ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zaheer Khan: 20 ವರ್ಷಗಳ ಬಳಿಕ ಮತ್ತೆ ಜಹೀರ್ ಖಾನ್‌ಗೆ ಅಭಿಮಾನಿಯಿಂದ ಪ್ರೇಮ ನಿವೇದನೆ

ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಈ ಬಾರಿ ರಿಷಭ್‌ ಪಂತ್‌ ಮುನ್ನಡೆಸಲಿದ್ದಾರೆ. ಕಳೆದ ಐಪಿಎಲ್‌(IPL 2025) ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಪಂತ್‌ರನ್ನು ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಖರೀದಿ ಮಾಡಿತ್ತು.

20 ವರ್ಷಗಳ ಬಳಿಕ ಮತ್ತೆ ಜಹೀರ್ ಖಾನ್‌ಗೆ ಅಭಿಮಾನಿಯಿಂದ ಪ್ರೇಮ ನಿವೇದನೆ

Profile Abhilash BC Mar 16, 2025 11:02 AM

ಲಕ್ನೋ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾರ್ಗದರ್ಶಕ ಜಹೀರ್ ಖಾನ್(Zaheer Khan) ಅವರು 20 ವರ್ಷಗಳ ನಂತರ ತಮ್ಮ ಹಳೆಯ ವಿಶೇಷ ಅಭಿಮಾನಿಯನ್ನು ಭೇಟಿಯಾದರು. 2005 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿವಿಎಸ್ ಕಪ್ ಟೆಸ್ಟ್ ಸರಣಿ ಪಂದ್ಯದ ಸಂದರ್ಭದಲ್ಲಿ ಈ ಯುವತಿ 'ಐ ಲವ್ ಯು ಜಹೀರ್'('I love you Zaheer') ಎಂಬ ಪೋಸ್ಟರ್‌ ಹಿಡಿದು ಭಾರೀ ಸುದ್ದಿಯಾಗಿದ್ದರು. ಪಂದ್ಯದ ಬಳಿಕ ಜಹೀರ್‌ ಈ ಅಭಿಮಾನಿಯನ್ನು ಭೇಟಿ ಮಾಡಿದ್ದರು. ಇದೀಗ 20 ವರ್ಷದ ಬಳಿಕ ಇದೇ ಅಭಿಮಾನಿ ಜಹೀರ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ಐಪಿಎಲ್‌ ಭಾಗವಾಗಿ ಜಹೀರ್‌ ಲಕ್ನೋಗೆ ಬಂದ ವೇಳೆ ಈ ಯುವತಿ 'ಐ ಲವ್ ಯು ಜಹೀರ್' ಎಂಬ ಪೋಸ್ಟರ್‌ ಮೂಲಕವೇ ಗ್ರೇಟ್‌ ವೆಲ್‌ಕಮ್‌ ಮಾಡಿದರು. ಯುವತಿಯನ್ನು ಕಂಡು ಜಹೀರ್‌ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾಗದರು. ಈ ಪುನರ್ಮಿಲನದ ವಿಡಿಯೊವನ್ನು(Viral Video) ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಜಹೀರ್ ಖಾನ್, ಎಲ್‌ಎಸ್‌ಜಿ ತಂಡದ ಮಾರ್ಗದರ್ಶಕರಾಗಿ ಮತ್ತು ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಈ ಬಾರಿ ರಿಷಭ್‌ ಪಂತ್‌ ಮುನ್ನಡೆಸಲಿದ್ದಾರೆ. ಕಳೆದ ಐಪಿಎಲ್‌(IPL 2025) ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಪಂತ್‌ರನ್ನು ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಖರೀದಿ ಮಾಡಿತ್ತು. ಕಳೆದ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂತ್‌ ಸಾರಥ್ಯದಲ್ಲಿ ಡೆಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು ಮತ್ತು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. 2021ರಲ್ಲಿ ಪಂತ್‌ ನಾಯಕತ್ವದಲ್ಲಿ ಡೆಲ್ಲಿ ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು.

ಇದನ್ನೂ ಓದಿ IPL 2025: ಪಾಂಡ್ಯಗೆ ನಿಷೇಧ ಶಿಕ್ಷೆ; ಮೊದಲ ಪಂದ್ಯದಲ್ಲಿ ಮುಂಬೈಗೆ ನಾಯಕ ಯಾರು?

ಲಕ್ನೋ ತಂಡ

ನಿಕೋಲಸ್‌ ಪೂರನ್‌, ಮಯಾಂಕ್‌ ಯಾದವ್‌, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್‌, ಆಯುಷ್‌ ಬದೋನಿ, ರಿಷಭ್​ ಪಂತ್​, ಆವೇಶ್​ ಖಾನ್, ಡೇವಿಡ್​ ಮಿಲ್ಲರ್, ಮಿಚೆಲ್​ ಮಾರ್ಷ್​, ಏಡನ್​ ಮಾರ್ಕ್ರಮ್​, ಅಬ್ದುಲ್​ ಸಮದ್​, ಆರ್ಯನ್​ ಜುಯಲ್. ಆಕಾಶ್​ದೀಪ್​ , ಶಾಬಾಜ್​ ಅಹ್ಮದ್​ , ಹಿಮ್ಮತ್​ ಸಿಂಗ್​, ಎಂ. ಸಿದ್ಧಾರ್ಥ್​, ದಿಗ್ವೇಷ್​ ಸಿಂಗ್​, ಆಕಾಶ್​ ಸಿಂಗ್​, ಶಮರ್​ ಜೋಸೆಫ್​, ಪ್ರಿನ್ಸ್​ ಯಾದವ್​, ಯುವರಾಜ್​ ಚೌಧರಿ, ರಾಜ್ಯವರ್ಧನ್​ ಹಂಗರ್ಗೆಕರ್​, ಅರ್ಷಿನ್​ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್​ಜ್ಕೆ.