Tiger Shroff: ಹೊಸ ಜಾಹೀರಾತು ಅಭಿಯಾನಕ್ಕೆ ಟೈಗರ್ ಶ್ರಾಫ್ ರಾಯಭಾರಿ
ನೋ ಕ್ಯಾಲರಿ ಪಾನೀಯವಾಗಿರುವ ಕೋಕಾ-ಕೋಲಾ ಝೀರೋ ಶುಗರ್ ಇದೀಗ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜೊತೆಗಿನ ಪಾಲುದಾರಿಕೆ ಮೂಲಕ ಎಲ್ಲಾ ಕಡೆಗಳಲ್ಲಿ ತಕ್ಷಣವೇ ದೊರೆ ಯಲಿದೆ. ಈ ಕುರಿತು ಕೋಕಾ ಕೋಲಾ ಎರಡು ಆಕರ್ಷಕ ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದು, ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ರಾಯಭಾರಿಯಾಗಿ ಮಿಂಚಿದ್ದಾರೆ


ಬೆಂಗಳೂರು: ನೋ ಕ್ಯಾಲರಿ ಪಾನೀಯವಾಗಿರುವ ಕೋಕಾ-ಕೋಲಾ ಝೀರೋ ಶುಗರ್ ಇದೀಗ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜೊತೆಗಿನ ಪಾಲುದಾರಿಕೆ ಮೂಲಕ ಎಲ್ಲಾ ಕಡೆಗಳಲ್ಲಿ ತಕ್ಷಣವೇ ದೊರೆ ಯಲಿದೆ. ಈ ಕುರಿತು ಕೋಕಾ ಕೋಲಾ ಎರಡು ಆಕರ್ಷಕ ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದು, ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ರಾಯಭಾರಿಯಾಗಿ ಮಿಂಚಿದ್ದಾರೆ. ಕೋಕಾ-ಕೋಲಾ ಝೀರೋ ಶುಗರ್ ಪಾನೀಯವು ಇದೀಗ ಕೇವಲ 10 ನಿಮಿಷಗಳಲ್ಲಿ ದೊರೆಯಲಿದೆ ಮತ್ತು ಗ್ರಾಹಕರು ಅದರ ರುಚಿ ಸವಿಯಬಹುದಾಗಿದೆ.
"ಜೀವನದಲ್ಲಿ ಅಡಚಣೆ ಉಂಟಾಗಬಹುದು, ಆದರೆ ರುಚಿಯಲ್ಲಿ ಅಡಚಣೆಯಿಲ್ಲ!" ಎಂಬುದು ಈ ಅಭಿಯಾನದ ಟ್ಯಾಗ್‌ಲೈನ್ ಆಗಿದ್ದು, ಎರಡು ಜಾಹೀರಾತುಗಳಲ್ಲಿಯೂ ಟೈಗರ್ ಶ್ರಾಫ್ ನಟಿಸಿ ದ್ದಾರೆ.
ಜಾಹೀರಾತು 1: ಒಂದು ಜಾಹೀರಾತಿನಲ್ಲಿ ಒಂದು ರಾತ್ರಿ ಭಯಾನಕ ಹಾರರ್ ಮೂವಿ ನೋಡು ವಾಗ ಖಾಲಿಯಾದ ಕೋಕ್ ಗ್ಲಾಸ್ ನ ಶಬ್ದ ಗಾಬರಿ ಬೀಳಿಸುತ್ತದೆ. ಟೈಗರ್ ಶ್ರಾಫ್ ತಕ್ಷಣ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಕೋಕ್ ಝೀರೋ ಆರ್ಡರ್ ಮಾಡುತ್ತಾರೆ ಮತ್ತು ತಂಪಾದ ಕೋಕ್ ಝೀರೋ ಅವರಿಗೆ ಆಹ್ಲಾದ ಒದಗಿಸುತ್ತದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
• ಜಾಹೀರಾತು 2: ಟೈಗರ್ ನ ರೊಮ್ಯಾಂಟಿಕ್ ಪ್ರೊಪೋಸಲ್ ಮಾಡಲು ಹೋಗುವಾಗ ಅವರ ಸಹೋದರ ಬಂದು ಅಡ್ಡಿ ಉಂಟು ಮಾಡುತ್ತಾರೆ. ಆಗ ಟೈಗರ್ ಶ್ರಾಫ್ ಅವರು ಕೋಕ್ ಝೀರೋ ಆರ್ಡರ್ ಮಾಡುತ್ತಾರೆ ಮತ್ತು ಕೆಲವೇ ನಿಮಿಷಗಳಲ್ಲಿ ಪಾನೀಯ ಅವರನ್ನು ತಲುಪಿ ಆ ಕ್ಷಣವನ್ನು ಆಹ್ಲಾದಕರಗೊಳಿಸುತ್ತದೆ. ಈ ಎರಡೂ ಜಾಹೀರಾತುಗಳನ್ನೂ ಸೊಗಸಾಗಿ ರೂಪುಗೊಳಿಸಲಾಗಿದ್ದು, ದೈನಂದಿನ ಜೀವನದ ಅಡಚಣೆಗಳನ್ನು ಹಾಸ್ಯಮಯವಾಗಿ ತೋರಿಸುತ್ತವೆ.
ಜೊತೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ತ್ವರಿತ ಡೆಲಿವರಿ ಸೌಲಭ್ಯದ ಮೂಲಕ ಕೋಕಾ-ಕೋಲಾ ಝೀರೋ ಶುಗರ್ ಅನ್ನು ಯಾವುದೇ ಕ್ಷಣದಲ್ಲಿ ಆಸ್ವಾದಿಸಬಹುದು ಎಂಬುದನ್ನು ತಿಳಿಸಿ ಕೊಡುತ್ತದೆ.
ಈ ಕುರಿತು ಮಾತನಾಡಿರುವ ಕೋಕಾ-ಕೋಲಾದ ಸೀನಿಯರ್ ಡೈರೆಕ್ಟರ್ ಕಾರ್ತಿಕ್ ಸುಬ್ರಮಣಿ ಯನ್ ಅವರು, "ಇಂದಿನ ಗ್ರಾಹಕರು ಕಡಿಮೆ ಅಥವಾ ಶೂನ್ಯ ಕ್ಯಾಲರಿ ಹೊಂದಿರುವ ಪಾನೀಯ ಗಳನ್ನು ಬಯಸುತ್ತಾರೆ. ಕೋಕಾ-ಕೋಲಾ ಝೀರೋ ಶುಗರ್ ಪಾನೀಯವು ಸಕ್ಕರೆ ಇಲ್ಲದೆಯೇ ಕೋಕಾ-ಕೋಲಾದ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜೊತೆಗಿನ ನಮ್ಮ ಸಹಯೋಗವು ಗ್ರಾಹಕರಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ಕೋಕ್ ಝೀರೋ ತಲುಪಿಸಲು ಅನುವು ಮಾಡಿಕೊಡುತ್ತದೆ. ರುಚಿ, ಅನುಕೂಲತೆ ಮತ್ತು ಆನಂದ ಹೊಂದುವ ಕುರಿತು ಈ ಜಾಹೀರಾತುಗಳನ್ನು ರೂಪಿಸಲಾಗಿದೆ" ಎಂದು ಹೇಳಿದರು.
ಕೋಕಾ-ಕೋಲಾ ಇಂಡಿಯಾದ ಚೀಫ್ ಕಸ್ಟಮರ್ ಆಫೀಸರ್ ಅಭಿಷೇಕ್ ಗುಪ್ತಾ ಅವರು, "ತ್ವರಿತ ಡೆಲಿವರಿ ಸೌಲಭ್ಯವು ಆಧುನಿಕ ಗ್ರಾಹಕರಿಗೆ ಅನುಕೂಲತೆ ಮತ್ತು ತಕ್ಷಣದ ಲಭ್ಯತೆಯನ್ನು ಒದಗಿಸುತ್ತದೆ. ಕೋಕ್ ಝೀರೋ ಉತ್ಪನ್ನದ ಸಲುವಾಗಿ ಸ್ವಿಗ್ಗಿ ಜೊತೆಗೆ ಸಹಯೋಗ ಮಾಡಿ ಕೊಳ್ಳುವ ಮೂಲಕ ನಾವು ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಡಯಟ್ ಆಂಡ್ ಲೈಟ್ ವಿಭಾಗವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ರುಚಿಯ ಜೊತೆಗೆ ತ್ವರಿತ ಡೆಲಿವರಿ ಸೌಲಭ್ಯ ಒದಗಿಸುತ್ತೇವೆ" ಎಂದು ಹೇಳಿದರು.
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನ ಎಸ್ ವಿ ಪಿ ಚೀಫ್ ಬಿಸಿನೆಸ್ ಆಫೀಸರ್ ಹರಿ ಕುಮಾರ್ ಗೋಪಿನಾಥ ಅವರು, "ಇನ್‌ಸ್ಟಾಮಾರ್ಟ್‌ನಲ್ಲಿ ಗ್ರಾಹಕರ ಬದಲಾಗುತ್ತಿರುವ ಆದ್ಯತೆಗಳಿಗೆ ತಕ್ಕಂತೆ ಹೊಸತನದ ಉತ್ಪನ್ನಗಳನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ. ಕೋಕ್ ಝೀರೋ ಶೂನ್ಯ ಸಕ್ಕರೆ ಹೊಂದಿದ್ದು, ಉತ್ತಮ ರುಚಿಯನ್ನು ನೀಡುತ್ತದೆ. ಇನ್‌ಸ್ಟಾಮಾರ್ಟ್ ಮೂಲಕ 10 ನಿಮಿಷದಲ್ಲಿಯೇ ಡೆಲಿವರಿ ಪಡೆಯಬಹುದಾಗಿದೆ. ಈ ಮೂಲಕ ಗ್ರಾಹಕರು ಕ್ಯಾಲರಿಗಳ ಚಿಂತೆಯಿಲ್ಲದೆ ತಮ್ಮ ಇಷ್ಟದ ಪಾನೀಯವನ್ನು ಆನಂದಿಸಬಹುದು" ಎಂದು ಹೇಳಿದರು.
ಜಾಹೀರಾತು ರೂಪಿಸಿರುವ ಟ್ಯಾಲೆಂಟೆಡ್ ನ ಕ್ರಿಯೇಟಿವ್ ಹೆಡ್ ಗಳಾಗದ ಸಂಕೇತ್ ಔಧಿ ಮತ್ತು ಜಾವಾದ್ ಅಹ್ಮದ್ ಅವರು, "ಕ್ವಿಕ್ ಕಾಮರ್ಸ್ ಕಾಲದಲ್ಲಿ ನಾವು ಆಲೋಚಿಸುವ ವೇಗದಲ್ಲಿಯೇ ವಸ್ತುಗಳನ್ನು ಆರ್ಡರ್ ಮಾಡಬಹುದಾದ ಸ್ಥಿತಿ ಇದೆ. ರಿಯಾನ್ ಮೆಂಡೋನ್ಸಾ ಅವರ ಹಾಸ್ಯ ಮಯ ನಿರ್ದೇಶನದಲ್ಲಿ ಈ ಎರಡೂ ಜಾಹೀರಾತುಗಳು ಉತ್ತಮವಾಗಿ ಮೂಡಿ ಬಂದಿದೆ" ಎಂದು ಹೇಳಿದರು.
ಈ ಜಾಹೀರಾತುಗಳು ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ವಾಗಲಿದೆ. ಈ ಮೂಲಕ ಅತಿ ಹೆಚ್ಚು ಮಂದಿಯನ್ನು ತಲುಪುವ ಗುರಿಯನ್ನು ಹೊಂದಿದೆ. ಕೋಕಾ-ಕೋಲಾ ಝೀರೋ ಶುಗರ್ ಪಾನೀಯದ ರುಚಿ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನ ತ್ವರಿತ ಡೆಲಿವರಿ ಸೌಲಭ್ಯ ಈ ಎರಡನ್ನೂ ಸಂಯೋಜಿಸುವ ಮೂಲಕ ಗ್ರಾಹಕರಿಗೆ ಸುಲಭವಾಗಿ ಆಹ್ಲಾದತೆ ಹೊಂದುವ ಸುಲಭ ಮಾರ್ಗ ಒದಗಿದೆ.