ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್‌, ಕೊಹ್ಲಿಯಿಂದ ಸಾಧ್ಯವಾಗದ ದೊಡ್ಡ ದಾಖಲೆಯನ್ನು ಬರೆದ ಸೂರ್ಯಕುಮಾರ್‌ ಯಾದವ್‌!

Suryakumar Yadav T20 Record: ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಅವರು ಟಿ20 ಕ್ರಿಕೆಟ್‌ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು 25+ರನ್‌ ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಸೂರ್ಯ 15 ಬಾರಿ 25+ ರನ್‌ಗಳನ್ನು ಕಲೆ ಹಾಕಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಸೂರ್ಯಕುಮಾರ್‌!

ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌.

Profile Ramesh Kote May 31, 2025 4:09 PM

ನವದೆಹಲಿ: ಗುಜರಾತ್‌ ಟೈಟನ್ಸ್‌ (GT) ವಿರುದ್ಧ ಶುಕ್ರವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 20 ರನ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆಯನ್ನು ಪಡೆದಿದೆ. ಭಾನುವಾರ ನಡೆಯುವ ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಕಾದಾಟ ನಡೆಸಲಿದೆ. ಅಂದಹಾಗೆ ಮುಂಬೈ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಸೂರ್ಯಕುಮಾರ್‌ ಯಾದವ್‌ (Suryakumar Yadav) 33 ರನ್‌ಗಳನ್ನು ಕಲೆ ಹಾಕಿದ್ದರು. ಈ ಇನಿಂಗ್ಸ್‌ನ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರು ಟಿ20 ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ 50 ಎಸೆತಗಳಲ್ಲಿ 81 ರನ್‌ಗಳನ್ನು ಕಲೆ ಹಾಕಿದ್ದರೆ, ಜಾನಿ ಬೈರ್‌ಸ್ಟೋವ್‌ 47 ರನ್‌ಗಳನ್ನು ಸಿಡಿಸಿದ್ದರು. ಸೂರ್ಯಕುಮಾರ್‌ ಯಾದವ್‌ ಕೂಡ 33 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಅವರು ದೀರ್ಘಾವಧಿ ಬ್ಯಾಟ್‌ ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ ತಂಡ 228 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಗುಜರಾತ್‌ ಟೈಟನ್ಸ್‌ ತಂಡ, ಸಾಯಿ ಸುದರ್ಶನ್‌ (80) ಅವರ ಸ್ಪೋಟಕ ಬ್ಯಾಟಿಂಗ್‌ ಹೊರತಾಗಿಯೂ ಸೋಲು ಒಪ್ಪಿಕೊಂಡಿತ್ತು.

IPL 2025: ʻಈ ಒಂದು ಕಾರಣದಿಂದಲೇ ವಿರಾಟ್‌ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!

ವಿಶೇಷ ದಾಖಲೆ ಸೂರ್ಯಕುಮಾರ್‌ ಯಾದವ್‌

ಗುಜರಾತ್‌ ಟೈಟನ್ಸ್‌ ವಿರುದ್ಧ 33 ರನ್‌ಗಳನ್ನು ಕಲೆ ಹಾಕುವ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 15ನೇ ಬಾರಿ ಸೂರ್ಯಕುಮಾರ್‌ ಯಾದವ್‌ 25+ಕ್ಕೂ ಅಧಿಕ ರನ್‌ಗಳಿಸಿದಂತಾಯಿತು. ಇದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿಯಲ್ಲಿ ಅತಿ ಹೆಚ್ಚು ಬಾರಿ 25ಕ್ಕೂ ಹೆಚ್ಚು ರನ್‌ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದೊಡ್ಡ ದಾಖಲೆಯನ್ನು ಸೂರ್ಯಕುಮಾರ್‌ ಯಾದವ್‌ ಬರೆದಿದ್ದಾರೆ.

ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು 25+ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು

ಸೂರ್ಯಕುಮಾರ್‌ ಯಾದವ್‌: 15-ಐಪಿಎಲ್‌ 2025

ಕೇನ್‌ ವಿಲಿಯಮ್ಸನ್‌: 13- ಐಪಿಎಲ್‌ 2025

ಶುಭಮನ್‌ ಗಿಲ್‌: 13 ಐಪಿಎಲ್‌ 2023

MI vs GT: ಗುಜರಾತ್‌ ಟೈಟನ್ಸ್‌ ಕನಸು ಭಗ್ನ, ಎರಡನೇ ಕ್ವಾಲಿಫೈಯರ್‌ಗೆ ಮುಂಬೈ ಇಂಡಿಯನ್ಸ್‌!

ಮುಂಬೈ ಇಂಡಿಯನ್ಸ್‌ ತಂಡ ಈ ಸೀಸನ್‌ನಲ್ಲಿ ಯಶಸ್ವಿಯಾಗಲು ಸೂರ್ಯಕುಮಾರ್‌ ಯಾದವ್‌ ಕೂಡ ಕಾರಣರಾಗಿದ್ದಾರೆ. ಮುಂಬೈ ತಂಡ ಆರಂಭಿಕ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಅನುಭವಿಸಿತ್ತು. ಆದರೆ, ಎರಡನೇ ಅವಧಿಯಲ್ಲಿ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಹಾರ್ದಿಕ್‌ ಪಾಂಡ್ಯ ಬಲವಾಗಿ ಕಮ್‌ಬ್ಯಾಕ್‌ ಮಾಡಿತ್ತು. ಲೀಗ್‌ ಹಂತದಲ್ಲಿ ಆಡಿದ 14 ಪಂದ್ಯಗಳಿಂದ ಮುಂಬೈ ಇಂಡಿಯನ್ಸ್‌ ತಂಡ 8ರಲ್ಲಿ ಗೆಲುವು ಪಡೆದಿತ್ತು. ಸೂರ್ಯಕುಮಾರ್‌ ಯಾದವ್‌ 673 ರನ್‌ಗಳನ್ನು ಕಲೆ ಹಾಕುವ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.