MI vs RR: ರೋಹಿತ್ ಶರ್ಮಾ ಕೈ ಹಿಡಿದ ಡಿಆರ್‌ಎಸ್, ಕೊನೆಯ ಸೆಕೆಂಡ್‌ನಲ್ಲಿ ನಿರ್ಧಾರ!
ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಅಂಪೈರಿಂಗ್ ಬಗ್ಗೆ ಗದ್ದಲ ಉಂಟಾಯಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ಆನ್-ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯು ಔಟ್ ಕೊಟ್ಟಿದ್ದರು. ಡಿಆರ್‌ಎಸ್ ಸಮಯ ಮುಗಿದ ನಂತರ ಅವರು ರಿವ್ಯೂ ತೆಗೆದುಕೊಂಡರು. ಅದರಂತೆ ಅವರು ಬಚಾವ್ ಆದರು.

ರೋಹಿತ್ ಶರ್ಮಾರ ಡಿಆರ್‌ಎಸ್ ವಿವಾದ

ಜೈಪುರ: ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ (MI vs RR) ರೋಹಿತ್ ಶರ್ಮಾ (Rohit Sharma) ಡಿಆರ್‌ಎಸ್ ತೆಗೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಪಂದ್ಯದ ವೇಳೆ ಅಂಪೈರ್ ರೋಹಿತ್ ಶರ್ಮಾಗೆ ಎಲ್‌ಬಿಡಬ್ಲ್ಯು ಔಟ್ ಕೊಟ್ಟಿದ್ದರು. ಈ ವೇಳೆ ಹಿಟ್‌ಮ್ಯಾನ್ ಡಿಆರ್‌ಎಸ್ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ, ಇಲ್ಲಿ 15 ಸೆಕೆಂಡ್ ನಂತರ ರೋಹಿತ್ ಡಿಆರ್‌ಎಸ್ ತೆಗೆದುಕೊಂಡರು ಎಂದು ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಂದ ಹಾಗೆ ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ 100 ರನ್‌ಗಳಿಂದ ಗೆದ್ದು ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಗಿದೆ.
ಗುರುವಾರ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನೆಡದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್ ಪರ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ, ಎರಡನೇ ಓವರ್‌ನಲ್ಲಿ ಫಝಲಕ್ ಫಾರೂಕಿ ಅವರ ಎಸೆತದಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡಿದ್ದರು. ಈ ವೇಳೆ ಆನ್‌ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯು ಔಟ್ ನೀಡಿದರು. ಈ ವೇಳೆ ಗೊಂದಲದಲ್ಲಿದ್ದ ರೋಹಿತ್ ಶರ್ಮಾ ಅಂತಿಮ ಸೆಕೆಂಡ್‌ನಲ್ಲಿ ಡಿಆರ್‌ಎಸ್ ಮೊರೆ ಹೋದರು. ಬಾಲ್ ಟ್ರ್ಯಾಕಿಂಗ್‌ನಲ್ಲಿ ಚೆಂಡು ಲೆಗ್ ಸ್ಟಂಪ್‌ನಿಂದ ಹೊರಗಡೆ ಇತ್ತು. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಬಚಾವ್ ಆಗಿದ್ದರು.
IPL 2025: ಆರ್‌ಸಿಬಿ, ಮುಂಬೈಗೆ ಒಂದೇ ಹೆಜ್ಜೆ ಬಾಕಿ-8 ತಂಡಗಳ ಐಪಿಎಲ್ ಪ್ಲೇಆಫ್ಸ್ ಲೆಕ್ಕಾಚಾರ!
ನಂತರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ರೋಹಿತ್ ಶರ್ಮಾ 36 ಎಸೆತಗಳಲ್ಲಿ 53 ರನ್‌ಗಳನ್ನು ದಾಖಲಿಸಿದರು. ಅಲ್ಲದೆ, ಆರಂಭಿಕ ಜೊತೆಗಾರ ರಯಾನ್ ರಿಕೆಲ್ಟನ್ (61 ರನ್) ಅವರ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿದರು. ಅಲ್ಲದೆ ಈ ಅರ್ಧಶತಕದ ಮೂಲಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ 6000 ರನ್‌ಗಳನ್ನು ಪೂರ್ಣಗೊಳಿಸಿದರು.
ಏನಿದು ವಿವಾದ?
ಈ ಸನ್ನಿವೇಶದಲ್ಲಿ ರೋಹಿತ್ ಶರ್ಮಾ ಡಿಆರ್‌ಎಸ್ ತೆಗೆದುಕೊಳ್ಳುವುದಿಲ್ಲ ಎಂದು ತೋರುತ್ತಿತ್ತು. ಆದರೆ, ಟೈಮರ್ ಶೂನ್ಯ ತಲುಪಿದ ತಕ್ಷಣ, ಅವರು ಡಿಆರ್‌ಎಸ್‌ಗೆ ಸಿಗ್ನಲ್ ಮಾಡಿದರು. ಸಮಯ ಮುಗಿದ ನಂತರ ಅವರು ಡಿಆರ್‌ಎಸ್ ತೆಗೆದುಕೊಂಡರು ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ನಂತರ ಮೂರನೇ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ನೋಡಿದರು. ಆದ್ದರಿಂದ ಅಂಪೈರ್ ನಿರ್ಧಾರ ಬದಲಾಯಿತು. ಔಟ್ ಎಂದು ನಂಬಿದ್ದ ರೋಹಿತ್ ಶರ್ಮಾಗೆ ಸಮಾಧಾನವಾಯಿತು ಮತ್ತು ಒಂದು ಮುಗುಳ್ನಗೆ ಬೀರಿದರು.
Is Vinod Seshan travelling with MI team ??? He allowed Rohit to take review when timer was over.
— Fearless🦁 (@ViratTheLegend) May 1, 2025
It’s not coincidence any more. He has been involved as on field or third umpire in 7 out off 11 MI matches so far. pic.twitter.com/54QwPMsM5z
15 ಸೆಕೆಂಡುಗಳ ನಂತರ ತೆಗೆದುಕೊಂಡ ಡಿಆರ್‌ಎಸ್
ಆದರೆ, ಕಥೆ ಇಲ್ಲಿಗೆ ಮುಗಿಯಲಿಲ್ಲ. 15 ಸೆಕೆಂಡುಗಳ ನಂತರ ರೋಹಿತ್ ಶರ್ಮಾ ಡಿಆರ್‌ಎಸ್‌ಗಾಗಿ ಸಿಗ್ನಲ್ ಮಾಡಿದ್ದಾರೆ ಎಂದು ಹಲವರು ಆರೋಪ ಮಾಡಿದ್ದಾರೆ. ಡಿಆರ್‌ಎಸ್ ನಿಯಮದ ಪ್ರಕಾರ, ಅಂಪೈರ್ ತೀರ್ಪು ನೀಡಿದ 15 ಸೆಕೆಂಡುಗಳ ಒಳಗೆ ಡಿಆರ್‌ಎಸ್ ತೆಗೆದುಕೊಳ್ಳಬೇಕು. ಅಂಪೈರ್ ನಿರ್ಧಾರ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾಗೆ ಅವಕಾಶ ಸಿಕ್ಕಿತು ಮತ್ತು ಅವರು ಅದರ ಸಂಪೂರ್ಣ ಲಾಭವನ್ನು ಪಡೆದು ಅರ್ಧಶತಕವನ್ನು ಬಾರಿಸಿದರು.
IPL 2025: ಮುಂಬೈ ಇಂಡಿಯನ್ಸ್ ಪರ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ!
ಅದ್ಭುತ ಲಯದಲ್ಲಿರುವ ಹಿಟ್‌ಮ್ಯಾನ್
ಕಳೆದ ನಾಲ್ಕು ಪಂದ್ಯಗಳಲ್ಲಿ ಇದು ರೋಹಿತ್ ಅವರ ಮೂರನೇ ಅರ್ಧಶತಕವಾಗಿದೆ. ಈ ಋತುವಿನ ಆರಂಭದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈಗ ಅವರು ಉತ್ತಮ ಫಾರ್ಮ್‌ಗೆ ಮರಳಿದ್ದಾರೆ. ರೋಹಿತ್ ಶರ್ಮಾ ಇತ್ತೀಚೆಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 45 ಎಸೆತಗಳಲ್ಲಿ 76 ರನ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 46 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು. ಆದಾಗ್ಯೂ, ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಅವರು 5 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಆದರೆ, ಅವರು ಜೈಪುರದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.