕೊಂಡಿತು. ಮುಂಬೈ ಪರ 61 ರನ್‌ಗಳ ಇನಿಂಗ್ಸ್‌ ಆಡಿದ್ದ ರಯಾನ್‌ ರಿಕೆಲ್ಟನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.