Anu Agarwal: ಸೌಂದರ್ಯ ವೃದ್ಧಿಗೆ ತನ್ನ ಮೂತ್ರವನ್ನು ತಾನೇ ಕುಡಿದ ಬಾಲಿವುಡ್ ನಟಿ !
ಬಾಲಿವುಡ್ ನಟಿ ಅನು ಅರ್ಗವಾಲ್ ಅವರು ತನ್ನ ಮೂತ್ರವನ್ನು ತಾನೇ ಕುಡಿಯುವುದಾಗಿ ಹೇಳಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮೂತ್ರವನ್ನು ಕುಡಿದರೆ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಹಿರಿಯ ನಟ ಪರೇಶ್ ರಾವಲ್ ತಮ್ಮ ನಟನಾ ವೃತ್ತಿಜೀವನದ ಆರಂಭದಲ್ಲಿ ಮೊಣಕಾಲಿನ ಗಾಯವನ್ನು ಗುಣಪಡಿಸಲು ತಮ್ಮ ಮೂತ್ರವನ್ನು ತಾವೇ ಕುಡಿಯುವುದಾಗಿ ಹೇಳಿಕೊಂಡ ಬಳಿಕ ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಆ ನಟಿಯ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ತನ್ನ ಮೂತ್ರವನ್ನು ತಾನೇ ಕುಡಿಯುವುದಾಗಿ ಹೇಳಿಕೊಂಡಿದ್ದಾಳೆ.

ಇಂತಹ ವಿಚಿತ್ರ ಹೇಳಿಕೆಗಳನ್ನು ನೀಡಿರುವವರು ಬೇರೆ ಯಾರೋ ಅಲ್ಲ. ಬಾಲಿವುಡ್ ನಟಿ ಅನು ಅಗರ್ವಾಲ್. ಮೂತ್ರ ಸೇವನೆ ಕುರಿತು ಮಾತನಾಡಿದ ಅವರು ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ ಅಥವಾ ಅವರು ಅಜ್ಞಾನಿಗಳಾಗಿದ್ದಾರೆ. ಮೂತ್ರ ಕುಡಿಯುವುದನ್ನು ಅಮರೋಲಿ ಕ್ರಿಯಾ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ನಾನು ಕೂಡ ಮಾಡಿದ ಅಭ್ಯಾಸ ಇದು. ಇದು ಬಹಳ ಮುಖ್ಯ. ಆದರೆ ಸಂಪೂರ್ಣ ಮೂತ್ರವನ್ನು ಸೇವಿಸುವುದಿಲ್ಲ, ಅದರ ಒಂದು ಭಾಗ ಮಾತ್ರ ಸೇವಿಸಲಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಆ ಭಾಗವನ್ನು 'ಅಮೃತ' ಎಂದು ಕರೆಯಲಾಗುತ್ತದೆ. ಇದು ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಮುಖದಲ್ಲಿ ಯಾವುದೇ ಸುಕ್ಕುಗಳಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಒಂದು ಪದ್ಧತಿಗೆ ವೈಜ್ಞಾನಿಕವಾಗಿ ಬೆಂಬಲ ಸಿಗದೆ ಇರುವ ಬಗ್ಗೆ ಪ್ರಶ್ನಿಸಿದಾಗ, ಇದಕ್ಕೆ ಸ್ಪಷ್ಟನೆ ನೀಡಿದ ನಟಿ ಮಾಡರ್ನ್ ಸೈನ್ಸ್ ಹೊಸದು ನಿಜ. ಆದರೆ ವಿಜ್ಞಾನ ಎಷ್ಟು ಹಳೆಯದು? 200 ವರ್ಷಗಳು. ಆದರೆ ಇದು 10 ಸಾವಿರ ವರ್ಷಗಳಷ್ಟು ಹಳೆಯದು. ನಾನು ಇದನ್ನು ಖಂಡಿತವಾಗಿಯೂ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಅನು ಅಗರ್ವಾಲ್ ಅವರು ದೆಹಲಿಯಲ್ಲಿ ಜನಿಸಿದ್ದಾರೆ. ಆಶಿಕಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅವರು ಹಿಂದೆ ಮಾಡೆಲಿಂಗ್ನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಸ್ತುತ ಅವರು ಆಧ್ಯಾತ್ಮದ ಕುರಿತು ಹೆಚ್ಚಿನ ಒಲವನ್ನು ಹೊಂದಿದ್ದು, ಒಂಟಿ ಜೀವನ ನಡೆಸುತ್ತಿದ್ದಾರೆ.

1990 ರಲ್ಲಿ ನಿರ್ದೇಶಕ ಮಹೇಶ್ ಭಟ್ ನಿರ್ದೇಶನದಲ್ಲಿ ಆಶಕಿ ಚಿತ್ರ ಮೂಡಿ ಬಂದಿತ್ತು. . ಚಿತ್ರದಲ್ಲಿ ನಟಿಸಿದ ಹೀರೋ ರಾಹುಲ್ ರಾಯ್ ಮತ್ತು ಹೀರೋಯಿನ್ ಅನು ಅಗರ್ವಾಲ್ ಎರಡು ಹೊಸ ಮುಖವಾಗಿತ್ತು. ದೀಪಕ್ ತಿಜೋರಿ, ರೀಮಾ ಲಾಗೂ, ಟಾಮ್ ಆಲ್ಟರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಅನು ಅಗರ್ವಾಲ್ ವೃತ್ತಿಜೀವನಕ್ಕೆ ಈ ಸಿನಿಮಾ ಪ್ಲಸ್ ಆಯ್ತು. ಅವರು ಕಿಂಗ್ ಅಂಕಲ್, ಖಲ್-ನಾಯಕಾ, ಮತ್ತು ದಿ ರಿಟರ್ನ್ ಆಫ್ ಜ್ಯುವೆಲ್ ಥೀಫ್ನಂತಹ ದೊಡ್ಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಅನು 1996 ರ ಹೊತ್ತಿಗೆ ಚಿತ್ರರಂಗವನ್ನು ತೆರೆದಿದ್ದರು. 997ರಲ್ಲಿ, ಅನು ಯೋಗ ಶಾಲೆಗೆ ಸೇರಿಕೊಂಡರು ಮತ್ತು ಎರಡು ವರ್ಷಗಳ ಕಾಲ ಯೋಗಿನಿಯಾಗಿದ್ದರು. 1999ರಲ್ಲಿ, ಅವರು ಶಾಶ್ವತವಾಗಿ ಮುಂಬೈಗೆ ಮರಳಿದರು. ಆದರೆ ಅಲ್ಲಿಗೆ ಹೋದ ನಂತರ ಗಂಭೀರ ಅಪಘಾತದಿಂದಾಗಿ 29 ದಿನಗಳವರೆಗೆ ಕೋಮಾಗೆ ಹೋಗಿದ್ದರು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ.