ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CRPF constable: ಪಾಕಿಸ್ತಾನಿ ಮಹಿಳೆಯೊಂದಿಗೆ ವಿವಾಹ- ಕಾನ್‌ಸ್ಟೇಬಲ್‌ ವಿರುದ್ಧ ಕ್ರಮಕ್ಕೆ ಮುಂದಾದ CRPF

ಪಾಕಿಸ್ತಾನಿ ಮಹಿಳೆಯನ್ನು (Pakistani Girl) ವಿವಾಹವಾದ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force) ಸಜ್ಜಾಗಿದೆ. 41ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿರುವ ಕಾನ್‌ಸ್ಟೆಬಲ್ ಮುನೀರ್ ಅಹ್ಮದ್ ಎಂಬವರು ಮೆನಾಲ್ ಖಾನ್ ಎಂಬ ಪಾಕಿಸ್ತಾನಿ ಮಹಿಳೆಯನ್ನು 2024ರ ಮೇ 24ರಂದು ವಾಟ್ಸಾಪ್ ವೀಡಿಯೊ ಕರೆಯ ಮೂಲಕ ವಿವಾಹವಾಗಿದ್ದರು.

ಪಾಕಿಸ್ತಾನಿ ಮಹಿಳೆಯೊಂದಿಗೆ ವಿವಾಹವಾದ ಕಾನ್‌ಸ್ಟೇಬಲ್‌ ವಿರುದ್ಧ ಕ್ರಮ

ನವದೆಹಲಿ: ಪಾಕಿಸ್ತಾನಿ ಮಹಿಳೆಯನ್ನು (Pakistani Girl) ವಿವಾಹವಾದ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force) ಸಜ್ಜಾಗಿದೆ. 41ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿರುವ ಕಾನ್‌ಸ್ಟೆಬಲ್ ಮುನೀರ್ ಅಹ್ಮದ್ ಎಂಬವರು ಮೆನಾಲ್ ಖಾನ್ ಎಂಬ ಪಾಕಿಸ್ತಾನಿ ಮಹಿಳೆಯನ್ನು 2024ರ ಮೇ 24ರಂದು ವಾಟ್ಸಾಪ್ ವೀಡಿಯೊ ಕರೆಯ ಮೂಲಕ ವಿವಾಹವಾಗಿದ್ದರು. ಇದು ರಾಷ್ಟ್ರೀಯ ಭದ್ರತೆಯ (national security) ಬಗ್ಗೆ ಆತಂಕ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಮುನೀರ್ ವಿರುದ್ಧ ಕ್ರಮಕ್ಕೆ ಸಿಆರ್ ಪಿಎಫ್ ಮುಂದಾಗಿದೆ.

ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾದ ಕಾನ್‌ಸ್ಟೆಬಲ್ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲು ಯಾವುದೇ ಆದೇಶ ಇಲ್ಲವಾದರೂ ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಮುನೀರ್ ಅವರು ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆ ಅನುಮೋದನೆ ನೀಡುವ ಮೊದಲೇ ವಿವಾಹ ನೆರವೇರಿಸಲಾಗಿದೆ. ಇದು ಅನಧಿಕೃತವಾಗಿರುವುದರಿಂದ ಆತನ ವಿರುದ್ಧ ಶಿಸ್ತು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸಿಆರ್ ಪಿಎಫ್ ತಿಳಿಸಿದೆ.

ಇದು ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಸಂಬಂಧಪಟ್ಟ ವಿಷಯವಾಗಿತ್ತು. ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಈ ಮದುವೆಗೆ ಅನುಮತಿ ನೀಡಲಾಗುವುದಿಲ್ಲ. ಮುನೀರ್ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಭದ್ರತೆ ವಿಚಾರದ ಪರಿಗಣನೆ ಮಾಡಬೇಕಿತ್ತು. ಈ ಕುರಿತು ನಿರ್ಣಯ ಕೈಗೊಳ್ಳಬೇಕೆಂಬ ಪ್ರಸ್ತಾವನೆಯನ್ನು ಜಮ್ಮು ಮತ್ತು ಕಾಶ್ಮೀರ ವಲಯದ ಪ್ರಧಾನ ಕಚೇರಿಗೆ ಮರು ಸಲ್ಲಿಸಲಾಗಿದೆ. ಆದರೆ ಕಚೇರಿಯು ಎನ್ ಒಸಿ ನೀಡಲಾಗುವುದಿಲ್ಲ ಎಂದು ತಿಳಿಸಿದೆ.

ಕಾನ್‌ಸ್ಟೆಬಲ್‌ನ ನಡವಳಿಕೆಯಲ್ಲಿ ಹಲವಾರು ಲೋಪಗಳು ಕಂಡುಬಂದಿವೆ. ಅವುಗಳಲ್ಲಿ ಪತ್ನಿ ತನ್ನ ವೀಸಾ ಮಾನ್ಯತೆಯನ್ನು ಮೀರಿ ಭಾರತದಲ್ಲಿ ವಾಸವಾಗಿರುವ ಬಗ್ಗೆ ಇಲಾಖೆಗೆ ಅವರು ತಿಳಿಸಿಲ್ಲ. ಅಲ್ಲದೇ ನ್ಯಾಯಾಲಯದ ವಿಚಾರಣೆಯಲ್ಲಿ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವ ಆರೋಪವೂ ಇದೆ. ಸಿಆರ್ ಪಿಎಫ್ ನಿಂದ ಅನುಮತಿ ಸಿಗುವ ಮೊದಲೇ ಕಾನ್‌ಸ್ಟೆಬಲ್ ಮುನೀರ್ ಅಹ್ಮದ್ ಪಾಕಿಸ್ತಾನಿ ಹುಡುಗಿಯೊಂದಿಗೆ ವಿವಾಹವಾಗಿದ್ದಾರೆ. ಅಲ್ಲದೆ ಇವರ ವಿವಾಹವನ್ನು ವಾಟ್ಸಾಪ್ ಕರೆಯ ಮೂಲಕ ನಡೆಸಲಾಗಿದೆ. ಆದರೆ ಈ ಕಾರ್ಯವಿಧಾನ ಕಾನೂನು ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಇದನ್ನೂ ಓದಿ: Hajj Update 2025: ಹಜ್ ನಿಯಮ ಉಲ್ಲಂಘಿಸಿದರೆ 4.5 ಲಕ್ಷ ರೂ. ದಂಡ: ಸೌದಿ ಅರೇಬಿಯಾ ಎಚ್ಚರಿಕೆ

ಮುನೀರ್ ಅಹ್ಮದ್ ಅವರ ಪತ್ನಿ ಮೆನಾಲ್ ಖಾನ್ ಪಾಕಿಸ್ತಾನದ ಪಾಸ್‌ಪೋರ್ಟ್ ಮೂಲಕ ಭಾರತದ ವಾಘಾ ಗಡಿಯಿಂದ 2025ರ ಮಾರ್ಚ್ 22ರಂದು ಪ್ರವಾಸಿ ವೀಸಾ ಪಡೆದು ಬಂದಿದ್ದು, ವೀಸಾ ಅವಧಿ ಮುಗಿದ ಅನಂತರವೂ ಅವರು ಇಲ್ಲೇ ವಾಸವಾಗಿದ್ದಾರೆ. ಅಲ್ಲದೆ ಅವರ ಪತ್ನಿ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಮುನೀರ್ ಇಲಾಖೆಗೆ ತಿಳಿಸಿಲ್ಲ. ಹೀಗಾಗಿ ಮುನೀರ್ ವಿರುದ್ಧ 1964 ರ ಸಿಸಿಎಸ್ (ನಡವಳಿಕೆ) ನಿಯಮಗಳ ನಿಯಮ 21(3) ರ ಅಡಿಯಲ್ಲಿ ಸಿಆರ್‌ಪಿಎಫ್ ಕ್ರಮಕ್ಕೆ ಮುಂದಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಬಳಿಕ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗಡೀಪಾರು ಮಾಡಲು ಕೇಂದ್ರ ಸರ್ಕಾರ ಆದೇಶಿಸಿದ ಬಳಿಕ ಮೇನಾಲ್ ಖಾನ್ ಅವರನ್ನು ಗಡೀಪಾರು ಮಾಡಲು ವಾಘಾ ಗಡಿಗೆ ಕರೆದುಕೊಂಡು ಬರಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಏಪ್ರಿಲ್ 29ರಂದು ಅವರ ಗಡಿಪಾರಿಗೆ 10 ದಿನಗಳ ತಡೆಯಾಜ್ಞೆ ನೀಡಿದೆ.