Shreyas Iyer: ಆಡುವ ಬಳಗಕ್ಕೆ ಆಯ್ಕೆಯಾದ ರಹಸ್ಯ ಬಿಚ್ಚಿಟ್ಟ ಅಯ್ಯರ್
Shreyas Iyer: ಪಂದ್ಯದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಶ್ರೇಯಸ್ 30 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದರು. ಆದರೆ 36 ಎಸೆತಗಳಲ್ಲಿ 59 ರನ್ ಗಳಿಸಿದ್ದಾಗ ಬೆಥೆಲ್ ಎಸೆತದಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳಿದ್ದವು.
![Shreyas Iyer (5)](https://cdn-vishwavani-prod.hindverse.com/media/images/Shreyas_Iyer_5.max-1280x720.jpg)
![Profile](https://vishwavani.news/static/img/user.png)
ನಾಗ್ಪುರ: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ(India vs England 1st ODI) ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyer) ತಾವು ಆಡುವ ಬಳಗಕ್ಕೆ ಆಯ್ಕೆಯಾದ ಅಚ್ಚರಿಯ ಸಂಗತಿಯನ್ನು ತೆರೆದಿಟ್ಟಿದ್ದಾರೆ. ಸಿನೆಮಾ ನೋಡುತ್ತಿದ್ದ ವೇಳೆ ನಾಯಕ ರೋಹಿತ್ ಶರ್ಮ ದಿಢೀರ್ ಫೋನ್ ಮಾಡಿ ತಂಡಕ್ಕೆ ಆಯ್ಕೆಯಾದ ಬಗ್ಗೆ ತಿಳಿಸಿದರು ಎಂದರು.
ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್, 'ನಾನು ತಂಡದ ಭಾಗವಾಗಿದ್ದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿರಲಿಲ್ಲ. ಹೀಗಾಗಿ ಆರಾಮವಾಗಿ ತಡರಾತ್ರಿ ತನಕ ಸಿನೆಮಾ ನೋಡುತ್ತಿದ್ದೆ. ಇದೇ ವೇಳೆ ರೋಹಿತ್ ಕಾಲ್ ಮಾಡಿ ವಿರಾಟ್ ಕೊಹ್ಲಿ ಅವರ ಮೊಣಕಾಲು ಊದಿಕೊಂಡಿರುವುದರಿಂದ ಬಹುಶಃ ನೀವು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಿದರು. ಇದಾದ ನಂತರ ನನ್ನ ಕೋಣೆಗೆ ಓಡಿದ ನಾನು ತಕ್ಷಣವೇ ನಿದ್ರೆಗೆ ಜಾರಿದೆ' ಎಂದರು.
Picked 🆙
— BCCI (@BCCI) February 6, 2025
..and DISPATCHED Twice 💥💥
Shreyas Iyer gets going in the chase in some style 👌👌
Follow The Match ▶️ https://t.co/lWBc7oPRcd#TeamIndia | #INDvENG | @IDFCFIRSTBank | @ShreyasIyer15 pic.twitter.com/eGsvGSZVSN
ಪಂದ್ಯದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಶ್ರೇಯಸ್ 30 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದರು. ಆದರೆ 36 ಎಸೆತಗಳಲ್ಲಿ 59 ರನ್ ಗಳಿಸಿದ್ದಾಗ ಬೆಥೆಲ್ ಎಸೆತದಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳಿದ್ದವು. ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ 64 ಎಸೆತಗಳಲ್ಲಿ 94 ರನ್‌ಗಳ ಜತೆಯಾಟ ಕೂಡ ನಡೆಸಿದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಯ್ಯರ್ ಅವರ ಈ ಪ್ರದರ್ಶನ ಮಧ್ಯಮ ಕ್ರಮಾಂಕದ ಚಿಂತೆಯನ್ನು ಕಡಿಮೆ ಮಾಡಿದೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ, 47.4 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 249 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ 38.4 ಓವರ್‌ಗಳಿಗೆ 251 ರನ್‌ಗಳನ್ನು ಗಳಿಸಿ ಗೆಲುವಿನ ಗಡಿ ದಾಟಿತು.
ಇದನ್ನೂ ಓದಿ IND vs ENG: ʻದಯವಿಟ್ಟು ನಿವೃತ್ತಿ ಪಡೆಯಿರಿʼ-ರೋಹಿತ್ ಶರ್ಮಾ ವಿರುದ್ದ ಫ್ಯಾನ್ಸ್ ಕಿಡಿ!
ಟೆಸ್ಟ್ ಬಳಿಕ ಏಕದಿನದಲ್ಲೂ ನಾಯಕ ರೋಹಿತ್ ಶರ್ಮಾರ ಕಳಪೆ ಪ್ರದರ್ಶನ ಮುಂದುವರಿಯಿತು. ಅವರು ಕೇವಲ 2 ರನ್ ಗಳಿಸಿ ಪೆವಿಲಿಯನ್ ಮರಳಿದರು. ಯಶಸ್ವಿ ಜೈಸ್ವಾಲ್(15) ಕೂಡಾ ಮಿಂಚಲಿಲ್ಲ.