ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ಕ್ರಿಕೆಟ್‌ನಿಂದ ತೃತೀಯ ಲಿಂಗಿ ಆಟಗಾರ್ತಿಯರಿಗೆ ನಿಷೇಧ ಹೇರಿದ ಇಸಿಬಿ

ತಕ್ಷಣದಿಂದಲೇ ಜಾರಿಗೆ ಬರುವಂತೆ, ಪುರುಷ ಲಕ್ಷಣ ಹೊಂದಿರುವ ವ್ಯಕ್ತಿಗಳು ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಮಹಿಳೆಯರು ಮಾತ್ರ ಮಹಿಳಾ ಕ್ರಿಕೆಟ್ ಮತ್ತು ಬಾಲಕಿಯರ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಅರ್ಹರಾಗಿರುತ್ತಾರೆ' ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಹಿಳಾ ಕ್ರಿಕೆಟ್‌ನಿಂದ ತೃತೀಯ ಲಿಂಗಿ ಆಟಗಾರ್ತಿಯರಿಗೆ ನಿಷೇಧ ಹೇರಿದ ಇಸಿಬಿ

Profile Abhilash BC May 2, 2025 8:01 PM

ಲಂಡನ್‌: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಹಿಳೆಯರ ಮತ್ತು ಬಾಲಕಿಯರ ಕ್ರಿಕೆಟ್‌ ಪಂದ್ಯಗಳಲ್ಲಿ ತೃತೀಯ ಲಿಂಗಿಗಳು(Transgender Players) ಪಾಲ್ಗೊಳ್ಳುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಅನುಸರಿಸಿ, ಅವರನ್ನು ಮಹಿಳೆಯರ ಕಾನೂನು ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಫುಟ್‌ಬಾಲ್ ಅಸೋಸಿಯೇಷನ್ ​​(FA) ಇದೇ ರೀತಿಯ ನಿರ್ಣಯವನ್ನು ತೆಗೆದುಕೊಂಡ 24 ಗಂಟೆಗಳ ಒಳಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಪ್ರಕಟಿಸಿದೆ.

'ಕ್ರೀಡೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಉದ್ದೇಶವಿದ್ದರೂ, ಸುಪ್ರೀಂ ಕೋರ್ಟ್‌ನ ತೀರ್ಪುನ ನಂತರ ತೃತೀಯ ಲಿಂಗಿ ಆಟಗಾರರ ಅರ್ಹತೆಯ ಕುರಿತು ತನ್ನ ನಿಯಮಗಳಲ್ಲಿ ಬದಲಾವಣೆಯನ್ನು ಘೋಷಿಸುತ್ತಿರುವುದಾಗಿ' ಇಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

"ತಕ್ಷಣದಿಂದಲೇ ಜಾರಿಗೆ ಬರುವಂತೆ, ಪುರುಷ ಲಕ್ಷಣ ಹೊಂದಿರುವ ವ್ಯಕ್ತಿಗಳು
ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಮಹಿಳೆಯರು ಮಾತ್ರ ಮಹಿಳಾ ಕ್ರಿಕೆಟ್ ಮತ್ತು ಬಾಲಕಿಯರ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಅರ್ಹರಾಗಿರುತ್ತಾರೆ' ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್ 1 ರಿಂದ ಇಂಗ್ಲೆಂಡ್‌ನಲ್ಲಿ ಮಹಿಳಾ ಫುಟ್‌ಬಾಲ್‌ನಲ್ಲಿ ಟ್ರಾನ್ಸ್‌ಜೆಂಡರ್ ಮಹಿಳೆಯರು ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಇಂಗ್ಲಿಷ್ ಫುಟ್‌ಬಾಲ್ ಅಸೋಸಿಯೇಷನ್ ​​(ಎಫ್‌ಎ) ಗುರುವಾರ ಘೋಷಿಸಿತ್ತು.

ಇದನ್ನೂ ಓದಿ IPL 2025: ರಾಜಸ್ಥಾನ್‌ ವಿರುದ್ದ 48 ರನ್‌ ಗಳಿಸಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ಐಸಿಸಿ ಈಗಾಗಲೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದೆ. ಒಂದು ವೇಳೆ ಸಂಬಂಧಪಟ್ಟ ವ್ಯಕ್ತಿಗಳು ಲಿಂಗ ಪರಿವರ್ತನೆ, ಲಿಂಗ ಮರುಜೋಡಣೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿರಲಿ, ಮಾಡಿಸಿಕೊಳ್ಳದೇ ಇರಲಿ, ಅವು ಯಾವುವನ್ನೂ ಪರಿಗಣಿಸದೇ ಅಂತಹ ಕ್ರಿಕೆಟಿಗರನ್ನು ಮಹಿಳಾ ಕ್ರಿಕೆಟ್‌ನಿಂದ ನಿಷೇಧಿಸಲಾಗುತ್ತದೆ. ಮಹಿಳಾ ಕ್ರಿಕೆಟಿಗರ ಸಮಗ್ರತೆಯನ್ನು ಕಾಪಾಡಲು, ಆಟಗಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಂಡಿತ್ತು. ಆದರೆ ದೇಶಿ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಆಯಾ ಮಂಡಳಿಗಳಿಗೆ ಬಿಡಲಾಗಿತ್ತು.