ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಬಾಕ್ಸಿಂಗ್ ಸೇರ್ಪಡೆ; ಥಾಮಸ್ ಬಾಕ್
ಆಡಳಿತ, ಆರ್ಥಿಕ ಅಸ್ಥಿರತೆ ಮತ್ತು ಪ್ರಾಮಾಣಿಕತೆ ಕುರಿತ ಕಳವಳಗಳ ಹಿನ್ನೆಲೆಯಲ್ಲಿ, 2019ರಲ್ಲಿ ರಷ್ಯಾ ನೇತೃತ್ವದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೊಸಿಯೇಶನ್ (ಐಬಿಎ) ಜತೆಗಿನ ಸಂಪರ್ಕಗಳನ್ನು ಐಒಸಿ ಕಡಿದುಕೊಂಡಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ ಮತ್ತು ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್, ಅದಕ್ಕೆ ಮೊದಲು ಅರ್ಹತಾ ಟೂರ್ನಿಗಳನ್ನು ತಾನೇ ನಡೆಸಿತ್ತು.

ಕೋಸ್ಟಾ ನವಾರಿನೊ (ಗ್ರೀಸ್): 2028ರಲ್ಲಿ(2028 olympics) ಲಾಸ್ ಏಂಜಲಿಸ್‌ನಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ನಲ್ಲಿ(Los Angeles 2028 Games) ಬಾಕ್ಸಿಂಗ್(boxing) ಸೇರ್ಪಡೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್(Thomas Bach) ಖಚಿತಪಡಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ನಡೆಸುವ ಕುರಿತಂತೆ ಇದ್ದ ಗೊಂದಲಳಿಗೆ ಈ ಮೂಲಕ ತೆರೆಬಿದ್ದಿದೆ. ಬಾಕ್ಸಿಂಗ್ ಸೇರ್ಪಡೆಗೆ ಐಒಸಿಯ ಪೂರ್ಣ ಅಧಿವೇಶನದಲ್ಲಿ ಅಂಕಿತ ದೊರೆಯಬೇಕಾಗಿದೆ. ಆದರೆ ಇದು ಕೇವಲ ಔಪಚಾರಿಕ ಕ್ರಮ ಎಂದು ನಿರೀಕ್ಷಿಸಲಾಗಿದೆ.
ಹೊಸ ಬಾಕ್ಸಿಂಗ್ ಸಂಸ್ಥೆ ವರ್ಲ್ಡ್ ಬಾಕಿಂಗ್ಸ್‌ಗೆ ಅಂತಾರಾಷ್ಟ್ರೀ ಯ ಒಲಿಂಪಿಕ್ ಸಮಿತಿ ಮಾನ್ಯ ತೆ ನೀಡಿರುವುದರಿಂದ ಈ ನಿಟ್ಟಿ ನಲ್ಲಿದ್ದ ಅಡೆತಡೆಗಳು ನಿವಾರಣೆಯಾಗಿವೆ. ವರ್ಲ್ಡ್ ಬಾಕ್ಸಿಂಗ್‌ಗೆ ಮಾನ್ಯತೆ ನೀಡಲಾಗಿರುವುದರಿಂದ ಐಒಸಿಯ ಕಾರ್ಯಕಾರಿ ಮಂಡಳಿ 2028ರ ಕ್ರೀಡೆಗಳ ಪಟ್ಟಿಯಲ್ಲಿ ಬಾಕ್ಸಿಂಗ್ ಸೇರ್ಪಡೆಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ Olympics in 2036: ಒಲಿಂಪಿಕ್ಸ್ ಆಯೋಜನೆಗೆ ಭಾರತ ಸಿದ್ಧ: ಅಮಿತ್ ಶಾ
ಆಡಳಿತ, ಆರ್ಥಿಕ ಅಸ್ಥಿರತೆ ಮತ್ತು ಪ್ರಾಮಾಣಿಕತೆ ಕುರಿತ ಕಳವಳಗಳ ಹಿನ್ನೆಲೆಯಲ್ಲಿ, 2019ರಲ್ಲಿ ರಷ್ಯಾ ನೇತೃತ್ವದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೊಸಿಯೇಶನ್ (ಐಬಿಎ) ಜತೆಗಿನ ಸಂಪರ್ಕಗಳನ್ನು ಐಒಸಿ ಕಡಿದುಕೊಂಡಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ ಮತ್ತು ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್, ಅದಕ್ಕೆ ಮೊದಲು ಅರ್ಹತಾ ಟೂರ್ನಿಗಳನ್ನು ತಾನೇ ನಡೆಸಿತ್ತು.
ಮಾ. 28ಕ್ಕೆ ಭಾರತ ಬಾಕ್ಸಿಂಗ್ ಒಕ್ಕೂಟದ (ಬಿಎಫ್‌ಐ) ಚುನಾವಣೆ
ಭಾರತ ಬಾಕ್ಸಿಂಗ್ ಒಕ್ಕೂಟದ (ಬಿಎಫ್‌ಐ) ಚುನಾವಣೆ ಮಾ. 28ಕ್ಕೆ ನಡೆಯಲಿದೆ. ಸತತ 3ನೇ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಜಯ್ ಸಿಂಗ್‌ಗೆ ಕಾರ್ಯದರ್ಶಿ ಹೇಮಂತ ಕಲಿತ, ಉಪಾಧ್ಯಕ್ಷ ರಾಜೇಶ್ ಭಂಡಾರಿ ಎದುರಾಳಿಯಾಗಿದ್ದಾರೆ. ಹೇಮಂತ ಕಲಿತ ಅಸ್ಸಾಮ್ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ರಾಜೇಶ್ ಭಂಡಾರಿ ಹಿಮಾಚಲ ಪ್ರದೇಶ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ. ಕೇರಳ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಕಾರ್ಯದರ್ಶಿ ಡಿ. ಚಂದ್ರಲಾಲ್ 4ನೇ ಸ್ಪರ್ಧಿಯಾಗಿದ್ದಾರೆ.