ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಮಹಾನಟಿ ಸೀಸನ್ 2 ಆಡಿಷನ್ ಇದೇ ಶನಿವಾರ ಶಿರಸಿಯಲ್ಲಿ

ಮಹಾನಟಿ ಸೀಸನ್ 2 ಆಡಿಷನ್ ಇದೇ ಶನಿವಾರ ಶಿರಸಿಯಲ್ಲಿ

ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಸರಿಗಮಪ, ಮಹಾನಟಿ ಸೀಸನ್-1 ಮೂಲಕ ಈಗಾಗಲೆ ಸಾಕಷ್ಟು ನಟ ನಟಿ ಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ನ ನಿಮಗಾಗಿ ಹೊತ್ತು ತರುತ್ತಿದೆ.

ನೇಹಾ ಹಿರೇಮಠ ಹತ್ಯೆಯಾಗಿ 1 ವರ್ಷ:  ಶ್ರೀರಾಮ ಸೇನೆಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ

ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ

ನೇಹಾ ಹಿರೇಮಠ ಹತ್ಯೆಗೆ ಏಪ್ರಿಲ್ 18ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನೇಹಾ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ, ಶ್ರೀರಾಮ ಸೇನೆ ವತಿಯಿಂದ ಹುಬ್ಬಳ್ಳಿಯ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಶಿವಕೃಷ್ಣ ಮಂದಿರದಲ್ಲಿ ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಲಾಯಿತು.

KCET Answer Key 2025: ಸಿಇಟಿ 2025 ಕೀ ಉತ್ತರ ಪ್ರಕಟ; ಹೀಗೆ ಚೆಕ್‌ ಮಾಡಿ

ಸಿಇಟಿ 2025 ಕೀ ಉತ್ತರ ಪ್ರಕಟ; ಹೀಗೆ ಚೆಕ್‌ ಮಾಡಿ

KCET Answer Key 2025: ಏ.16 ಮತ್ತು 17ರಂದು ನಡೆದ ಸಿಇಟಿ 2025ರ ನಾಲ್ಕು ವಿಷಯಗಳ 16 ವರ್ಷನ್ ಗಳ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಅಭ್ಯರ್ಥಿಗಳು ಏ.22ರೊಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು.

Caste Census: ಜಾತಿ ಸಮೀಕ್ಷೆ ಅವೈಜ್ಞಾನಿಕ; ವರದಿ ತಿರಸ್ಕಾರಕ್ಕೆ ಹವ್ಯಕ ಮಹಾಸಭಾ ಆಗ್ರಹ

ಜಾತಿ ಸಮೀಕ್ಷೆ ಅವೈಜ್ಞಾನಿಕ; ವರದಿ ತಿರಸ್ಕಾರಕ್ಕೆ ಹವ್ಯಕ ಮಹಾಸಭಾ ಆಗ್ರಹ

Caste Census: ಹವ್ಯಕ ಬ್ರಾಹ್ಮಣರ ಜನಸಂಖ್ಯೆ ಕೇವಲ 85 ಸಾವಿರ ಎಂದು ಜಾತಿ ಸಮೀಕ್ಷೆಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಹಲವಾರು ವರದಿಯ ಮೂಲಕ ಮಹಾಸಭೆಯ ಗಮನಕ್ಕೆ ಬಂದಿದೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯು ಈ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸುತ್ತದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.

CET 2025: ಶಿವಮೊಗ್ಗದಲ್ಲಿ ಜನಿವಾರ ವಿವಾದಕ್ಕೆ ಟ್ವಿಸ್ಟ್‌; ಅಧಿಕಾರಿ ವಿರುದ್ಧ ಕಂಪ್ಲೇಂಟ್‌, ಈವರೆಗೆ ಏನೇನು ಬೆಳವಣಿಗೆ ಆಗಿದೆ?

ಶಿವಮೊಗ್ಗದಲ್ಲಿ ಜನಿವಾರ ವಿವಾದ; ಅಧಿಕಾರಿ ವಿರುದ್ಧ ಕಂಪ್ಲೇಂಟ್‌

CET 2025: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ವೇಳೇ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ತೆಗೆಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬ್ರಾಹ್ಮಣ ಮಹಾಸಭಾದ ಪ್ರಮುಖರು ಮನವಿ ಸಲ್ಲಿಸಿದರು. ಹೀಗಾಗಿ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪಡೆದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

CET 2025: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಅಧಿಕಾರಿ ಸಸ್ಪೆಂಡ್

ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಅಧಿಕಾರಿ ಸಸ್ಪೆಂಡ್

CET 2025: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಬಲವಂತದಿಂದ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ, ಅಧಿಕಾರಿಗಳು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಧಿಕಾರಿ ಅಮಾನತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದ್ದಾರೆ.

DK Shivakumar: ಮಡಿವಾಳ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ಮಡಿವಾಳ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

DK Shivakumar: ಮಡಿವಾಳ ಸಮುದಾಯ ಸದಾ ನಮ್ಮ ಬೆಂಬಲಕ್ಕೆ ನಿಂತಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Missing case: ಮುತ್ಯಾನ ಮಾತು ನಂಬಿ ಮಹಿಳೆಯನ್ನು ಹುಡುಕುತ್ತಾ ಸಿದ್ಧಗಂಗಾ ಮಠಕ್ಕೆ ಬಂದ ಕುಟುಂಬ!

ಮಹಿಳೆಯನ್ನು ಹುಡುಕುತ್ತಾ ಸಿದ್ಧಗಂಗಾ ಮಠಕ್ಕೆ ಬಂದ ಕುಟುಂಬ

Missing case: ಗಂಡ ಮತ್ತೊಂದು ಮದುವೆಯಾಗಿದ್ದರಿಂದ ಮನನೊಂದು ಮಹಿಳೆ ಮನೆ ಬಿಟ್ಟು ಹೋಗಿದ್ದಳು. ಮಗಳನ್ನು ಹುಡುಕಿಕೊಡುವಂತೆ ತಾಯಿ ದೂರು ನೀಡಿದ್ದರು. ಈ ನಡುವೆ ರಾಯಚೂರಿನ ಮುತ್ಯಾ, ನಿಮ್ಮ ಮಗಳು ಸಿದ್ಧಗಂಗಾ ಮಠದಲ್ಲಿದ್ದಾಳೆ ಎಂದು ಹೇಳಿದ ಹಿನ್ನೆಲೆಯಲ್ಲಿ ಮಗಳನ್ನು ಹುಡುಕುತ್ತಾ ತುಮಕೂರಿನ ಕುಟುಂಬ ಆಗಮಿಸಿದೆ.

Karnataka Weather: ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

Karnataka Rain: ಕಲಬುರಗಿಯಲ್ಲಿ ಗುರುವಾರ ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ 40.6 ಡಿ.ಸೆ ದಾಖಲಾಗಿದೆ. ಇನ್ನು ಏ.19ರಂದು ಶನಿವಾರ ಕೂಡ ಭಾರಿ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ‌ ರಾಜ್ಯದ ದಕ್ಷಿಣ ಒಳನಾಡಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

Self Harming: ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ನೇಣಿಗೆ ಶರಣು!

ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ವಿಡಿಯೋ ಮಾಡಿ ನೇಣಿಗೆ ಶರಣು!

Self Harming: ಆನೇಕಲ್‌ನ ಎಸ್‌ವಿಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Physical Abuse: ಲೈಂಗಿಕ ಕಿರುಕುಳ; ಮರ್ಮಾಂಗ ತೋರಿಸಿದ ಯುವಕ ಸೇರಿ ಇಬ್ಬರು ವಿಕೃತರ ಬಂಧನ

ಲೈಂಗಿಕ ಕಿರುಕುಳ; ಮರ್ಮಾಂಗ ತೋರಿಸಿದ ಯುವಕ ಸೇರಿ ಇಬ್ಬರು ವಿಕೃತರ ಬಂಧನ

ಬೆಂಗಳೂರಿನ ಪುಲಕೇಶಿ ನಗರದಲ್ಲಿ ಅಪರಿಚಿತ ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ಆಟೋ ಚಾಲಕನನ್ನು ಹಾಗೂ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ.‌ ಇಬ್ಬರನ್ನೂ ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಿಸಲಾಗುತ್ತಿದೆ.

Anjana Arjun: ವಿದೇಶಿ ಹುಡುಗನ ಜತೆ ಸಪ್ತಪದಿ ತುಳಿಯಲು ಅರ್ಜುನ್ ಸರ್ಜಾ ಪುತ್ರಿ ಸಜ್ಜು; ಇಲ್ಲಿವೆ ಭಾವಿ ದಂಪತಿಯ ಫೋಟೋಸ್‌

ವಿದೇಶಿ ಹುಡುಗನ ಜತೆ ಸಪ್ತಪದಿ ತುಳಿಯಲು ಅರ್ಜುನ್ ಸರ್ಜಾ ಪುತ್ರಿ ಸಜ್ಜು

Anjana Arjun: ನಟ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ಎಂಗೇಜ್ ಆಗಿದ್ದಾರೆ. ಅರ್ಜುನ್ ಸರ್ಜಾ ದಂಪತಿಯೂ ಉಂಗುರ ಬದಲಿಸುವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಭಾವಿ ದಂಪತಿಯ ಫೋಟೋಸ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

CET 2025: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಬೇಕೆಂಬ ನಿಯಮ ಇಲ್ಲ: ಕೆಇಎ ಸ್ಪಷ್ಟನೆ

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಬೇಕೆಂಬ ನಿಯಮ ಇಲ್ಲ: ಕೆಇಎ ಸ್ಪಷ್ಟನೆ

CET 2025: ಬೀದರ್‌ ಹಾಗೂ ಶಿವಮೊಗ್ಗದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಜನಿವಾರ ಧರಿಸಿದ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೀಗಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಪರೀಕ್ಷೆ ಮಾರ್ಗಸೂಚಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Caste Census Report: ಮುಸ್ಲಿಮರಲ್ಲಿ 99 ಜಾತಿ, ಕ್ರೈಸ್ತರಲ್ಲಿ 57 ಜಾತಿ: ಜಾತಿ ಗಣತಿ ವರದಿಯಲ್ಲಿ ಬಯಲು

ಮುಸ್ಲಿಮರಲ್ಲಿ 99 ಜಾತಿ, ಕ್ರೈಸ್ತರಲ್ಲಿ 57 ಜಾತಿ: ಜಾತಿ ಗಣತಿಯಲ್ಲಿ ಬಯಲು

ಮುಸ್ಲಿಮರಲ್ಲಿ ಹಾಗೂ ಕ್ರೈಸ್ತರಲ್ಲಿ ಎಷ್ಟು ಉಪ ಜಾತಿಗಳು ಇವೆ ಎಂಬ ವಿಚಾರವನ್ನೂ ಜಾತಿ ಗಣತಿ ವರದಿಯಲ್ಲಿ (Caste census report) ಉಲ್ಲೇಖ ಮಾಡಲಾಗಿದೆ. ಇದರ ಪ್ರಕಾರ ಮುಸ್ಲಿಮರಲ್ಲಿ ಬರೋಬ್ಬರಿ 99 ಜಾತಿಗಳಿವೆ ಎನ್ನೋದು ಗೊತ್ತಾಗಿದೆ. ಹಾಗೆಯೇ ಕ್ರೈಸ್ತರಲ್ಲೂ 57 ಜಾತಿಗಳಿವೆ ಅಂತ ವರದಿಯಲ್ಲಿ ಹೇಳಲಾಗಿದೆ.

CET Exam: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಬಿಚ್ಚಿಸಿದ ಅಧಿಕಾರಿಗಳು: ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕಟ್‌: ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಈ ರೀತಿ ನಿರ್ದೇಶನ ಕೊಡುವ ಅಧಿಕಾರ ಯಾರಿಗೂ ಇಲ್ಲ. ಅಲ್ಲದೆ ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ಸಂಬಂಧಪಟ್ಟ ಇಲಾಖೆ ಜೊತೆಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತದೆ. ನನ್ನ ಇಲಾಖೆ ಇಲ್ಲ ಅಂದರೂ ಕೂಡ ಸಂಬಂಧಪಟ್ಟ ಇಲಾಖೆಗೆ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಆಗಿರುವುದರಿಂದ ಕಠಿಣವಾದ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದೇನೆ ಎಂದರು.

ಆಧುನಿಕ ಚಿಕಿತ್ಸೆಯೊಂದಿಗೆ 63 ವರ್ಷದ ವೃದ್ಧನ ಜೀವ ರಕ್ಷಿಸಿದ ಕೆಎಂಸಿ ವೈದ್ಯರು

ಆಧುನಿಕ ಚಿಕಿತ್ಸೆ: 63 ವರ್ಷದ ವೃದ್ಧನ ಜೀವ ರಕ್ಷಿಸಿದ ಕೆಎಂಸಿ ವೈದ್ಯರು

ಆರ್ಬಿಟಲ್‌ ಅಥೆರೆಕ್ಟಮಿ ವಿಧಾನ ಅನುಸರಿ ಸಿರುವುದು ಕ್ಲಿಷ್ಟಕರ ಹೃದಯ ಸಂಬಂಧಿ ಸಮಸ್ಯೆಯನ್ನು ಗುಣಪಡಿಸುವ ನಮ್ಮ ಸಾಮರ್ಥ್ಯದ ಎತ್ತರವನ್ನು ಬಿಂಬಿಸುತ್ತದೆ. ಈ ಆಧುನಿಕ ವಿಧಾನ ಅನೇಕ ಕ್ಯಾಲ್ಶಿಯಮ್‌ ಬ್ಲಾಕೇಜ್‌ನಂತಹ ಸಮಸ್ಯೆಯನ್ನು ಯಶಸ್ವಿಯಾಗಿ ಗುಣಪಡಿಸಿ, ರೋಗಿಯ ಜೀವನದ ಗುಣಮಟ್ಟವನ್ನು ಎತ್ತರಿಸಲು ನೆರವಾಗಿದೆ.

Viral video: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಪೊಲೀಸರಿಂದ ಲಾಕ್‌

ಬೆಂಗಳೂರಿನ ರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಈಗ ಲಾಕ್‌

ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿಯ ರಸ್ತೆಯಲ್ಲಿ ಮಾರ್ಗ ಮಧ್ಯದಲ್ಲಿಯೇ ಈ ವ್ಯಕ್ತಿ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದ. ಅದನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದು, ಅದು ವೈರಲ್‌ ಆಗಿತ್ತು. ಪೊಲೀಸರು ಇದನ್ನು ಗಮನಿಸಿದ್ದರು.

Gold Price Today: ಚಿನ್ನದ ದರ ಮತ್ತೆ ಗಗನಮುಖಿ- ಇಂದಿನ ರೇಟ್‌ ಇಷ್ಟಿದೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 18th April 2025: ಬೆಂಗಳೂರಿನಲ್ಲಿ ಶುಕ್ರವಾರ (ಏ. 18) 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗಿ 8,945 ರೂ.ಗೆ ತಲುಪಿದೆ. ಇತ್ತ 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಹೆಚ್ಚಾಗಿದ್ದ, ಪ್ರಸ್ತುತ 9,758 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,560 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,450 ರೂ. ಮತ್ತು 100 ಗ್ರಾಂಗೆ 8,94,500 ರೂ. ನೀಡಬೇಕಾಗುತ್ತದೆ.

Drowned: ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರಿಬ್ಬರ ಸಾವು

ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರಿಬ್ಬರ ಸಾವು

ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ವೃಂದಾವನ ದರ್ಶನಕ್ಕೆ ಬೆಂಗಳೂರಿನಿಂದ 15 ಜನ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಮುತ್ತುರಾಜ್ ಮತ್ತು ಮದನ್ ನದಿಯಲ್ಲಿ ಈಜಲು ತೆರಳಿದ್ದಾರೆ. ನದಿಯಲ್ಲಿ ತಗ್ಗು ಪ್ರದೇಶದಲ್ಲಿ ಸಿಲುಕಿ ಒದ್ದಾಡಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Self Harming: ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ

ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ವಿಡಿಯೊ ಮಾಡಿ ಆತ್ಮಹತ್ಯೆ

ಫೇಸ್ಬುಕ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಾ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನೇಕಲ್ ಪಟ್ಟಣದ ಎಸ್‌ವಿಎಂ ಸ್ಕೂಲ್ ಬಳಿ ಈ ಘಟನೆ ನಡೆದಿದೆ. ಸಾವಿಗೆ ಕಾರಣರಾದವರ ಹೆಸರುಗಳನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿರುವ ಪ್ರವೀಣ್, ಇವರುಗಳಿಗೆ ಶಿಕ್ಷೆ ಆಗಬೇಕು ಎಂದು ಕೋರಿದ್ದಾರೆ.

Bengaluru Traffic Alert: ಇಂದು ಐಪಿಎಲ್‌ ಪಂದ್ಯದ ಕಾರಣ ಸಂಚಾರ ಬದಲಾವಣೆ; ಬೆಂಗಳೂರಿಗರು ಗಮನಿಸಿ

ಇಂದು ಆರ್‌ಸಿಬಿ ಪಂದ್ಯದ ಕಾರಣ ಸಂಚಾರ ಬದಲಾವಣೆ; ಬೆಂಗಳೂರಿಗರು ಗಮನಿಸಿ

RCB vs PBKS: ಪಂದ್ಯವನ್ನು ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೇವೆ ಒದಗಿಸಿದೆ. ಜತೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೂಡ ಎಲ್ಲ ನಾಲ್ಕು ಮೆಟ್ರೊ ಟರ್ಮಿನಲ್‌ಗಳಿಂದ ಕೊನೆಯ ಮೆಟ್ರೊ ರೈಲು ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಿಸಿದೆ.

Road Accident: ಭೀಕರ ಅಪಘಾತ, ರಸ್ತೆ ತಡೆಗೋಡೆಗೆ ಪಿಕಪ್‌ ಡಿಕ್ಕಿಯಾಗಿ ನಾಲ್ವರು ಸಾವು

ಭೀಕರ ಅಪಘಾತ, ರಸ್ತೆ ತಡೆಗೋಡೆಗೆ ಪಿಕಪ್‌ ಡಿಕ್ಕಿಯಾಗಿ ನಾಲ್ವರು ಸಾವು

ಮೃತಪಟ್ಟ ನಾಲ್ವರು ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ಗೂಡ್ಸ್ ಪಿಕಪ್ ವಾಹನ ಚಾಲಕ ಆನಂದ್‌ಗೆ ಗಂಭೀರವಾದ ಗಾಯಗಳಾಗಿವೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುರಿ ಖರೀದಿಸಲು ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Waqf Bill: ವಕ್ಫ್‌ ಕಾಯಿದೆ ತಿದ್ದುಪಡಿ ವಿರೋಧಿಸಿ ಇಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ, ಸಂಚಾರ ಮಾರ್ಗ ಬದಲು

ವಕ್ಫ್‌ ತಿದ್ದುಪಡಿ ವಿರೋಧಿಸಿ ಇಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಪ್ರತಿಭಟನೆ ವೇಳೆ ರಸ್ತೆ ಸಂಚಾರ ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್​ಹೆಚ್ 73 ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ. ಸರ್ಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಸರ್ಕಾರ ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ವಿಚಾರಣೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

CET Exam: ಸಿಇಟಿ ಪರೀಕ್ಷೆಗೆ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು, ಖಂಡನೆ

ಸಿಇಟಿ ಪರೀಕ್ಷೆಗೆ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು, ಖಂಡನೆ

ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿಪ್ರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.