ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಮತಾಂಧ ಮೂರ್ಖರ' ಬಗ್ಗೆ ಚಿಂತಿಸಬೇಡಿ; ಶಮಿಗೆ ಬೆಂಬಲ ಸೂಚಿಸಿದ ಜಾವೇದ್ ಅಖ್ತರ್

India vs New Zealand Final: ಶಮಿ ಸಾಹೇಬ್, ದುಬೈನ ಕ್ರಿಕೆಟ್ ಮೈದಾನದಲ್ಲಿ ಸುಡು ಬಿಸಿಲಿನ ಮಧ್ಯಾಹ್ನದಲ್ಲಿ ನೀರು ಕುಡಿಯದೆ ಇದ್ದರೆ ಹೇಗೆ. ಪ್ರತಿಗಾಮಿ ಮತಾಂಧ ಮೂರ್ಖರಿಗೆ ಹೆದರಬೇಡಿ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡುತ್ತಿರುವ ಶ್ರೇಷ್ಠ ಭಾರತೀಯ ತಂಡದಲ್ಲಿ ನೀವು ಒಬ್ಬರು. ನಿಮಗೆ ಮತ್ತು ನಮ್ಮ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಎಕ್ಸ್ ಪೋಸ್ಟ್‌ ಮಾಡಿದ್ದಾರೆ.

Mohammed Shami: ಶಮಿಗೆ ಬೆಂಬಲ ಸೂಚಿಸಿದ ಜಾವೇದ್ ಅಖ್ತರ್

Profile Abhilash BC Mar 9, 2025 1:05 PM

ಮುಂಬಯಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025)ಯನ್ನಾಡುತ್ತಿರುವ ಭಾರತ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್‌ ಶಮಿ(Mohammed Shami) ಮೈದಾನದಲ್ಲಿ ಜ್ಯೂಸ್‌ ಕುಡಿದ ಕಾರಣಕ್ಕೆ ಅವರ ವಿರುದ್ದ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಕಿಡಿ ಕಾರಿದ್ದರು. ಇಸ್ಲಾಮಿಕ್ ಪವಿತ್ರ ತಿಂಗಳಾದ ರಮ್ಜಾನ್‌ನಲ್ಲಿ ಉಪವಾಸ ಮಾಡದಿರುವ ಶಮಿ ಪಾಪಿ ಎಂದು ಹೇಳಿದ್ದರು. ಇದೀಗ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್(Javed Akhtar) ಅವರು ಶಮಿಗೆ ಬೆಂಬಲ ವ್ಯಕ್ತಪಡಿಸಿ 'ಪ್ರತಿಗಾಮಿ ಮತಾಂಧ ಮೂರ್ಖರ' ಬಗ್ಗೆ ಗಮನ ಹರಿಸಬೇಡಿ, ನೀವು ನಿಮ್ಮ ಕರ್ತವ್ಯ ಮುಂದಿವರೆಸಿ ದೇಶಕ್ಕಾಗಿ ಕಪ್‌ ಗೆಲ್ಲಿ ಎಂದು ಬೆಂಬಲ ಸೂಚಿಸಿದ್ದಾರೆ.

ಶಮಿ ಸಾಹೇಬ್, ದುಬೈನ ಕ್ರಿಕೆಟ್ ಮೈದಾನದಲ್ಲಿ ಸುಡು ಬಿಸಿಲಿನ ಮಧ್ಯಾಹ್ನದಲ್ಲಿ ನೀರು ಕುಡಿಯದೆ ಇದ್ದರೆ ಹೇಗೆ. ಪ್ರತಿಗಾಮಿ ಮತಾಂಧ ಮೂರ್ಖರಿಗೆ ಹೆದರಬೇಡಿ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡುತ್ತಿರುವ ಶ್ರೇಷ್ಠ ಭಾರತೀಯ ತಂಡದಲ್ಲಿ ನೀವು ಒಬ್ಬರು. ನಿಮಗೆ ಮತ್ತು ನಮ್ಮ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಎಕ್ಸ್ ಪೋಸ್ಟ್‌ ಮಾಡಿದ್ದಾರೆ.



ಕಳೆದ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಮೊಹಮ್ಮದ್ ಶಮಿ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ನೀರು ಕುಡಿಯುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಾರಣವಿಷ್ಟೇ ಈ ತಿಂಗಳು ಮುಸ್ಲಿಮರಿಗೆ ರಂಜಾನ್ ಉಪವಾಸ ನಡೆಯುತ್ತಿದೆ. ಉಪವಾಸ ಪಾಲಿಸಿಲ್ಲ ಎಂದು ಅನೇಕರು ಕಿಡಿ ಕಾರಿದ್ದರು. ಕೆಲವು ಶಮಿಗೆ ಮೆಚ್ಚಗೆ ಸೂಚಿಸಿದ್ದರು.

2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶಮಿ ಭಾರತ ತಂಡ ಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 24 ವಿಕೆಟ್‌ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದರು. ಸದ್ಯ ಶಮಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.