Anil Kapoor: ಬಾಲಿವುಡ್ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ವಿಧಿವಶ
ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಹಾಗೂ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ನಟ ಸಂಜಯ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು ಮೇ 2 ರಂದು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಕಳೆದ ಸಪ್ಟೆಂಬರ್‌ನಲ್ಲಿ ಅವರು ತಮ್ಮ 90 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.


ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಹಾಗೂ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ನಟ ಸಂಜಯ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು ಮೇ 2 ರಂದು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಕಳೆದ ಸಪ್ಟೆಂಬರ್‌ನಲ್ಲಿ ಅವರು ತಮ್ಮ 90 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಕಳೆದ ಎರಡು ತಿಂಗಳುಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಿಧನದ ನಂತರ ಆಸ್ಪತ್ರೆ ಬಳಿ ಬೋನಿ ಕಪೂರ್, ಶನಯಾ ಕಪೂರ್, ರಿಯಾ ಕಪೂರ್ ಅವರ ಪತಿ ಕರಣ್ ಬೂಲಾನಿ, ಜಾನ್ವಿ ಕಪೂರ್ ಮತ್ತು ಶಿಖರ್ ಪಹರಿಯಾ ಸೇರಿದಂತೆ ಹಲವರು ಆಗಮಿಸಿದ್ದರು.
ನಿರ್ಮಲ್ ಕಪೂರ್ ಪ್ರಸಿದ್ಧ ನಿರ್ಮಾಪಕ ಸುರಿಂದರ್ ಕಪೂರ್ ಪತ್ನಿ. ಬೋನಿ ಕಪೂರ್, ಅನಿಲ್ ಕಪೂರ್ ಸೇರಿದಂತೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಅರ್ಜುನ್ ಕಪೂರ್, ಸೋನಮ್ ಕಪೂರ್, ರಿಯಾ ಕಪೂರ್, ಹರ್ಷವರ್ಧನ್ ಕಪೂರ್, ಜಾನ್ವಿ ಕಪೂರ್, ಅನ್ಶುಲಾ ಕಪೂರ್, ಖುಷಿ ಕಪೂರ್ ಮತ್ತು ಮೋಹಿತ್ ಮಾರ್ವಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಅಜ್ಜಿ ಇವರು. 2011 ರಲ್ಲಿ ಇವರ ಪತಿ ಸುರಿಂದರ್ ಕಪೂರ್ ಮೃತಪಟ್ಟಿದ್ದಾರೆ. . ಅವರು ಹಮ್ ಪಾಂಚ್, ವೋ ಸಾತ್ ದಿನ್, ಲೋಫರ್, ಜುದಾಯಿ ಮತ್ತು ಹಮಾರಾ ದಿಲ್ ಆಪ್ಕೆ ಪಾಸ್ ಹೈ ಮುಂತಾದ ಚಿತ್ರಗಳಿಗೆ ಸಹ ನಿರ್ಮಾಪಕಿಯಾಗಿದ್ದರು.
ನಿರ್ಮಲ್ ಅವರ 90 ವರ್ಷದ ಹುಟ್ಟಿದ ಹಬ್ಬವನ್ನು ಕುಟುಂಬಸ್ಥರು ಅದ್ದೂರಿಯಾಗಿ ಆಚರಿಸಿದ್ದರು. ಈ ಕುರಿತು ಅನಿಲ್ ಕಪೂರ್ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. 90 ವರ್ಷ ನೀವು ನಮಗೆ ಪ್ರೀತಿಯನ್ನು ನೀಡಿದ್ದೀರಿ. ನಮ್ಮ ಜೀವನವನ್ನು ಪ್ರತಿದಿನ ಸಂತೋಷ ಮತ್ತು ಸಕಾರಾತ್ಮಕತೆಯಿಂದ ತುಂಬುವಂತೆ ಮಾಡಿದ್ದೀರಿ. ನಿಮ್ಮ ಮಗನಾಗಿರಲು ನನಗೆ ಹೆಮ್ಮೆಯಿದೆ. ಜನ್ಮದಿನದ ಶುಭಾಶಯಗಳು, ಮಮ್ಮಿ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Bharath Kumar: ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕ ಭರತ್ ಕುಮಾರ್ ನಿಧನ
ಬೋನಿ ಕಪೂರ್ ಕೂಡ ಪೋಸ್ಟ್ ಹಾಕಿದ್ದರು. ಮಮ್ಮಿ ಜಿ 90 ನೇ ಹುಟ್ಟುಹಬ್ಬದ ಶುಭಾಶಯಗಳು, ಶತಮಾನಕ್ಕೆ ಇನ್ನೂ 1 ದಶಕವಿದೆ. ನೀವು ನಮಗಾಗಿ ಇರಬೇಕು, ನಮ್ಮನ್ನು ಆಶೀರ್ವದಿಸಬೇಕು, ನಮ್ಮನ್ನು ರಕ್ಷಿಸಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಮಾರ್ಗದರ್ಶನ ನೀಡುತ್ತಿರಬೇಕು ಎಂದು ಪೋಸ್ಟ್ ಹಾಕಿದ್ದರು.