Rishabh Pant: ಗವಾಸ್ಕರ್ ಹೊಗಳಿಕೆಯ ಮಾತಿಗೆ ಮೌನ ಮುರಿದ ಪಂತ್
ಮೂರನೇ ದಿನದಾಟದಲ್ಲಿ ಅಂಪೈರ್ ತೀರ್ಮಾನವನ್ನು ಕಡೆಗಣಿಸಿ ಅತಿರೇಕದ ವರ್ತನೆ ತೋರಿದ ರಿಷಭ್ ಪಂತ್‌ಗೆ ದಂಡ ವಿಧಿಸುವ ಸಾಧ್ಯತೆ ಇದೆ. ಭಾನುವಾರದ ಮೊದಲ ಅವಧಿಯ ಆಟದಲ್ಲಿ ಚೆಂಡಿನ ಆಕಾರ ಬದಲಾಗಿದೆ ಎಂದು ವಾದಿಸಿ ಚೆಂಡು ಬದಲಿಸುವಂತೆ ಪಂತ್ ಅಂಪೈರ್ ಪಾಲ್ ರೀಫೆಲ್‌ಗೆ ಮನವಿ ಮಾಡಿದರು. ಈ ವೇಳೆ ಚೆಂಡು ಪರೀಕ್ಷಿಸಿದ ಅಂಪೈರ್ ಚೆಂಡು ಸರಿಯಾಗಿದೆ ಎಂದು ಹೇಳಿ ವಿನಂತಿಯನ್ನು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ಪಂತ್ ಚೆಂಡನ್ನು ನೆಲಕ್ಕೆ ಎಸೆದು ತಮ್ಮ ಆಕ್ರೋಶ ಹೊರಹಾಕಿದರು.


ಲೀಡ್ಸ್: ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ವೇಳೆ ಕೆಟ್ಟ ಹೊಡೆತಗಳಿಗೆ ಅನಗತ್ಯವಾಗಿ ವಿಕೆಟ್ ಕೈಚೆಲ್ಲಿದಾಗ ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ಅವರು ರಿಷಭ್ ಪಂತ್‌ಗೆ(Rishabh Pant) ʼಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್ʼ ಎಂದು ಬೈದಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ(IND vs ENG 1st Test) ಪಂತ್ ಶತಕ ಬಾರಿಸಿದ ವೇಳೆ ಗವಾಸ್ಕರ್ ಸೂಪರ್ಬ್, ಸೂಪರ್ಬ್, ಸೂಪರ್ಬ್ ಎಂದು ಶ್ಲಾಘಿಸಿದ್ದರು. ಇದೀಗ ಗವಾಸ್ಕರ್ ಹೊಗಳಿಕೆಗೆ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಮೂರನೇ ದಿನದಾಟ ಭಾನುವಾರದಂದು ಪಂದ್ಯ ಆರಂಭಕ್ಕೂ ಮುನ್ನ ಚೇತೇಶ್ವರ್ ಪೂಜಾರ ಜತೆ ಮಾತನಾಡಿದ ಪಂತ್, "ಮುಖ್ಯವಾಗಿ, ನಾನು ಶಿಸ್ತುಬದ್ಧವಾಗಿರಲು ಕೆಲಸ ಮಾಡಿದ್ದೇನೆ. ಇದು ನನಗೆ ಬಹಳಷ್ಟು ತೃಪ್ತಿಯನ್ನು ನೀಡುತ್ತದೆ. ನಾನು ನನ್ನ ದೌರ್ಬಲ್ಯಗಳ ಮೇಲೆ ಕೆಲಸ ಮಾಡಿದ್ದೇನೆ ಮತ್ತು ಹಿನ್ನಡೆಗಳಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ನನ್ನ ಪುನರಾಗಮನದಲ್ಲಿ ಕೆಲವು ವಿಷಯಗಳನ್ನು ಬದಲಾಯಿಸಲು ನಾನು ಬಯಸಿದ್ದೆ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ" ಎಂದು ಪಂತ್ ಹೇಳಿದರು.
Pant's reaction to Sunny G's '𝙎𝙪𝙥𝙚𝙧𝙗, 𝙎𝙪𝙥𝙚𝙧𝙗, 𝙎𝙪𝙥𝙚𝙧𝙗' comment 💬#SonySportsNetwork #GroundTumharaJeetHamari #ENGvIND #NayaIndia #DhaakadIndia #TeamIndia
— Sony Sports Network (@SonySportsNetwk) June 22, 2025
[England, India, Rishabh Pant] pic.twitter.com/eJKvsXek5a
ದಂಡದ ಭೀತಿಯಲ್ಲಿ ಪಂತ್
ಪಂತ್ ಅವರು ತೋರಿದ ಅತಿರೇಕದ ವರ್ತನೆಯಿಂದ ಇದೀಗ ಅವರು ದಂಡದ ಭೀತಿಗೆ ಸಿಲುಕಿದ್ದಾರೆ. ಮೂರನೇ ದಿನದಾಟದಲ್ಲಿ ಚೆಂಡು 60 ಓವರ್‌ಗಳ ಗಡಿಯನ್ನು ತಲುಪುತ್ತಿದ್ದಂತೆ, ಪಂತ್ ಅವರು ಅಂಪೈರ್ ಪಾಲ್ ರೀಫೆಲ್ ಅವರನ್ನು ಗೇಜ್ ಬಳಸಿ ಆಕಾರವನ್ನು ಪರಿಶೀಲಿಸುವಂತೆ ವಿನಂತಿಸಿದರು. ಅದರಂತೆ ಅಂಪೈರ್ ಗೇಜ್ ಬಳಸಿ ಚೆಂಡನ್ನು ಪರೀಕ್ಷಿಸಿದರು. ಈ ವೇಳೆ ಚೆಂಡು ಯಾವುದೇ ಸಮಸ್ಯೆಯಿಲ್ಲದೆ ಹಾದುಹೋಯಿತು. ಹೀಗಾಗಿ ಅಂಪೈರ್ ವಿನಂತಿಯನ್ನು ನಿರಾಕರಿಸಿದರು. ಪಂತ್ ಅಂಪೈರ್ ಬಳಿ ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿದರು. ಆದರೆ ರೀಫೆಲ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಫೀಲ್ಡಿಂಗ್ ಸ್ಥಾನಕ್ಕೆ ಹಿಂತಿರುಗುವಾಗ ಪಂತ್ ಹತಾಶೆಯಿಂದ ಚೆಂಡನ್ನು ನೆಲಕ್ಕೆ ಎಸೆದರು. ಐಸಿಸಿ ನಿಯಮ ಉಲ್ಲಂಘನೆ ಮಾಡಿದ ಪಂತ್‌ಗೆ ಇದೀಗ ದಂಡದ ಭೀತಿ ಎದುರಾಗಿದೆ.