ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC ODI Rankings: ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ ರೋಹಿತ್‌; ಕುಸಿತ ಕಂಡ ಕೊಹ್ಲಿ

ಶುಭಮನ್‌ ಗಿಲ್‌(784) ಮತ್ತು ಬಾಬರ್‌ ಅಜಂ(770) ಈ ಹಿಂದಿನಂತೆ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕನ್ನಡಿಗ ಕೆ.ಎಲ್‌ ರಾಹುಲ್‌(638) ಉತ್ತಮ ಪ್ರದರ್ಶನದ ಹೊರತಾಗಿಯೂ ಒಂದು ಸ್ಥಾನ ಕುಸಿದು 16ನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡ್‌ನ ರಚಿನ್‌ ರವೀಂದ್ರ(643) ಬರೋಬ್ಬರಿ 14 ಸ್ಥಾನಗಳ ಜಿಗಿತದೊಂದಿಗೆ 14ನೇ ಸ್ಥಾನ ಸಂಪಾದಿಸಿದ್ದಾರೆ.

ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ ರೋಹಿತ್‌

Profile Abhilash BC Mar 12, 2025 3:08 PM

ದುಬೈ: ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಸಂಭ್ರದಲ್ಲಿರುವ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ ನೂತನ ಐಸಿಸಿ ಶ್ರೇಯಾಂಕದಲ್ಲಿಯೂ(ICC ODI Rankings) ಪ್ರಗತಿ ಸಾಧಿಸಿದ್ದಾರೆ. 2 ಸ್ಥಾನಗಳ ಜಿಗಿತದೊಂದಿದೆ 756 ರೇಟಿಂಗ್‌ ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮ(Rohit Sharma) ನ್ಯೂಜಿಲ್ಯಾಂಡ್‌ ವಿರುದ್ಧ ಫೈನಲ್‌ನಲ್ಲಿ 76 ರನ್‌ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಪ್ರದರ್ಶನ ಅವರ ಶ್ರೇಯಾಂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಯಿತು. ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದ ವಿರಾಟ್‌ ಕೊಹ್ಲಿ(736) (virat kohli) ಒಂದು ಸ್ಥಾನದ ಕುಸಿತದೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಶುಭಮನ್‌ ಗಿಲ್‌(784) ಮತ್ತು ಬಾಬರ್‌ ಅಜಂ(770) ಈ ಹಿಂದಿನಂತೆ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕನ್ನಡಿಗ ಕೆ.ಎಲ್‌ ರಾಹುಲ್‌(638) ಉತ್ತಮ ಪ್ರದರ್ಶನದ ಹೊರತಾಗಿಯೂ ಒಂದು ಸ್ಥಾನ ಕುಸಿದು 16ನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡ್‌ನ ರಚಿನ್‌ ರವೀಂದ್ರ(643) ಬರೋಬ್ಬರಿ 14 ಸ್ಥಾನಗಳ ಜಿಗಿತದೊಂದಿಗೆ 14ನೇ ಸ್ಥಾನ ಸಂಪಾದಿಸಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಕುಲ್‌ದೀಪ್‌ ಯಾದವ್‌ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜಾ ತಲಾ 3 ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ. ಕುಲ್‌ದೀಪ್‌(650) ಮೂರನೇ ಸ್ಥಾನದಲ್ಲಿದ್ದರೆ, ಜಡೇಜಾ(616) ಹತ್ತನೇ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್‌ ಶಮಿ(596) ಎರಡು ಸ್ಥಾನದ ನಷ್ಟದೊಂದಿಗೆ 13ನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ 2027ರ ವಿಶ್ವಕಪ್‌ ಆಡಬೇಕೆಂದ ಯೋಗರಾಜ್‌ ಸಿಂಗ್‌!

ಟಾಪ್‌-5 ಬ್ಯಾಟರ್‌

ಶುಭಮನ್‌ ಗಿಲ್-784‌

ಬಾಬರ್‌ ಅಜಂ-770

ರೋಹಿತ್‌ ಶರ್ಮ-756

ಹೆನ್ರಿಚ್‌ ಕ್ಲಾಸೆನ್‌-744

ವಿರಾಟ್‌ ಕೊಹ್ಲಿ-736

ಟಾಪ್‌-5 ಬೌಲರ್‌

ಮಹೀಶ್‌ ತೀಕ್ಷಣ-680

ಮಿಚೆಲ್‌ ಸ್ಯಾಂಟ್ನರ್‌-657

ಕುಲ್‌ದೀಪ್‌ ಯಾದವ್‌-650

ಕೇಶವ್‌ ಮಹಾರಾಜ್‌-648

ಬರ್ನಾರ್ಡ್ ಸ್ಕೋಲ್ಟ್ಜ್-646