ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

David Warner: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವಾರ್ನರ್‌: ಚಿತ್ರದ ಪೋಸ್ಟರ್ ಬಿಡುಗಡೆ

ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ವಾರ್ನರ್‌, 'ಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ' ಎಂದು ಹೇಳಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನದ ‘ರಾಬಿನ್‌ಹುಡ್‌’ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್‌’ ನಿರ್ಮಿಸುತ್ತಿದೆ. ನಾಯಕನ ಪಾತ್ರದಲ್ಲಿ ನಿತಿನ್‌ ಮತ್ತು ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ನಟಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವಾರ್ನರ್‌: ಚಿತ್ರದ ಪೋಸ್ಟರ್ ಬಿಡುಗಡೆ

Profile Abhilash BC Mar 15, 2025 7:48 PM

ಹೈದರಾಬಾದ್‌: ಐಪಿಎಲ್‌(IPL) ಆಡುವ ಮೂಲಕ ಭಾರತೀಯರಿಗೆ ಚಿರಪರಿಚಿತರಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಎಡಗೈ ಬ್ಯಾಟರ್‌ ಡೇವಿಡ್ ವಾರ್ನರ್‌(David Warner) ಇದೀಗ ತೆಲುಗು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಟಾಲಿವುಡ್‌ ನಟ ನಿತಿನ್ ಅಭಿನಯದ 'ರಾಬಿನ್‌ಹುಡ್‌' ಚಿತ್ರದಲ್ಲಿ(Robinhood) ವಾರ್ನರ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರತಂಡ ವಾರ್ನರ್ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. 'ಇಷ್ಟು ದಿನ ಮೈದಾನದಲ್ಲಿ ಮಿಂಚಿದವರು ಇನ್ನು ಮುಂದೆ ಬೆಳ್ಳಿ ತೆರೆಯ ಮೇಲೆ ಮಿಂಚುವ ಕಾಲ ಬಂದಿದೆ’ ಎಂದು ಚಿತ್ರ ತಂಡ ಬರೆದುಕೊಂಡಿದೆ. ಈ ಸಿನೆಮಾ ಮಾರ್ಚ್‌ 28 ರಂದು ಬಿಡುಗಡೆಗೊಳ್ಳಲಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ವಾರ್ನರ್‌, 'ಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ' ಎಂದು ಹೇಳಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನದ ‘ರಾಬಿನ್‌ಹುಡ್‌’ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್‌’ ನಿರ್ಮಿಸುತ್ತಿದೆ. ನಾಯಕನ ಪಾತ್ರದಲ್ಲಿ ನಿತಿನ್‌ ಮತ್ತು ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ನಟಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.



ಡೇವಿಡ್‌ ವಾರ್ನರ್‌ಗೆ ಹೈದರಾಬಾದ್‌ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಈ ಹಿಂದೆ ಅವರು ಐಪಿಎಲ್‌ನಲ್ಲಿ ಹೈದರಾಬಾದ್‌ ನಾತಕನಾಗಿ ತಂಡಕ್ಕೆ ಕಪ್‌ ಗೆದ್ದಿದ್ದರು. ಅಲ್ಲದೆ ಅಲ್ಲು ಅರ್ಜುನ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು ಈ ಹಿಂದೆ ಪುಷ್ಪ ಸಿನೆಮಾದ ಹಲವು ಡೈಲಾಗ್‌ ಮತ್ತು ಹಾಡಿಗೆ ಹೆಜ್ಜೆ ಹಾಕಿದ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ IPL 2025: ಆರ್‌ಸಿಬಿ ಕ್ಯಾಂಪ್‌ ಸೇರಿದ ಕಿಂಗ್‌ ಕೊಹ್ಲಿ

ವಾರ್ನರ್‌ ಮಕ್ಕಳು ಕೂಡ ತೆಲುಗು ಚಿತ್ರದ ಹಲವು ಹಾಡಿಗೆ ನೃತ್ಯ ಮಾಡಿದ್ದ ವಿಡಿಯೊ ವೈರಲ್‌ ಆಗಿತ್ತು. ಆಟದಲ್ಲಿ ಸೈ ಎನಿಸಿಕೊಂಡಿರುವ ವಾರ್ನರ್‌ ಇದೀಗ ನಟನೆಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ವಾರ್ನರ್‌ಗೆ ಶುಭವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.