MI vs SRH: ʻಪಿಚ್ ಸರಿಯಿಲ್ಲʼ ಮುಂಬೈ ಎದುರು ಸೋಲಿಗೆ ನೈಜ ಕಾರಣ ತಿಳಿಸಿದ ಪ್ಯಾಟ್ ಕಮಿನ್ಸ್!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 4 ವಿಕೆಟ್ ಗೆಲುವು ಪಡೆಯಿತು. ವಿಲ್ ಜ್ಯಾಕ್ಸ್ ಅದ್ಭುತ ಪ್ರದರ್ಶನ ನೀಡಿ 2 ವಿಕೆಟ್ ಹಾಗೂ 36 ರನ್‌ಗಳನ್ನು ಗಳಿಸಿದರು. ಪಂದ್ಯದ ಬಳಿಕ ಮಾತನಾಡಿದ ಎಸ್‌ಆರ್‌ಎಸ್ ನಾಯಕ ಪ್ಯಾಟ್ ಕಮಿನ್ಸ್, ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ತಂಡಕ್ಕೆ ಕೆಲವು ರನ್‌ಗಳು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆ.

ಮುಂಬೈ: ಬ್ಯಾಟಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿರುದ್ದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderbad) ತಂಡ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯಲ್ಲಿ ಎಸ್‌ಆರ್‌ಎಸ್ ಐದನೇ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ಪ್ಯಾಟ್ ಕಮಿನ್ಸ್(Pat Cummins),ಮುಂಬೈನ ವಾಂಖೆಡೆ ವಿಕೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಿಚ್ ತುಂಬಾ ಕಠಿಣವಾಗಿತ್ತು ಹಾಗಾಗಿ ಬ್ಯಾಟಿಂಗ್ ತುಂಬಾ ಕಷ್ಟವಾಗಿತ್ತು. ನಮಗೆ ಕೆಲ ರನ್‌ಗಳು ಕಡಿಮೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ವಿಲ್ ಜ್ಯಾಕ್ಸ್ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಕಿತ್ತರೆ, ಬ್ಯಾಟಿಂಗ್‌ನಲ್ಲಿ 36 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದ್ದರು, ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೆರವಾದರು. 2 ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ, ಅವರು 26 ಎಸೆತಗಳಲ್ಲಿ 36 ರನ್‌ಗಳ ಮಹತ್ವದ ಇನಿಂಗ್ಸ್ ಅನ್ನು ಸಹ ಆಡಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪ್ಯಾಟ್ ಕಮಿನ್ಸ್ ಸಾರಥ್ಯದ ಸನ್‌ರೈಸರ್ಸ್ ಹೈದರಾಬಾದ್, 5 ವಿಕೆಟ್‌ಗೆ 162 ರನ್ ಗಳಿಸಿತು. ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.
MI vs SRH: ವಾಂಖೆಡೆಯಲ್ಲಿ ಸನ್‌ರೈಸರ್ಸ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್!
ಪಂದ್ಯದ ಸೋಲಿನ ಬಳಿಕ ಮಾತನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, "ಇಲ್ಲಿನ ವಿಕೆಟ್ ಸುಲಭವಾಗಿರಲಿಲ್ಲ. ನಮಗೆ ಕೆಲ ರನ್‌ಗಳ ಕೊರತೆ ಇತ್ತು, ಬ್ಯಾಟ್‌ನಿಂದ ಇನ್ನೂ ಕೆಲವು ರನ್‌ಗಳನ್ನು ಗಳಿಸಲು ನಾವು ಬಯಸಿದ್ದೆವು. ನೀವು ಇಲ್ಲಿಗೆ ಬಂದಾಗ ಎಲ್ಲವೂ ಸುಗಮ ಮತ್ತು ವೇಗವಾಗಿರುತ್ತದೆ ಎಂದು ನೀವು ನಿರೀಕ್ಷಿಸುತ್ತೀರಿ. ಆದರೆ ಇಂದು(ಏಪ್ರಿಲ್ 17) ಆ ರೀತಿ ಪಿಚ್ ಇರಲಿಲ್ಲ. ಮುಂಬೈ ಇಂಡಿಯನ್ಸ್ ಬೌಲರ್‌ಗಳು ಚೆನ್ನಾಗಿ ಬೌಲ್ ಮಾಡಿದ್ದರು. ನಾವು ಚೆಂಡನ್ನು ಹೊಡೆಯುವ ಏರಿಯಾಗಳಲ್ಲಿ ನಮ್ಮನ್ನು ತಡೆದರು. ನಮ್ಮ ಪಾಲಿಗೆ ಎಲ್ಲಾ ಅಂಶಗಳನ್ನು ಹೊಂದಿದ್ದೇವೆಂದು ನಾವು ಭಾವಿಸಿದ್ದೆವು. ಆದರೆ, 160 ರೊಂದಿಗೆ ನೀವು ಸ್ವಲ್ಪ ಕಡಿಮೆ ರನ್ ಗಳಿಸಿದ್ದೀರಿ ಎಂದು ನಿಮಗೆ ಅನಿಸುತ್ತದೆ,"ಎಂದು ಹೇಳಿದ್ದಾರೆ.
Applying the finishing touches 🤌
— IndianPremierLeague (@IPL) April 17, 2025
🎥 #MI skipper Hardik Pandya gave them the final flourish with a brilliant cameo of 21(9)
Scorecard ▶ https://t.co/8baZ67Y5A2#TATAIPL | #MIvSRH | @mipaltan | @hardikpandya7 pic.twitter.com/hPI3CxwzLF
ಸನ್‌ರೈಸರ್ಸ್ ಹೈದರಾಬಾದ್ ತಂಡ, ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು," ಫೈನಲ್‌ಗೆ ತಲುಪಲು ನೀವು ಮನೆಯಿಂದ ಹೊರಗೆ ಚೆನ್ನಾಗಿ ಆಡಬೇಕು, ಈ ಋತುವಿನಲ್ಲಿ ಇದುವರೆಗೆ ಸಂಭವಿಸದಿರುವುದು ದುರದೃಷ್ಟಕರ ಸಂಗತಿ. ನಮಗೆ ಸ್ವಲ್ಪ ವಿರಾಮ ಸಿಕ್ಕಿದೆ ಮತ್ತು ನಾವು ಮತ್ತೆ ಪ್ರಾರಂಭಿಸಬೇಕು. ನಾವು ಪ್ರತಿಯೊಂದು ಪಂದ್ಯವನ್ನು ನಿರ್ಣಯಿಸುವ ಬಗ್ಗೆ ಮಾತನಾಡುತ್ತೇವೆ, ಹುಡುಗರು ಪವರ್‌ಪ್ಲೇನಲ್ಲಿ ಉತ್ತಮವಾಗಿ ಆಡಿದರು ಮತ್ತು ಅಜಾಗರೂಕತೆಯಿಂದ ಹೊಡೆಯಲಿಲ್ಲ. ಮುಂದಿನ ಪಂದ್ಯ ಮನೆಯಂಗಣದಲ್ಲಿ ನಡೆಯಲಿದ್ದು, ಆ ಸ್ಥಳ ನಮಗೆ ಚೆನ್ನಾಗಿ ತಿಳಿದಿದೆ," ಎಂದು ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ.